ರಿಯಲ್‌ ಮಿ ಹೊಸ ಫೋನ್: ಭಾರತದಲ್ಲಿ ದರ ಸಮರಕ್ಕೆ ನಿಂತ ಚೀನಾ ಕಂಪನಿಗಳು…!

ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಪಾಲನ್ನು ಕಸಿದುಕೊಳ್ಳಲು ಬಹು ಯತ್ನಗಳನ್ನು ಮಾಡುತ್ತಿರುವ ಚೀನಾ ಮೂಲದ ಮತ್ತೊಂದು ಸ್ಮಾರ್ಟ್‌ಫೋನ್ ತಯಾರಕ ರಿಯಲ್‌ ಮಿ, ಮಾರುಕಟ್ಟೆಗೆ ಹೊಸದೊಂದು ಫೋನ್ ಲಾಂಚ್ ಮಾಡಿದೆ. ಬಜೆಟ್ ಸ್ನೇಹಿ ವಿಭಾಗದಲ್ಲಿ ರಿಯಲ್‌ಮಿ 6i ಸ್ಮಾರ್ಟ್‌ಫೋನ್‌ ಹೆಚ್ಚಿನ ನಿರೀಕ್ಷೆಯನ್ನು ಮೂಡಿಸಿದೆ.

ಆಕ್ಟಾ ಕೋರ್ ಪ್ರೋಸೆಸರ್, ಕ್ವಾಡ್ ಕ್ಯಾಮೆರಾ ಮತ್ತು ಪಿಂಚ್ ಹೋಲ್ ಡಿಸ್‌ಪ್ಲೇಯನ್ನು ಹೊಂದಿರುವ ರಿಯಲ್‌ಮಿ 6i ಸ್ಮಾರ್ಟ್‌ಫೋನ್‌ ಎರಡು ಆವೃತ್ತಿಯಲ್ಲಿ ದೊರೆಯಲಿದ್ದು, ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಮಾಡಲಿದೆ.

ರಿಯಲ್‌ಮಿ 6i ಸ್ಮಾರ್ಟ್‌ಫೋನ್‌ ಬೆಲೆ:

  • 4GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಆವೃತ್ತಿ ರೂ. 12,999ಕ್ಕೆ
  • 6GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಆವೃತ್ತಿ ರೂ. 14,999ಕ್ಕೆ ಮಾರಾಟವಾಗಲಿದೆ.

ರಿಯಲ್ ಮಿ 6i ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ, ಅವುಗಳೆಂದರೆ ಎಕ್ಲಿಪ್ಸ್ ಬ್ಲ್ಯಾಕ್ ಮತ್ತು ಲೂನಾರ್ ವೈಟ್. ಇದು ಜುಲೈ 31 ರಂದು ಮಧ್ಯಾಹ್ನ 12 ಗಂಟೆಗೆ (ಮಧ್ಯಾಹ್ನ) ಫ್ಲಿಪ್‌ಕಾರ್ಟ್ ಮತ್ತು ರಿಯಲ್ ಮಿ ಇಂಡಿಯಾ ವೆಬ್‌ಸೈಟ್ ಮೂಲಕ ಮಾರಾಟವನ್ನು ಆರಂಭಿಸಲಿದೆ.

ರಿಯಲ್ ಮಿ 6i ವಿಶೇಷತೆ:

ಡ್ಯುಯಲ್-ಸಿಮ್ (ನ್ಯಾನೊ) ಹಾಕಬಹುದಾದ ರಿಯಲ್‌ ಮಿ 6i, ಆಂಡ್ರಾಯ್ಡ್ 10 ನಲ್ಲಿ ಕಾರ್ಯನಿರ್ಹಿಸಲಿದ್ದು, ಇದರೊಂದಿಗೆ ರಿಯಾಲ್ ಮಿ UI ಸಹ ಇದೆ. ಇದು 90 Hz ರಿಫ್ರೆಶ್ ದರವನ್ನು ಹೊಂದಿರುವ 6.5-ಇಂಚಿನ FHD+ (1,080×2,400 ಪಿಕ್ಸೆಲ್‌) ಪರದೆಯನ್ನು ಹೊಂದಿದೆ. ಅಲ್ಲದೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನೂ ನೀಡಲಾಗಿದೆ.

ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ G 90 T SoC ದಲ್ಲಿ ಕಾರ್ಯನಿರ್ವಹಿಸಲಿದ್ದು,  6GB ವರೆಗಿನ LPDDR4x ಡ್ಯುಯಲ್-ಚಾನೆಲ್ RAM ಅನ್ನು ಹೊಂದಿದೆ.

ರಿಯಲ್ ಮಿ 6i ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದರಲ್ಲಿ F / 1.8 ಲೆನ್ಸ್ ಹೊಂದಿರುವ 48 ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ, F / 2.3 ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಹೊಂದಿರುವ 8 ಮೆಗಾಪಿಕ್ಸೆಲ್ ಸಂವೇದಕ, 2 ಮೆಗಾಪಿಕ್ಸೆಲ್ F / 2.4 ಪೋರ್ಟ್ರೇಟ್ ಲೆನ್ಸ್ ಹೊಂದಿರುವ ಸಂವೇದಕ, ಮತ್ತು ಅಂತಿಮವಾಗಿ F / 2.4 ಮ್ಯಾಕ್ರೋ ಲೆನ್ಸ್ ಹೊಂದಿರುವ 2 ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ.

ಸೆಲ್ಫಿಗಳಿಗಾಗಿ F / 2.0 ಲೆನ್ಸ್ ಹೊಂದಿರುವ 16 ಮೆಗಾಪಿಕ್ಸೆಲ್ ಸಂವೇದಕವನ್ನು ನೀಡಲಾಗಿದೆ. ಮುಂಭಾಗದ ಕ್ಯಾಮೆರಾ ಪೋರ್ಟ್ರೇಟ್ ಮೋಡ್, ಟೈಮ್-ಲ್ಯಾಪ್ಸ್, ಪನೋರಮಿಕ್ ವ್ಯೂ, ಎಐ ಬ್ಯೂಟಿ, ಎಚ್‌ಡಿಆರ್, ಫೇಸ್-ರೆಕಗ್ನಿಷನ್, ಫಿಲ್ಟರ್ ಮತ್ತು ಬೊಕೆ ಎಫೆಕ್ಟ್ ಕಂಟ್ರೋಲ್ ಅನ್ನು ಬೆಂಬಲಿಸುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.