2022ಕ್ಕೆ ತೆರೆಕಾಣಲಿರುವ ಸೈಫೈ ಸಿನಿಮಾಗಳು ಯಾವುವು ಗೊತ್ತೆ?

ಕೋವಿಡ್‌ನಿಂದ ಉಂಟಾದ ಅಲ್ಲೋಲಕಲ್ಲೋಲದಿಂದಾಗಿ ಇಡೀ ವಿಶ್ವವೇ ಕಂಗಾಲಾಗಿದೆ. ಸಿನಿಮಾ ಕ್ಷೇತ್ರವು ಸೇರಿದಂತೆ ಹಲವಾರು ಕ್ಷೇತ್ರಗಳು ಸಂಪೂರ್ಣವಾಗಿ ಸ್ಥಬ್ದಗೊಂಡಿದ್ದವು. ಇತ್ತೀಚೆಗೆ ಮತ್ತೆ ಸಿನಿಮಾ ಕೆಲಸಗಳು ಆರಂಭವಾಗಿದ್ದು ಈ ಹೊಸ ವರ್ಷಕ್ಕೆ ವಿಜ್ಞಾನ ಹಾಗೂ ಫ್ಯಾಂಟಸಿಯ ಹಲವಾರು ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿವೆ. ರೊನಾಲ್ಡ್‌ ಎಮೆರಿಚ್‌, ರಾಬರ್ಟ್‌ ಎಗ್ಗೆರ್ಸ್‌ ಸೇರಿದಂತೆ ಖ್ಯಾತ ನಿರ್ದೇಶಕರ ಹೊಸ ಬಗೆಯ ಸಿನಿಮಾಗಳು ಈ ವರ್ಷ ತೆರೆಕಾಣಲಿದ್ದು, ಆ ಸಿನಿಮಾಗಳ ಕಿರು ಪರಿಚಯ ಇಲ್ಲಿದೆ.

 

ಮೂನ್‌ಫಾಲ್

ತಾರಾಗಣ: ಹ್ಯಾಲೆ ಬೆರ್ರಿರ, ಪ್ಯಾಟ್ರಿಕ್‌ ವಿಲ್ಸನ್‌, ಜಾನ್‌ ಬ್ರಾಡ್ಲಿ, ಮೈಕೇಲ್‌ ಪೆನ್ನಾ, ಚಾರ್ಲಿ ಪ್ಲುಮ್ಮೆರ್‌, ಕೆಲ್ಲಿ ಯು, ಡೊನಾಲ್ಡ್‌ ಸದರ್‌ಲ್ಯಾಂಡ್

ನಿದೇರ್ಶಕರು: ರೊನಾಲ್ಡ್‌ ಎಮೆರಿಚ್

ಬಿಡುಗಡೆ ದಿನಾಂಕ: ಫ್ರೆಬ್ರುವರಿ 4

ನಿಗೂಢ ಶಕ್ತಿಯೊಂದು ಚಂದ್ರನನ್ನು ಆವರಿಸಿ ಭೂಮಿಯನ್ನು ನಾಶಮಾಡಲು ಬರುತ್ತದೆ ಎಂಬುದರ ಮೂಲಕ ಈ ಸಿನಿಮಾವು ಆರಂಭವಾಗುತ್ತದೆ. ಈ ನಿಗೂಢ ಶಕ್ತಿಯನ್ನು ವಿಜ್ಞಾನಿಗಳಿಬ್ಬರು ಹೇಗೆ ಹಿಮ್ಮೆಟ್ಟಿಸುತ್ತಾರೆ ಎಂಬುದು ಈ ಸಿನಿಮಾದಲ್ಲಿ ಕಾಣಬಹುದು. ವಿಜ್ಞಾನ, ಆಕಾಶಕಾಯಕ್ಕೆ ಸಂಬಂಧಿಸಿದಂತೆ ವಿಭಿನ್ನವಾದ ಸಿನಿಮಾಗಳನ್ನು ನೀಡುತ್ತಾ ಬಂದಿರುವ ರೊನಾಲ್ಡ್‌ ಎಮೆರಿಚ್‌ ಅವರ ಪ್ರತಿಭೆಯು ಈ ಹೊಸ ಬ್ಲಾಕ್‌ ಬಾಸ್ಟರ್‌ ಸಿನಿಮಾದ ಮೂಲಕವು ಮುಂದುವರೆದಿದೆ.

ಎಮೆರಿಚ್‌ ಈ ಸಿನಿಮಾ ನಿರ್ದೇಶಿಸಿರುವುದು ಮಾತ್ರವಲ್ಲದೆ ಸ್ಪೆನ್ಸರ್‌ ಕೊಹೆನ್‌ ಅವರೊಂದಿಗೆ ಚಿತ್ರಕತೆ ಬರೆದಿರುವುದು ವಿಶೇಷ.

ದಿ ನಾರ್ತ್‌‌ಮ್ಯಾನ್

ತಾರಾಗಣ: ಅಲೆಕ್ಸಾಂಡರ್‌ ಸ್ಕಾರ್ಸ್‌‌ಗಾರ್ಡ್‌, ನಿಕೋಲೆ ಕಿಡ್‌ಮನ್‌, ಆನ್ಯ ಟಾಯ್ಲರ್‌ ಜಾಯ್‌, ಜೋರ್ಕ್‌, ರಾಲ್ಫ್‌ ಇನೆಸನ್, ಎಥನ್‌ ಹಾಕೆ, ವಿಲಿಯಂ ಡಫೋ

ನಿರ್ದೇಶಕರು: ರಾಬರ್ಟ್‌ ಎಗ್ಗೆರ್ಸ್

ಬಿಡುಗಡೆ ದಿನಾಂಕ: ಏಪ್ರಿಲ್ 22

ದಿ ಲೈಟ್ ಹೌಸ್, ದ ಡಬ್ಲ್ಯೂ ವಿಟಿಚ್ ತರಹದ ಯಶಸ್ವಿ ಸಿರೀಸ್ಗಳನ್ನು ಮಾಡಿರುವ ನಿರ್ದೇಶಕ ರಾಬರ್ಟ್ ಎಗ್ಗರ್ಸ್ ಅವರು ಈ ಸಿನಿಮಾದ ಮೂಲಕ ಹೊಸ ಹಂತಕ್ಕೆ ಕಾಲಿಟ್ಟಿದ್ದಾರೆ.

ಸ್ಟಾರ್ ನಟರು ನಟಿಸಿರುವು ಈ ಹೊಸ ಸಿನಿಮಾವು ಹತ್ತನೇ ಶತಮಾನದಲ್ಲಿ ಐಲ್ಯಾಂಡ್ನಲ್ಲಿ ನಡೆದಿರುವಂತೆ ಸೆಟ್ ರಚಿಸಿ ನಿರ್ಮಿಸಲಾಗಿದೆ. ಈ ಸಿನಿಮಾವು ವಿಲಿಯಂ ಷೇಕ್ಸ್ಪಿಯರ್ನ ಹ್ಯಾಮ್ಲೆಟ್ನಿಂದ ಸ್ಫೂರ್ತಿ ಪಡೆದಿರುವ ಕತೆಯಾಗಿದ್ದು, ವೈಕಿಂಗ್ನ ರಾಜಕುಮಾರ ಆಮ್ಲೆತ್ ಆಗಿ ಅಲೆಕ್ಸಾಂಡರ್ ಸ್ಕಾರ್ಸ್ಗಾರ್ಡ್ ನಟಿಸಿದ್ದಾರೆ.

ದ ಕಿಂಗ್ಸ್‌ ಡಾಟರ್

ತಾರಾಗಣ: ಪಿಯರ್ಸ್ ಬ್ರೋಸ್‌ನನ್‌, ಕಾಯಾ ಸ್ಕೋಡೆಲಾರಿಯೊ, ಬೆಂಜಮಿನ್ ವಾಕರ್, ವಿಲಿಯಂ ಹರ್ಟ್, ರಾಚೆಲ್ ಗ್ರಿಫಿತ್ಸ್, ಫ್ಯಾನ್ ಬಿಂಗ್ಬಿಂಗ್

ನಿರ್ದೇಶಕ: ಶಾನ್‌ ಮ್ಯಾಕ್‌ನಮಾರ

ಬಿಡುಗಡೆ ದಿನಾಂಕ: ಜನವರಿ 21

ವೋಂಡಾ ಎನ್. ಮ್ಯಾಕ್ಇಂಟೈರ್ಸ್ ಅವರ ಮೂನ್ ಅಂಡ್ ದಿ ಸನ್ ಕಾದಂಬರಿ ಆಧಾರಿತವಾದ ಈ ಸಿನಿಮಾದ ನಿರ್ಮಾಣವು 2014ರಲ್ಲೇ ಪೂರ್ಣಗೊಂಡಿತ್ತು. ಸ್ಟುಡಿಯೋ ಮತ್ತು ವಿತರಕರ ನಡುವೆ ತಲೆದೂರಿದ ಸಮಸ್ಯೆಯಿಂದಾಗಿ ಸಿನಿಮಾವು ತೆರೆಕಂಡಿರಲಿಲ್ಲ. ಅಂತಿಮವಾಗಿ ಈ ವರ್ಷ ಈ ಸಿನಿಮಾವು ಬಿಡುಗಡೆಗೆ ಸಿದ್ಧಗೊಂಡಿದೆ.

ಅಮರತ್ವದ ಅನ್ವೇಷಣೆಯಲ್ಲಿ ಮತ್ಸ್ಯಕನ್ಯೆಯನ್ನು ಸೆರೆಹಿಡಿದಿರುತ್ತಾರೆ. ತಂದೆ ಸೆರೆಹಿಡಿದ ಮತ್ಸ್ಯಕನ್ಯೆಯ ಜೊತೆ ಅನ್ಯೂನ್ಯ ಬಂಧವನ್ನು ಬೆಳೆಸಿಕೊಳ್ಳುವ ಮಗ ತಂದೆಯಿಂದ ಅವಳನ್ನು ಕಾಪಾಡಲು ನಡೆಸುವ ಮಾರ್ಗೋಪಾಯಗಳು ಈ ಸಿನಿಮಾದಲ್ಲಿ ಚಿತ್ರಿತಗೊಂಡಿವೆ.

65

ತಾರಾಗಣ: ಆಡಮ್‌ ಡ್ರೈವರ್, ಅರಿಯಾನಾ ಗ್ರೀನ್‌ಬ್ಲಾಟ್, ಕ್ಲೋಯ್ ಕೋಲ್ಮನ್

ನಿರ್ದೇಶಕ: ಸ್ಕಾಟ್ ಬೆಕ್, ಬ್ರಿಯಾನ್ ವುಡ್ಸ್

ಬಿಡುಗಡೆ ದಿನಾಂಕ: ಏಪ್ರಿಲ್‌ 29

ಇದೊಂದು ವೈಜ್ಞಾನಿಕ ಥ್ಲಿಲ್ಲರ್ ಸಿನಿಮಾವಾಗಿದ್ದು, ಬೆಕ್ ಮತ್ತು ವುಡ್ಸ್ ಬರಹಗಾಅರರು ಹಾಗೂ ಎ ಕ್ವೈಟ್ ಪ್ಲೇಸ್ನ ಬರಹಗಾರರು ಈ ಸಿನಿಮಾದ ರಚನೆಕಾರರು.

ಆಡಮ್ ಡ್ರೈವರ್ ಅವರು ಈ ಸಿನಿಮಾದಲ್ಲಿ ಗಗನಯಾತ್ರಿ ಪಾತ್ರವನ್ನು ನಿರ್ವಹಿಸಿದ್ದಾರೆ.

ವೂಲ್ಫ್

ತಾರಾಗಣ: ಜಾರ್ಜ್ ಮ್ಯಾ ಕೆ, ಲಿಲಿ-ರೋಸ್ ಡೆಪ್, ಪ್ಯಾಡಿ ಕಾನ್ಸಿಡೈನ್, ಐಲೀನ್ ವಾಲ್ಷ್, ಫಿಯಾನ್ ಒ’ಶಿಯಾ, ಲೋಲಾ ಪೆಟ್ಟಿಕ್ರೂ

ನಿರ್ದೇಶಕ: ನಥಾಲಿ ಬಿಯಾಂಚೇರಿ

ಬಿಡುಗಡೆ ದಿನಾಂಕ: ಮಾರ್ಚ್ 18

ಡಿಸ್ಪೋರಿಯಾ ಎಂಬ ಸಿಂಡ್ರೋಮ್ನಿಂದ ಬಳಲುವ ಜಾಕೋಬ್ ಎಂಬ ಹುಡುಗ ತನನ್ನು ತಾನು ತೋಳ ಎಂದು ನಂಬುತ್ತಾನೆ. ತನ್ನ ಸಹೋದರನ ಮೇಲೆ ದಾಳಿ ಮಾಡುವ ಅವನು ನಂತರ ಮನೋವೈದ್ಯಕೀಯ ಆರೈಕೆ ಪಡೆದು ಇತರ ರೋಗಿಗಳನ್ನು ಭೇಟಿಯಾಗಿ ಅವರೊಂದಿಗೆ ಸ್ನೇಹ ಪಡೆಯುವ ಕತಾ ಹಂದರ ಈ ಸಿನಿಮಾದಲ್ಲಿದೆ.

ಥರ್ಸ್‌ ಡೇ

ತಾರಾಗಣ: ಜೂಲಿಯಾ ಲೂಯಿಸ್-ಡ್ರೇಫಸ್, ಲೋಲಾ ಪೆಟ್ಟಿಕ್ರೂ, ಅರಿಂಜೆ ಕೆನೆ, ಲೇಹ್ ಹಾರ್ವೆ

ನಿರ್ದೇಶಕ: ಡೈನಾ ಒ. ಪುಸಿಕ್

ಜೂಲಿಯಾ ಲೂಯಿಸ್ ಮತ್ತು ಡ್ರೇಫಸ್ ತಾರಾಗಣವು ಈ ಸಿನಿಮಾವನ್ನು ಹಾಸ್ಯದ ಮೂಲಕ ಮುನ್ನಡೆಸಲಿದ್ದಾರೆ. ಹದಿಹರೆಯದವರು ಮತ್ತು ಪೋಷಕರ ನಡುವಿನ ಸಂಬಂಧದ ಕುರಿತು ಈ ಸಿನಿಮಾವು ಚರ್ಚಿಸುತ್ತದೆ.

ಮಾರಿಯೊ

ತಾರಾಗಣ: ಕ್ರಿಸ್ ಪ್ರ್ಯಾಟ್, ಅನ್ಯಾ ಟೇಲರ್-ಜಾಯ್, ಚಾರ್ಲಿ ಡೇ, ಜ್ಯಾಕ್ ಬ್ಲಾಕ್, ಕೀಗನ್-ಮೈಕೆಲ್ ಕೀ, ಸೇಥ್ ರೋಜೆನ್, ಫ್ರೆಡ್ ಆರ್ಮಿಸೆನ್

ನಿರ್ದೇಶಕ: ಆರನ್ ಹೋರ್ವತ್ ಮತ್ತು ಮೈಕೆಲ್ ಜೆಲೆನಿಕ್

ಬಿಡುಗಡೆ ದಿನಾಂಕ: ಡಿಸೆಂಬರ್ 21

ಕಂಪ್ಯೂಟರ್ ಆನಿಮೇಟೆಟ್ ಸಿನಿಮಾವೊಂದು ಈ ವರ್ಷ ಬಿಡುಗಡೆಯಾಗಲಿದ್ದು, ಇಲ್ಯುಮಿನಿನೇಷನ್ ಕಂಪನಿಯು ನಿಂಟೆಂಡೊ ಕಂಪನಿಯ ಸಹಭಾಗಿತ್ವದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಿನಿಮಾ ಶೀರ್ಷಿಕೆಯನ್ನು ಇನ್ನು ಬಹಿರಂಗಪಡಿಸಿಲ್ಲ.

ಕ್ರಿಸ್ ಪ್ರ್ಯಾಟ್, ಅನ್ಯಾ ಟೇಲರ್-ಜಾಯ್, ಚಾರ್ಲಿ ಡೇ, ಜ್ಯಾಕ್ ಬ್ಲಾಕ್, ಕೀಗನ್-ಮೈಕೆಲ್ ಕೀ, ಸೇಥ್ ರೋಜೆನ್, ಫ್ರೆಡ್ ಆರ್ಮಿಸೆನ್, ಕೆವಿನ್ ಮೈಕೆಲ್ ರಿಚರ್ಡ್ಸನ್, ಸೆಬಾಸ್ಟಿಯನ್ ಮನಿಸ್ಕಾಲ್ಕೊ ಮತ್ತು ಚಾರ್ಲ್ಸ್ ಮಾರ್ಟಿನೆಟ್ ನಂತಹ ತಾರಾಗಣವು ಈ ಸಿನಿಮಾಗೆ ಧ್ವನಿ ನೀಡಿದ್ದಾರೆ.

ಡಾರ್ಕ್‌ ಹಾರ್ವೆಸ್ಟ್

ತಾರಾಗಣ: ಕೇಸಿ ಲೈಕ್ಸ್, ಎಮಿರಿ ಕ್ರಚ್‌ಫೀಲ್ಡ್, ಜೆರೆಮಿ ಡೇವಿಸ್, ಎಲಿಜಬೆತ್ ರೀಸರ್, ಲ್ಯೂಕ್ ಕಿರ್ಬಿ

ನಿರ್ದೇಶಕ: ಡೇವಿಡ್ ಸ್ಲೇಡ್

ಬಿಡುಗಡೆ ದಿನಾಂಕ: ಸೆಪ್ಟೆಂಬರ್ 23

30 ಡೇಸ್ ಆಫ್ ನೈಟ್ ಹಾರರ್ ಥ್ರಿಲ್ಲರ್ ಸಿನಿಮಾದ ಮೂಲಕ ಹೆಸರುವಾಸಿಯಾಗಿರುವ ನಿರ್ದೇಶಕ ಡೇವಿಡ್ ಸ್ಲೇಡ್ ಅವರು ಈ ಸಿನಿಮವಾವನ್ನು ನಿರ್ದೇಶಿಸಿದ್ದಾರೆ. ಅಕ್ಟೋಬರ್ ಬಾಯ್ ಎಂಬ ದೈತ್ಯಾಕಾರದ ಭೂತವು ಮಧ್ಯಪಶ್ಚಿಮದಲ್ಲಿ ಪಟ್ಟಣವೊಂಮದರ ನಿವಾಸಿಗಳನ್ನು ಭಯಭೀತಗೊಳಿಸುತ್ತಿರುತ್ತಾನೆ. ಅವನನ್ನು ಜನರು ಧೈರ್ಯದಿಂದ ಮಣಿಸುವುದರ ಸುತ್ತ ಚಿತ್ರಕತೆಯನ್ನು ಹೆಣೆಯಲಾಗಿದೆ..

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.