ಭಾರತದಲ್ಲಿ ತಯಾರಾದ ಚೀನಾ ಫೋನ್ ‘ರೆಡ್‌ಮಿ ನೋಟ್ 9’: ಕೊಟ್ಟ ಕಾಸಿಗೆ ಲಾಸ್ ಅಂತೂ ಇಲ್ಲ..!

ಫೋನ್‌ ಕಂಪನಿಗಳು ನಿಧಾನವಾಗಿ ಕರೋನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿವೆ. ಶಿಯೋಮಿಯ ಕೈಗೆಟುಕುವ ದರದ ಫೋನ್‌ಗಳು ಮಾರುಕಟ್ಟೆಗೆ ಬರಲಾರಂಭಿಸಿವೆ. ರೆಡ್‌ ಮಿ ನೋಟ್‌ 9 ಮಾರುಕಟ್ಟೆ ಇನ್ನು ನಾಲ್ಕು ದಿನಗಳಲ್ಲಿ ಬರಲಿದೆ. ಏನಿದೆ ವಿಶೇಷ, ಮುಂದೆ ಓದಿ

ಭಾರತೀಯ ಮಾರುಕಟ್ಟೆಯಲ್ಲಿ ಶಿಯೋಮಿ ಬಿಡುಗಡೆ ಮಾಡುವ ‘ರೆಡ್‌ಮಿ ನೋಟ್’ ಸರಣಿಯ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿವೆ. ಈ ಹಿನ್ನಲೆಯಲ್ಲಿ ಕಂಪನಿಯೂ ನೋಟ್‌ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಕಾಲ ಕಾಲಕ್ಕೆ ಆಪ್‌ಡೇಟ್‌ ಮಾಡಿ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಲೇ ಬಂದಿದೆ. ಈ ಮಾದರಿಯಲ್ಲಿ ಹೊಸದಾಗಿ ಮಾರುಕಟ್ಟೆಗೆ ನಾಲ್ಕು ಕ್ಯಾಮೆರಾಗಳನ್ನು ಹೊಂದಿರುವ ರೆಡ್‌ಮಿ ನೋಟ್ 9 ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿದೆ.

ರೆಡ್‌ಮಿ ನೋಟ್ ಸರಣಿಯು ಮಾರುಕಟ್ಟೆಯಲ್ಲಿ ಆಫೋರ್ಡಬಲ್ ಸ್ಮಾರ್ಟ್‌ಫೋನ್‌ಗಳು ಎನ್ನಿಸಿಕೊಂಡಿದ್ದು, ಹೊಸದಾಗಿ ಲಾಂಚ್ ಆದ ರೆಡ್‌ಮಿ ನೋಟ್ 9 ಸರಣಿಯಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳು ಕಾಣಿಸಿಕೊಂಡಿವೆ – ರೆಡ್‌ಮಿ ನೋಟ್ 9, ರೆಡ್‌ಮಿ ನೋಟ್ 9 ಪ್ರೋ ಮತ್ತು ರೆಡ್‌ಮಿ ನೋಟ್ 9 ಪ್ರೋ ಮ್ಯಾಕ್ಸ್‌ ಮಾದರಿಯಲ್ಲಿ ಮಾರಾಟವಾಗಲಿದೆ.

ರೆಡ್‌ಮಿ ನೋಟ್ 9 ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ನೊಂದಿಗೆ ಮುಂಭಾಗದಲ್ಲಿ ಪಿಂಚ್ ಹೋಲ್ ವಿನ್ಯಾಸವನ್ನು ಹೊಂದಿದೆ. ಜೊತೆಗೆ ರಿವರ್ಸ್ ಚಾರ್ಜಿಂಗ್ ಬೆಂಬಲ ಮತ್ತು ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳ ಬಳಕೆ ಮಾಡಬಹುದಾಗಿದೆ.

ಭಾರತದಲ್ಲಿ ರೆಡ್‌ಮಿ ನೋಟ್ 9 ವಿವಿಧ ಬೆಲೆಗಳಲ್ಲಿ ಮಾರಾಟವಾಗಲಿದೆ.

  • 4 GB RAM + 64 GB  ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಆವೃತ್ತಿಯೂ ರೂ. 11,999ಕ್ಕೆ  
  • 4 GB RAM + 128 GB  ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಆವೃತ್ತಿಯೂ ರೂ. 13,499ಕ್ಕೆ
  • 6 GB RAM + 128 GB  ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಆವೃತ್ತಿಯೂ ರೂ. 14,499ಕ್ಕೆ ದೊರೆಯಲಿದೆ.

ರೆಡ್‌ಮಿ ನೋಟ್ 9 ಸ್ಮಾರ್ಟ್‌ಫೋನ್ ಆಕ್ವಾ ಗ್ರೀನ್, ಆರ್ಕ್ಟಿಕ್ ವೈಟ್ ಮತ್ತು ಪೆಬ್ಬಲ್ ಗ್ರೇ ಎಂಬ ಮೂರು ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ರೆಡ್ಮಿ ನೋಟ್ 9 ದೇಶದಲ್ಲಿ ಜುಲೈ 24 ಶುಕ್ರವಾರ ಮಧ್ಯಾಹ್ನ 12 ರಿಂದ ಅಮೆಜಾನ್, ಮಿ.ಕಾಮ್ ಮತ್ತು ಮಿ ಹೋಮ್ ಮಳಿಗೆಗಳ ಮೂಲಕ ಮಾರಾಟ ಆರಂಭಿಸಲಿದೆ.

ಡ್ಯುಯಲ್-ಸಿಮ್ (ನ್ಯಾನೋ) ಹಾಕಿಕೊಳ್ಳಬಹುದಾದ ರೆಡ್‌ಮಿ ನೋಟ್ 9 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 10 ನಲ್ಲಿ MIUI 11 ರೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು 6.53-ಇಂಚಿನ FHD+ (1,080×2,340 ಪಿಕ್ಸೆಲ್‌ಗಳು) ಡಾಟ್ ಡಿಸ್ಪ್ಲೇ ವಿನ್ಯಾಸದಲ್ಲಿ 19.5: 9 ಅನುಪಾತವನ್ನು ಹೊಂದಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ.

ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ G85 SoC ಜೊತೆಗೆ 6GB ವರೆಗಿನ LPDDR4x RAM ಅನ್ನು ಹೊಂದಿದೆ. ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಇದೆ, 48 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ಐಸೊಸೆಲ್ ಬ್ರೈಟ್ GM1  ಪ್ರೈಮರಿ ಸೆನ್ಸರ್‌ನೊಂದಿಗೆ, ಅಲ್ಟ್ರಾ-ವೈಡ್-ಆಂಗಲ್ 8 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್, ಮ್ಯಾಕ್ರೋ ಲೆನ್ಸ್ ಹೊಂದಿರುವ 2 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ. ಇದಲ್ಲದೇ ಸೆಲ್ಫಿಗಾಗಿ ಮುಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.

ರೆಡ್‌ಮಿ ನೋಟ್ 9 ನಲ್ಲಿ ಶಿಯೋಮಿ 128 GB ವರೆಗೂ ಇಂಟರ್ನಲ್ ಮೆಮೊರಿಯನ್ನು ನೀಡದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ (512 ಜಿಬಿ ವರೆಗೆ) ಮೀಸಲಾದ ಸ್ಲಾಟ್ ಮೂಲಕ ವಿಸ್ತರಿಸಬಹುದಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4 ಜಿ VoLTE, ವೈ-ಫೈ , ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.