ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫೋಲ್ಡ್‌ ಬಿಡುಗಡೆ |ಬೆಲೆ 1,64,999 ರೂ!

ಸ್ಯಾಮ್‌ಸಂಗ್‌ ಫೋಲ್ಡಬಲ್‌ ಫೋನ್‌ ಸದ್ದು ಮಾಡಿ ಬಹಳ ದಿನಗಳಾಗಿತ್ತು. ಭಾರತಕ್ಕೆ ಬಂದಿರಲಿಲ್ಲ. ಈಗ ಭಾರತದಲ್ಲೂ ಬಿಡುಗಡೆಯಾಗಿದ್ದು ಸದ್ಯದಲ್ಲೇ ಗ್ರಾಹಕರಿಗೆ ಲಭ್ಯವಾಗಲಿದೆ. ಅತಿ ದುಬಾರಿ ಫೋನ್‌ ಎನಿಸಿಕೊಂಡಿರುವ ಗ್ಯಾಲಕ್ಸಿ ಫೋಲ್ಡ್‌ನ ವಿಶೇಷವೇನು?

ಕಳೆದ ತಿಂಗಳು ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಯಾಗಿ, ಗ್ರಾಹಕರಿಗೆ ಲಭ್ಯವಾದ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫೋಲ್ಡ್‌ ಭಾರತದಲ್ಲೂ ಬಿಡುಗಡೆಯಾಗಿದೆ. ಅಕ್ಟೋಬರ್‌ 4ರಿಂದ ಪ್ರಿ ಆರ್ಡರ್‌ ಆರಂಭವಾಗುತ್ತಿದ್ದು, ಅಕ್ಟೋಬರ್‌ 20ರ ನಂತರ ಶಿಪ್ಪಿಂಗ್‌ ಆರಂಭವಾಗಲಿದೆ.

ಐಫೋನ್‌ಗೆ ಸಡ್ಡು ಹೊಡೆಯುವಂತಿರುವ ಬೆಲೆಯೇ ಈಗ ಗ್ಯಾಲಕ್ಸಿ ಫೋಲ್ಡ್‌ನ ಆಕರ್ಷಣೆ. ಅಮೆರಿಕದಲ್ಲಿ 1.37 ಲಕ್ಷ ರೂ, ಯುರೋಪಿನಲ್ಲಿ ಸುಮಾರು 1,55,788 ರೂ ಇರುವ ಈ ಫೋನ್‌ ಭಾರತದಲ್ಲಿ 1,64,999 ರೂ!

ಬಿಡಿಸಿದರೆ ಒಟ್ಟು 7.3 ಇಂಚ್‌ ಡಿಸ್‌ಪ್ಲೇ ಇರುವ ಈ ಫೋನ್‌ 2152×153 ಪಿಕ್ಸೆಲ್‌ ರೆಸಲ್ಯೂಷನ್‌ ಹೊಂದಿದೆ.. ಹೊರ ಭಾಗದಲ್ಲಿ 4.6 ಇಂಚ್‌ ಡಿಸ್‌ಪ್ಲೇ ಒಳಗೊಂಡಿದೆ. 64 ಬಿಟ್‌ ಆಕ್ಟಾ ಪ್ರೊಸೆಸರ್‌ ಇದ್ದು 12 ಜಿಬಿ ರ್ಯಾಮ್‌ ಮತ್ತು 512 ಮೆಮೊರಿಯೊಂದಿಗೆ ಲಭ್ಯವಾಗುತ್ತಿದೆ.

ಇನ್ನು 16 ಮೆಗಾ ಪಿಕ್ಸೆಲ್‌ ಅಲ್ಟ್ರಾ ವೈಡ್‌ ಕ್ಯಾಮೆರಾ, 12 ಮೆಗಾ ಪಿಕ್ಸೆಲ್‌ ವೈಡ್‌ ಆಂಗಲ್‌ ಕ್ಯಾಮೆರಾ, ಜೊತೆಗೆ ಸೂಪರ್‌ ಡ್ಯುಯಲ್‌ ಪಿಕ್ಸೆಲ್‌, 12 ಮೆಗಾ ಪಿಕ್ಸೆಲ್‌ ಟೆಲಿಫೋಟೋ ಕ್ಯಾಮೆರಾ ಒಳಗೊಂಡಿದೆ. 10 ಮೆಗಾ ಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಹೊರಭಾಗದಲ್ಲಿದ್ದು, 10 ಮತ್ತು 8 ಮೆಗಾ ಪಿಕ್ಸೆಲ್‌ ಕ್ಯಾಮೆರಾಗಳು ಫೋನ್‌ ಬಿಡಿಸಿದಾಗ ಕಾಣಿಸುತ್ತವೆ.

4380 ಎಂಎಎಚ್‌ ಬ್ಯಾಟರಿ ಇದ್ದು ವೇಗವಾಗಿ ವೈರ್‌ ಮತ್ತು ವೈರ್‌ ಲೆಸ್‌ ವಿಧಾನದಲ್ಲಿ ಚಾರ್ಜ್‌ ಮಾಡಬಹುದು. ಒಂದು ಇಸಿಮ್‌ ಮತ್ತು ನ್ಯಾನೊ ಸಿಮ್‌ಗೆ ಅವಕಾಶವಿದ್ದು, ಸಿ ಟೈಪ್‌ ಯುಎಸ್‌ಬಿಯನ್ನು ಹೊಂದಿದೆ.