ಸದ್ದು ಮಾಡುತ್ತಿದೆ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಎಸ್

ಇತ್ತೀಚೆಗಷ್ಟೇ ಬುಲೆಟ್ ಸ್ಟಾಂಡರ್ಡ್‌ನ ಅಗ್ಗದ ಅವತರಣಿಕೆ 350 ಎಕ್ಸ್ ಬಿಡುಗಡೆ ಮಾಡಿದ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350ಯ ಅಗ್ಗದ ಅವತರಣಿಕೆ ಕ್ಲಾಸಿಕ್ 350ಎಸ್ ಎಂಬ ಹೊಸ ಬೈಕನ್ನು ಮಾರುಕಟ್ಟೆಗಿಳಿಸಿದೆ.

₹1.45 ಲಕ್ಷದ ಶೋರೂಮ್ ಬೆಲೆ ಹೊಂದಿರುವ 350ಎಸ್ ಸದ್ಯಕ್ಕೆ ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲಿ ಮಾತ್ರ ಲಭ್ಯವಾಗಿದೆ ಎನ್ನಲಾಗಿದೆ. ಕಪ್ಪು ಹಾಗೂ ಬೆಳ್ಳಿ ಬಣ್ಣಗಳೆಡರಲ್ಲಿ ಮಾತ್ರ ಲಭ್ಯವಿರುವ 350 ಎಸ್ ಸಿಂಗಲ್ ಚಾನಲ್ ಎಬಿಎಸ್ ಹೊಂದಿದ್ದು ಕ್ರೋಮ್ ಇದ್ದಲ್ಲೆಲ್ಲ ಕಪ್ಪು ಬಣ್ಣ ಬಳಸಲಾಗಿದೆ, ಹಾಗಾಗಿ ಡ್ಯುಯಲ್ ಚಾನಲ್ ಎಬಿಎಸ್ ಉಳ್ಳ ಕ್ಲಾಸಿಕ್ 350ಗಿಂತ ಅಂದಾಜು ₹10 ಸಾವಿರ ಅಗ್ಗಕ್ಕೆ ದೊರಕುತ್ತದೆ.

ಇನ್ನುಳಿದಂತೆ 346ಸಿಸಿ ಟ್ವಿನ್ ಸ್ಪಾರ್ಕ್ ಎಂಜಿನ್ ಯಥಾಪ್ರಕಾರ 28 ಎನ್‌ಎಂ ಟಾರ್ಕ್ನೊಂದಿಗೆ 19.8ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ. ಒಟ್ಟಾರೆ ವಾಹನೋದ್ಯಮದ ಪ್ರಗತಿ ಕುಂಠಿತವಾಗಿರುವ ಈ ಸಂದರ್ಭದಲ್ಲಿ ರಾಯಲ್ ಎನ್ಫೀಲ್ಡ್ ತನ್ನ ಹಾಲಿ ಬೈಕ್‌ಗಳನ್ನೇ ಗ್ರಾಹಕರ ಪಾಲಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಿಸಲು ಹವಣಿಸುತ್ತಿರುವ ಪ್ರಯತ್ನ ಸ್ಪಷ್ಟವಾಗಿ ಕಾಣಿಸುತ್ತಿದೆ.

%d bloggers like this: