ಮಾರುಕಟ್ಟೆಗೆ ಕಾಲಿಟ್ಟ ಅತೀ ಕಡಿಮೆ ಬೆಲೆಯ ವೈರ್‌ಲೈಸ್ ಚಾರ್ಜರ್

ಮಾರುಕಟ್ಟೆಗೆ ಅತೀ ವೇಗದ ಚಾರ್ಜರ್ ಅನ್ನು ಪರಿಚಯ ಮಾಡಿದ್ದ ಚೀನಾ ಮೂಲದ ರಿಯಲ್ ಮಿ ಕಂಪನಿ, ಸದ್ದಿಲ್ಲದೆ  ವೈರ್‌ಲೆಸ್ ಚಾರ್ಜರ್ ವೊಂದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಿದೆ.

10W ವೈರ್‌ಲೆಸ್ ಚಾರ್ಜರ್ ಬಿಡುಗಡೆ ಮಾಡಿರುವ ರಿಯಲ್ ಮಿ, ಫೋನ್‌ಗಳು ಮತ್ತು ಧರಿಸಬಹುದಾದ ವಸ್ತುಗಳನ್ನು ಚಾರ್ಜ್ ಮಾಡಲು ಸಹಾಯವಾಗುವಂತೆ ಇದನ್ನು  ವಿನ್ಯಾಸಗೊಳಿಸಿದೆ.

ಇದಲ್ಲದೇ ಶೀಘ್ರವೇ ಮಾರುಕಟ್ಟೆಗೆ 65W ಮತ್ತು 50W ರಿಯಲ್ ಮಿ ಅಲ್ಟ್ರಾ- ಸ್ಲಿಮ್ ಸೂಪರ್ ಡಾರ್ಟ್ ಚಾರ್ಜರ್ ಗಳನ್ನು ಲಾಂಚ್ ಮಾಡಲು ಸಿದ್ಧತೆ ನಡೆಸುತ್ತಿರುವುದಾಗಿಯೂ ಕಂಪನಿ ತಿಳಿಸಿದೆ.

ಇದನ್ನು ಓದಿ: ಮಕ್ಕಳ ಆನ್‌ಲೈನ್‌ ಕ್ಲಾಸಿಗೆ ಬೆಸ್ಟ್: ರೂ.12,999ಕ್ಕೆ ಐಬಾಲ್ ಟೆಚ್‌ಸ್ಕ್ರಿನ್ ಲಾಪ್‌ಟಾಪ್‌

ರಿಯಲ್ ಮಿ ಇಂಡಿಯಾ ಸೈಟ್‌ನಲ್ಲಿ 10W ವೈರ್‌ಲೆಸ್ ಚಾರ್ಜರ್ ಗ್ರೇ ಕಲರ್ ಆಯ್ಕೆಯಲ್ಲಿ ಲಭ್ಯವಿದೆ. ಇದು ಸಾಫ್ಟ್ ಸ್ಕ್ರಬ್ ಪೇಂಟ್ ಲೇಪನವನ್ನು ಹೊಂದಿದ್ದು ಅದು ಆಕಸ್ಮಿಕ ಬಿಳುವುದರಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ರಿಯಲ್ ಮಿ 10W ವೈರ್‌ಲೆಸ್ ಚಾರ್ಜರ್ USB ಟೈಪ್-C ಪೋರ್ಟ್‌ನೊಂದಿಗೆ ಕಾಣಿಸಿಕೊಳ್ಳಲಿದ್ದು, ಅದು 10W ಮತ್ತು 18W ಇನ್ಪುಟ್ ಎರಡನ್ನೂ ಶಕ್ತಗೊಳಿಸುತ್ತದೆ.

ಆದಾಗ್ಯೂ, ಕ್ವಿಕ್ ಚಾರ್ಜ್ 2.0 ಅಥವಾ ಕ್ವಿಕ್ ಚಾರ್ಜ್ 3.0 ಚಾರ್ಜಿಂಗ್ ಅಡಾಪ್ಟರ್‌ನೊಂದಿಗೆ ಸಂಪರ್ಕಗೊಂಡಾಗ ಇದು 10W ವರೆಗೆ ಶಕ್ತಿಯನ್ನು ತಲುಪಿಸುವ ಸಾಮರ್ಥ್ಯ ಹೊಂದಿದೆ. ಐಫೋನ್ ಮಾದರಿಯನ್ನು ಚಾರ್ಜ್ ಮಾಡಲು ಇದು 7.5W ವರೆಗಿನ ಔಟ್‌ಪುಟ್ ಅನ್ನು ಸಹ ಒದಗಿಸುತ್ತದೆ.

ಸ್ಮಾರ್ಟ್ ಫೋನ್ ಮಾತ್ರವಲ್ಲದೇ, 10W ವೈರ್ಲೆಸ್ ಚಾರ್ಜರ್ ಕಡಿಮೆ-ಶಕ್ತಿಯ ಸಾಧನಗಳನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸಾಧನವು 50cm ಚಾರ್ಜರ್ ಕೇಬಲ್ನೊಂದಿಗೆ ದೊರೆಯಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.