ರೆನೊ ವರ್ಸಸ್‌ ಸುಝುಕಿ| ಎಸ್ಸ್ ಪ್ರೆಸ್ಸೋ ಬೆನ್ನಿಗೆ ಬರುತಿದೆ ಹೊಸ ಕ್ವಿಡ್

ರೆನೊ ಮತ್ತು ಸುಝುಕಿ ಈಗ ಗ್ರಾಹಕರನ್ನು ಸೆಳೆಯುವುದಕ್ಕೆ ಸ್ಪರ್ಧೆಗೆ ಇಳಿದಿದ್ದಾರೆ. ನವನವೀನ ಮಾದರಿಯ ಕಾರುಗಳನ್ನು, ಹೊಸ ತಂತ್ರಜ್ಞಾನದೊಂದಿಗೆ ಪರಿಚಯಿಸುತ್ತಿರುವ ಈ ಎರಡೂ ಕಂಪನಿಗಳು ಒಂದರ ಹಿಂದೆ ಒಂದು ಹೊಸ ಕಾರನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ

ರೆನೋ ಕ್ವಿಡ್‌ನ ಮೊದಲ ನವೀಕೃತ ಆವೃತ್ತಿ ಸುಝುಕಿ ಎಸ್ ಪ್ರೆಸ್ಸೋ ಬೆನ್ನಿಗೇ ಬಿಡುಗಡೆಯಾಗಿದೆ. ₹2.83 ಲಕ್ಷಗಳ ಶೋರೂಮ್ ಬೆಲೆಯೊಂದಿಗೆ ಆರಂಭವಾಗುವ ಹೊಸ ಕ್ವಿಡ್ ಚೈನಾ ಮಾರುಕಟ್ಟೆಗೆ ರೆನೋ ಇದೇ ವರ್ಷ ಬಿಡುಗಡೆ ಮಾಡಿದ ಇಲೆಕ್ಟ್ರಿಕ್ ಕಾರು ಸಿಟಿ ಕೆ-ಝೀ ಇ ಹೋಲುವಂತೆ ಮುಂಭಾಗ ಸಂಪೂರ್ಣ ಹೊಸ ವಿನ್ಯಾಸ ಹೊಂದಿದೆ. ಇತ್ತೀಚಿನ ಎಸ್‌ಯುವಿಗಳಾದ ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್‌ನಲ್ಲಿ‌ ಇರುವಂತೆ ಎಲ್ಇಡಿ ಡಿಆರ್‌ಎಲ್ ಮೇಲ್ಭಾಗದಲ್ಲಿದ್ದು ಬಂಪರ್‌ನ ಮಧ್ಯಭಾಗದಲ್ಲಿ ಹೆಡ್ ಲೈಟ್ ಇದೆ. 

ಸ್ಟಾಂಡರ್ಡ್, ಆರ್‌ಎಕ್ಸ್‌ಇ, ಆರ್‌ಎಕ್ಸ್‌ಎಲ್, ಆರ್‌ಎಕ್ಸ್‌ಟಿ ಹಾಗೂ ಕ್ಲೈಂಬರ್ ಎಂಬ ಐದು ಶ್ರೇಣಿಗಳಲ್ಲಿ ದೊರೆಯುವ ಕ್ವಿಡ್ 54 ಬಿಎಚ್‌ಪಿ ಉತ್ಪಾದಿಸುವ 800 ಸಿಸಿ ಹಾಗೂ 68 ಬಿಎಚ್‌ಪಿ ಶಕ್ತಿ ಸಾಮರ್ಥ್ಯದ 1000 ಸಿಸಿ ಇಂಜಿನ್‌ಗಳ ನಡುವೆ ಆಯ್ಕೆ ನೀಡಿದೆ. ಜತೆಗೆ ಎಎಂಟಿ ಆಯ್ಕೆಯೂ ಇದೆ. 

ಉಳಿದಂತೆ ಟ್ರೈಬರ್‌ನಲ್ಲಿರುವ 8 ಇಂಚಿನ ದೊಡ್ಡ ಇನ್ಫೋಟೇನ್ಮೆಂಟ್ ಸಿಸ್ಟಂ ಈಗ ಕ್ವಿಡ್‌ನಲ್ಲಿ ಸೇರಿಕೊಂಡಿದೆ. ಆ್ಯಪಲ್ ಕಾರ್ ಪ್ಲೇ, ಆ್ಯಂಡ್ರಾಯ್ಡ್ ಆಟೋ, ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ವಾರ್ನಿಂಗ್, ಏರ್ ಬ್ಯಾಗ್, ಸ್ಪೀಡ್ ಅಲರ್ಟ್‌ನಂಥ ಕಡ್ಡಾಯ ವ್ಯವಸ್ಥೆಗಳು, ಹಾಗೆಯೇ ಬಿಎಸ್ 6 ಎಂಜಿನ್ ಹೊಂದಿದೆ. ಹೊಸ ಕ್ವಿಡ್ ನಾಲ್ಕು ವರ್ಷ ಅಥವಾ ಒಂದು ಲಕ್ಷ ಕಿ.ಮೀ‌‌ ನ ವಾರೆಂಟಿ ಹೊಂದಿದೆ ಎಂದು ರೆನೋ ತಿಳಿಸಿದೆ.

%d bloggers like this: