Redmi Note 10 Pro 5G ಸ್ಮಾರ್ಟ್ ಫೋನ್ ಬಿಡುಗಡೆ; ಏನಿದರ ವೈಶಿಷ್ಟ್ಯತೆ? ಇಲ್ಲಿದೆ ಮಾಹಿತಿ

ಮಧ್ಯಮವರ್ಗದ ಜನರಿಗೂ ಉತ್ತಮ ಗುಣಮಟ್ಟದ ಸ್ಮಾರ್ಟ್ ಫೋನ್’ಗಳನ್ನು ಖರೀದಿಸುವ ಅವಕಾಶ ಮಾಡಿಕೊಟ್ಟಂತಹ ಶಯೋಮಿ ಕಂಪನಿಯು ಹೊಸ ಮಾದರಿಯ ಫೋನ್ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಮಧ್ಯಮವರ್ಗದ ಜನರಿಗೂ ಉತ್ತಮ ಗುಣಮಟ್ಟದ ಸ್ಮಾರ್ಟ್ ಫೋನ್’ಗಳನ್ನು ಖರೀದಿಸುವ ಅವಕಾಶ ಮಾಡಿಕೊಟ್ಟಂತಹ ಶಯೋಮಿ ಕಂಪನಿಯು ಹೊಸ ಮಾದರಿಯ ಫೋನ್ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬುಧವಾರದಂದು ಶಯೋಮಿಯ Redmi Note 10 Pro 5G ಮೊಬೈಲ್ ಬಿಡುಗಡೆಯಾಗಿದೆ.

ಕೆಲವು ತಿಂಗಳ ಹಿಂದೆ ಭಾರತದಲ್ಲಿ ಬಿಡುಗಡೆಯಾಗಿದ್ದ Redmi Note 10 Proನ ಸರಣಿಗಿಂತಲೂ ಈ ಫೋನ್ ವಿಭಿನ್ನವಾಗಿದೆ. 5G ಮಾದರಿಯು MediaTek Dimensity 1100 SoC ಎಂಬ ವಿನೂತನ ಮಾದರಿಯ ಪ್ರೊಸೆಸರ್ ಈ ಫೋನ್’ನಲ್ಲಿ ಇರಲಿದೆ. ಇದರೊಂದಗೆ 67W ಚಾರ್ಜಿಂಗ್ ವೇಗವೂ ಇರಲಿದೆ. 4G ಮಾದರಿಯ ಫೋನ್’ಗಳಲ್ಲಿ Snapdragon 732G SoC ಪ್ರೊಸೆಸರ್ ಮತ್ತು 33W ವೇಗದ ಚಾರ್ಜಿಂಗ್ ಮಾತ್ರ ಲಭ್ಯವಿತ್ತು.

Redmi Note 10 Pro 5G ಬೆಲೆ:
Redmi Note 10 Pro 5G ಸರಣಿಯ 6 GB RAM + 128 GB ಸ್ಟೋರೇಜ್ ಮಾದರಿಯ ಫೋನ್ ಗಳಿಗೆ 1,599 (ಅಂದಾಜು ರೂ. 18,200) ಚೈನೀಸ್ ಯುವಾನ್ ಬೆಲೆ ನಿಗದಿಪಡಿಸಲಾಗಿದೆ. 8 GB RAM + 128 GBಗೆ 1,799 ಚೈನೀಸ್ ಯುವಾನ್ (ಅಂದಾಜು ರೂ. 20,500 ಮತ್ತು 8 GB RAM + 256 GB ಮಾದರಿಯ ಫೋನಗೆ 1,999 ಚೈನೀಸ್ ಯುವಾನ್ ಅಂದರೆ ಅಂದಾಜು ರೂ. 22,800 ನಿಗದಿಪಡಿಸಲಾಗಿದೆ.

ಮೂರು ಆಕರ್ಷಕ ಬಣ್ಣಗಳಲ್ಲಿ ಈ ಫೋನ್ ಲಭ್ಯವಿದೆ. Magic Green, Star Yarn ಮತ್ತು Moon Soul ಬಣ್ಣಗಳು ಫೋನ್ ಕಡೆಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುವ ಸಾಧ್ಯತೆಗಳಿವೆ. ಇದರೊಂದಿಗೆ, ಈ ಫೋನ್ಅನ್ನು ಮುಂಗಡವಾಗಿ ಆರ್ಡರ್ ಮಾಡಲು ಬಯಸಿದವರಿಗೆ ಸುಮಾರು ೧,೧೦೦ ರೂ.ಗಳ ವಿನಾಯಿತಿಯೂ ದೊರೆಯಲಿದೆ ಎಂದು ಕಂಪನಿ ತಿಳಿಸಿದೆ.

Redmi Note 10 Pro 5G

ಏನಿದರ ವೈಶಿಷ್ಟ್ಯತೆಗಳು?

ಆಂಡ್ರಾಯ್ಡ್ 11 ಮಾದರಿಯ ಈ ಫೋನ್ಗಳ ಡಿಸ್ಪ್ಲೇ 6.6 ಇಂಚು ಇರಲಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಹೊಂದಿರುತ್ತದೆ. 256 ಜಿಬಿ ವರೆಗಿನ ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಈ ಫೋನ್’ಗಳ ಪ್ರೊಸೆಸರ್ ಇದರ ನಿಜವಾದ ವೈಶಿಷ್ಟ್ಯತೆ. ಈವರೆಗೆ ಸ್ಮಾರ್ಟ್ ಆಂಡ್ರಾಯ್ಡ್ ಫೋನ್್ಗಳ ಇತಿಹಾಸದಲ್ಲಿ ಮೊದಲ ಬಾರಿಗೆ MediaTek Dimensity 1100 SoC ಪ್ರೊಸೆಸರ್ ಬಳಸಲಾಗಿದೆ.

ಇನ್ನು ಕ್ಯಾಮೆರಾದ ವಿಚಾರಕ್ಕೆ ಬಂದರೆ, ಹಿಂದುಗಡೆ ಮೂರು ಕ್ಯಾಮೆರಾಗಳು ಲಭ್ಯವಿದೆ. 120 ಡಿಗ್ರಿ ನೋಟವನ್ನು ನೀಡುವ 64 ಮೆಗಾಪಿಕ್ಸೆಲ್್ನ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಕ್ಯಾಮೆರಾ ಸೇರಿದಂತೆ, 2 ಮೆಗಾಪಿಕ್ಸೆಲ್ ಸಾಮರ್ಥ್ಯದ ಮ್ಯಾಕ್ರೊ ಲೆನ್ಸ್ ಕೂಡಾ ಈ ಫೋನ್’ನಲ್ಲಿ ಇರಲಿದೆ. ಇದರೊಂದಿಗೆ 16 ಮೆಗಾಪಿಕ್ಸೆಲ್್ನ ಮುಂಭಾಗದ ಕ್ಯಾಮೆರಾ ಸುಂದರ ಸೆಲ್ಫಿ ಹಾಗೂ ಗ್ರೂಪಿಗಳಿಗೆ ಸಹಕಾರಿಯಾಗಲಿದೆ.

5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿರುವ ಈ ಫೋನ್್ಗಳು ಅತೀ ವೇಗದಲ್ಲಿ ಚಾರ್ಜ್ ಆಗಲಿವೆ. 67W ಚಾರ್ಜಿಂಗ್ ವೇಗ ಇದನ್ನು ಇತರೆ ಫೋನ್’ಗಳಿಗಿಂತಲೂ ಭಿನ್ನವಾಗಿಸಲಿದೆ. ಇವೆಲ್ಲದರೊಂದಿಗೆ WiFi 6, Bluetooth v5.2, USB type C-Port, NFC, 3.5mm Audio Jack ಸೇರಿದಂತೆ ಇನ್ನು ಹತ್ತು ಹಲವು ವಿಶೇಷತೆಗಳನ್ನು ಕೂಡಿದ ಫೋನ್ ಶೀಘ್ರದಲ್ಲಿಯೇ ಲಭ್ಯವಾಗಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.