ಸ್ಮಾರ್ಟ್ ಫೋನ್‌ಗಳ ಸ್ಪರ್ಧೆಯಲ್ಲಿ ಸ್ಯಾಮ್‌ಸಂಗ್‌ನದ್ದು ಭಾರಿ ಸಂಘರ್ಷ ಎದುರಿಸುತ್ತಿದೆ. ಈಗ ಗ್ಯಾಲೆಕ್ಸಿ ನೋಟ್ 10 ಮೂಲಕ ತನ್ನ ಹೆಗ್ಗಳಿಕೆಯನ್ನು ಮರುಸ್ಥಾಪಿಸುವ ಉತ್ಸಾಹ. ನಿನ್ನೆ ಮಧ್ಯರಾತ್ರಿ (ಭಾರತೀಯ ಕಾಲಮಾನ) ಬಿಡುಗಡೆಯಾಗಿರುವ ಈ ಫೋನಿನಲ್ಲಿ ಏನಿದೆ? ಏನಿಲ್ಲ?
- ಟೆಕ್‌ಕನ್ನಡ ಡೆಸ್ಕ್

ಸ್ಯಾಮ್‌ಸಂಗ್‌ನ ಗ್ಯಾಲೆಕ್ಸಿ ನೋಟ್ 10 ಮತ್ತು ಗ್ಯಾಲೆಕ್ಸಿ ನೋಟ್ 10+ ಫೋನ್‌ಗಳ ಬಿಡುಗಡೆಗೂ ಮುನ್ನವೇ ಸೋರಿಕೆಯಾಗಿದ್ದ ಚಿತ್ರಗಳು, ವಿಶೇಷಗಳು ಸದ್ದು ಮಾಡಿದ್ದವು. ಹಾಗಾಗಿ ಅವುಗಳನ್ನು ಖಚಿತಪಡಿಸಿಕೊಳ್ಳುವ ಕುತೂಹಲವಷ್ಟೇ ಸ್ಯಾಮ್‌ಸಂಗ್ ಅಭಿಮಾನಿಗಳಲ್ಲಿ ಇದ್ದಿದ್ದು. ಅವರು ಕೇಳಿದ ಬಹಳಷ್ಟು ಅಂಶಗಳು ನಿಜವಾಗಿದ್ದು, ಇನ್ನಷ್ಟು ವಿಶೇಷತೆಗಳು ಹೊಸ ಫೋನಿನಲ್ಲಿವೆ.
ಗ್ಯಾಲೆಕ್ಸಿ ನೋಟ್ 10
8ಜಿಬಿ ಮತ್ತು 16 ಜಿಬಿ ರ್ಯಾಮ್‌ನೊಂದಿಗೆ ಲಭ್ಯವಾಗಲಿರುವ ಈ ಫೋನ್ 256 ಜಿಬಿ ಸ್ಟೋರೇಜ್ ಹೊಂದಿರಲಿದೆ. ಜೊತೆಗೆ 5ಜಿಗೆ ಪೂರಕವಾದ ತಂತ್ರಜ್ಞಾನವನ್ನು ಹೊಂದಿದೆ. ಇದರಲ್ಲಿ ಮೈಕ್ರೋ ಕಾರ್ಡ್ ಸ್ಲಾಟ್ ಇಲ್ಲ. 6.3 ಇಂಚಿನ ಸ್ಕ್ರೀನ್ ಇದ್ದು, ಎಸ್ ಪೆನ್ ಹೊಸ ಅನುಭವವನ್ನು ನೀಡಲಿದೆ. 3500ಎಂಎಎಚ್ ಬ್ಯಾಟರಿಯನ್ನು ಹೊಂದಿದೆ. 12 ಮೆಗಾಪಿಕ್ಸೆಲ್, 16 ಮೆಗಾಪಿಕ್ಸೆಲ್ ಹಿಂದೆ ಮತ್ತು 10 ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಬೆಲೆ ಅಂದಾಜು ರೂ. 68,000.
ಗ್ಯಾಲೆಕ್ಸಿ ನೋಟ್ 10+
12 ಜಿಬಿ ರ್ಯಾಮ್ ನೊಂದಿಗೆ ಲಭ್ಯವಿರುವ ಈ ಫೋನ್ 256 ಜಿಬಿ ಮತ್ತು 512 ಜಿಬಿಯೊಂದಿಗೆ ಲಭ್ಯವಿದ್ದು 1 ಟಿಬಿ ಸಾಮರ್ಥ್ಯದ ಎಸ್‌ಡಿ ಕಾರ್ಡ್ ಸ್ಲಾಟ್ ಹೊಂದಿದೆ. 6.8ಇಂಚಿನ ಸ್ಕ್ರೀನ್ ಇದ್ದು, ಡೈನಾಮಿಕ್ ಅಮೋಲ್ಡ್ ಪ್ಯಾನೆಲ್‌ಗಳನ್ನು ಅಳವಡಿಸಲಾಗಿದೆ. 4300 ಎಂಎಎಚ್ ಬ್ಯಾಟರಿಯಿದ್ದು 23 ಗಂಟೆಗಳವರೆಗೆ ಕಾರ್ಯನಿರ್ವಹಿಸಬಲ್ಲದು. ಹೆಚ್ಚುವರಿಯಾಗಿ 5ಜಿ ಸೌಲಭ್ಯವೂ ಇದೆ. 12 ಮೆಗಾಪಿಕ್ಸೆಲ್, 16 ಮೆಗಾಪಿಕ್ಸೆಲ್ ಹಿಂದೆ ಮತ್ತು 10 ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದರ ಬೆಲೆ ಅಂದಾಜು 256 ಜಿಬಿ ಫೋನಿಗೆ ಅಂದಾಜು ರೂ. 92,000 ಮತ್ತು 512 ಜಿಬಿ ಫೋನಿಗೆ ಅಂದಾಜು ರೂ. 97,000.
”ಹೇ ಬಿಕ್ಸ್‌ಬೈ” ಇಲ್ಲ, ಇಯರ್‌ಫೋನಿಗೆ ಜಾಗವಿಲ್ಲ
ಅಲೆಕ್ಸಾ, ಗೂಗಲ್ ಅಸಿಸ್ಟಂಟ್ ಮತ್ತು ಸಿರಿಗೆ ಸಮಾನವಾಗಿ ಸ್ಯಾಮ್‌ಸಂಗ್ ಬಿಕ್ಸ್‌ಬೈ ಅನ್ನು ಪರಿಚಯಿಸಿತ್ತು. ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧರಿಸಿದ ವಾಯ್ಸ್ ಅಸಿಸ್ಟಂಟ್. ಕಳೆದ ವರ್ಷ ಗ್ಯಾಲೆಕ್ಸಿ ನೋಟ್ ಬಿಡುಗಡೆ ಸಂದರ್ಭದಲ್ಲಿ ಅತ್ಯುತ್ಸಾಹದಿಂದ ಬಿಕ್ಸ್‌ಬೈ ಬಗ್ಗೆ ಮಾತನಾಡಿತ್ತು. ಆದರೆ ಈ ಬಾರಿ ಅದರ ಬಗ್ಗೆ ಸಣ್ಣ ಉಲ್ಲೇಖವೂ ಇಲ್ಲ. ಇವುಗಳ ಜೊತೆಗೆ ಇಯರ್ ಫೋನ್‌ಗಾಗಿ ಮೀಸಲಿರುವ ಜಾಗ 3.5 ಸಾಕೆಟ್ ತೆಗೆಯಲಾಗಿದೆ. ಹಾಗೆಯೇ ಈ ಫೋನ್‌ಗಳಲ್ಲಿ ವಿಆರ್ ಹೆಡ್‌ಸೆಟ್ ಕೆಲಸ ಮಾಡುವುದಿಲ್ಲ. ಸ್ಮಾರ್ಟ್ ಅಂದರೆ ಎಲ್ಲವೂ ಎಂಬ ಮಿತ್ ಅನ್ನು ಸ್ಯಾಮ್‌ಸಂಗ್ ಒಡೆಯಲು ಯತ್ನಿಸಿದಂತಿದೆ.