ಇಗೋ ವಿಜ್ಞಾನ; ರಾಷ್ಟ್ರೀಯ ವಿಜ್ಞಾನ ದಿನಕ್ಕೆ ವಿಶೇಷ ವಿಜ್ಞಾನ ಬರಹ ಸ್ಪರ್ಧೆ

ರಾಷ್ಟ್ರೀಯ ವಿಜ್ಞಾನದ ಸಂದರ್ಭದಲ್ಲಿ ಮುನ್ನೋಟ ಟ್ರಸ್ಟ್‌, ವಿಜ್ಞಾನ-ತಂತ್ರಜ್ಞಾನ ಬರವಣಿಗೆಯನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಸ್ಪರ್ಧೆಯನ್ನು ಏರ್ಪಡಿಸಿದೆ. ಸ್ಪರ್ಧೆಯ ವಿವರಗಳು ಇಲ್ಲಿವೆ

ಕನ್ನಡದಲ್ಲಿ ವಿಜ್ಞಾನ- ತಂತ್ರಜ್ಞಾನ ಸಾಹಿತ್ಯವನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಮುನ್ನೋಟ ಟ್ರಸ್ಟ್‌ ವತಿಯಿಂದ ‘ಇಗೋ ವಿಜ್ಞಾನ’ ವಿಜ್ಞಾನ ಬರಹ ಸ್ಪರ್ಧೆ ಏರ್ಪಡಿಸಲಾಗಿದೆ.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕ್ರಮವಾಗಿ ₹10 ಸಾವಿರ (ಪ್ರಥಮ) ಹಾಗೂ ₹5 ಸಾವಿರ (ದ್ವಿತೀಯ) ನಗದು ಬಹುಮಾನ ನೀಡಲಾಗುವುದು.

ವಿಷಯಗಳು: ಮೂಲ ವಿಜ್ಞಾನದ ಮುಂದಿನ ದಿನಗಳು, ಸಾರಿಗೆ ವ್ಯವಸ್ಥೆಗಳಲ್ಲಾಗುವ ಬದಲಾವಣೆಗಳು, ಅರಿವಿನ ಜಗತ್ತಿಗೆ ಗಣಿತದ ಕೊಡುಗೆಗಳು, ವೈದ್ಯಕೀಯ ಕ್ಷೇತ್ರದಲ್ಲಾಗುವ ಬದಲಾವಣೆಗಳು, ಸಂಪರ್ಕ ವ್ಯವಸ್ಥೆ ಮುಂದೆ ಹೇಗೆ ಬದಲಾಗಲಿದೆ?, ಬೇಸಾಯದಲ್ಲಿ ಆಗಬೇಕಾದ ಸುಧಾರಣೆಗಳು, ಬಾನಂಗಳದ ಮುಂದಿನ ದಿನಗಳು, ಯಾವ ತಂತ್ರಜ್ಞಾನಗಳು ಕ್ರಾಂತಿ ಹುಟ್ಟಿಸಲಿವೆ?

ಇವುಗಳಲ್ಲಿ ಒಂದು ವಿಷಯ ಕುರಿತು ಬರಹ ಒಂದು ಸಾವಿರ ಪದಮಿತಿಯಲ್ಲಿರಲಿ. ಆಯ್ದ ಬರಹಗಳನ್ನು arime.org ಪೋರ್ಟಲ್‌ನಲ್ಲಿ ಪ್ರಕಟಿಸಲಾಗುವುದು. ಆಸಕ್ತರು ಬರಹಗಳನ್ನು prashant@munnota.comಗೆ ಫೆಬ್ರುವರಿ 15ರೊಳಗೆ ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ನಂ. 67, ಸೌತ್‌ ಅವೆನ್ಯೂ, ಕಾಂಪ್ಲೆಕ್ಸ್‌, ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್‌ ಬಳಿ, ಬಸವನಗುಡಿ, ಬೆಂಗಳೂರು 560004, ದೂರವಾಣಿ – 080- 26603000

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.