ಇನ್ನೇನು ಹೊಸ ವರ್ಷದ ಸ್ವಾಗತಕ್ಕೆ ಜಗತ್ತು ಸಿದ್ದವಾಗುತ್ತಿದೆ. 2022 ಮುಗಿಯುತ್ತಿದೆ. ಈ ವರ್ಷ ಪೂರ್ತಿ ನೀವು ಯೂಟ್ಯೂಬ್ ಮ್ಯೂಸಿಕ್ನಲ್ಲಿ ಯಾವ ಹಾಡುಗಳನ್ನು ಅತಿ ಹೆಚ್ಚು ಕೇಳಿದಿರಿ? ತಿಳಿಯಬೇಕಾ?

ಹೊಸ ವರ್ಷದ ಸ್ವಾಗತಕ್ಕೆ ಸಜ್ಜಾಗುತ್ತಿರುವಾಗಲೇ, ವರ್ಷದ ಮೆಲುಕು ಹಾಕುವ ಕೆಲಸವೂ ಶುರುವಾಗುತ್ತದೆ. ಯೂಟ್ಯೂಬ್ ಮ್ಯೂಸಿಕ್ ನಿಮ್ಮ ನೆನಪುಗಳನ್ನು ಸವಿಸವಿಯಾಗಿಸುವುದಕ್ಕೆ ಹೊಸ ಫೀಚರ್ ಪರಿಚಯಿಸುತ್ತಿದೆ. ಅದೇ ‘ಯುವರ್ ರೀಕ್ಯಾಪ್’.
ಇಡೀ ವರ್ಷ ನೀವು ಯಾವ ಯಾವ ಹಾಡುಗಳನ್ನು ಕೇಳಿದಿರ? ಯಾವ ಗಾಯಕನ ಹಾಡುಗಳನ್ನ ಕೇಳಿದಿರಿ ಅನ್ನೋದನ್ನ ಪಟ್ಟಿ ಮಾಡಿಕೊಡುತ್ತಿದೆ. ಈ ಟಾಪ್ ಹಾಡುಗಳನ್ನ ಪ್ಲೇ ಲಿಸ್ಟನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು. ಹೇಗೆ?
- ಮೊದಲು ಯೂಟ್ಯೂಬ್ ಮ್ಯೂಸಿಕ್ ಆಪ್ಗೆ ಹೋಗಿ, ಬಲ ಮೇಲ್ಭಾಗದಲ್ಲಿರುವ ನಿಮ್ಮ ಪ್ರೊಪೈಲ್ ಆಯ್ಕೆ ಮಾಡಿಕೊಳ್ಳಿ.

2. ನಿಮ್ಮ ಅಕೌಂಟ್ ಪೇಜ್ ಓಪನ್ ಮಾಡಿ, ಅಲ್ಲಿರುವ ಪಟ್ಟಿಯಲ್ಲಿ ಹಿಸ್ಟರಿಯ ಕೆಳಗೆ ಇರುವ ‘ಯುವರ್ ರೀಕ್ಯಾಪ್” ಮೇಲೆ ಕ್ಲಿಕ್ ಮಾಡಿ

3. ಆಗ ಯೂಟ್ಯೂಬ್ ಮ್ಯೂಸಿಕ್ 2022 ಪೇಜ್ ತೆರೆದುಕೊಳ್ಳುತ್ತಿದೆ. ಅಲ್ಲಿರುವ ‘ವಾಚ್ ನೌ’ ಬಟನ್ ಒತ್ತಿ.

4.ನೀವು ಕೇಳಿದ ಟಾಪ್ ಸಾಂಗ್ಗಳು, ಟಾಪ್ ಸಿಂಗರ್ಗಳು ಇತ್ಯಾದಿ ಸ್ಲೈಡ್ ರೂಪದಲ್ಲಿ ತೆರೆದುಕೊಳ್ಳುತ್ತದೆ.

ಈ ಪಟ್ಟಿಯನ್ನು ನೀವು ಶೇರ್ ಮಾಡಿಕೊಳ್ಳುವುದಕ್ಕೂ ಅವಕಾಶವಿದೆ.