ಕರೋನಾ ಕಳಕಳಿ | ಸೋಂಕಿನಂತೆ ವೈರಲ್‌ ಆಗಿದೆ ಈ ಕರೋನಾ ವೈರಸ್‌ ಕುರಿತ ಶಾರ್ಟ್‌ ಫಿಲ್ಮ್‌!!

ಇಂದು ಜಗತ್ತನ್ನು ಅಲುಗಾಡಿಸುತ್ತಿದೆ ಕರೋನಾ ವೈರಸ್‌. ಇಂಥದ್ದೊಂದು ಪರಿಸ್ಥಿತಿ ಯಾಕೆ ನಿರ್ಮಾಣವಾಯಿತು ಎಂದು ಈಗ ಎಲ್ಲರು ಕೇಳಿಕೊಳ್ಳುತ್ತಿದ್ದಾರೆ. ಅದೇ ಪ್ರಶ್ನೆಯನ್ನು ಕೇಳುವ “ಕರೋನಾ: ಎಂಡ್‌ ಆಫ್‌ ದಿ ವರ್ಲ್ಡ್‌?” ಶಾರ್ಟ್‌ ಫಿಲ್ಮ್‌ ಈಗ ವೈರಲ್‌ ಆಗಿದೆ. 4 ದಿನಗಳಲ್ಲಿ 25 ಲಕ್ಷ ಮಂದಿ ಈ ಕಿರುಚಿತ್ರ ನೋಡಿದ್ದಾರೆ

ಕರೋನಾ ವೈರಸ್‌ ಈಗ ಇಡೀ ಜಗತ್ತನ್ನು ವ್ಯಾಪಿಸಿಕೊಂಡಿದೆ. ಸೋಂಕು ಅತ್ಯಂತ ವೇಗವಾಗಿ ಹರಡುತ್ತಿದ್ದು ನೂರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಇಂಥದ್ದೊಂದು ಪರಿಸ್ಥಿತಿ ನಿರ್ಮಾಣವಾಗಿದ್ದು ಯಾಕೆ? ಹೇಗೆ? ಎಂಬ ಪ್ರಶ್ನೆಯನ್ನು ಎಲ್ಲರೂ ಕೇಳಿಕೊಳ್ಳುತ್ತಿದ್ದಾರೆ.

ಇದೊಂದು ತಾತ್ವಿಕ ಪ್ರಶ್ನೆಯೂ ಆಗಿದ್ದು, ಶತಮಾನಗಳ ಕಾಲ ಮನುಷ್ಯ ಭೂಮಿ ಮತ್ತು ಅದರ ಮೇಲಿನ ಸಂಪನ್ಮೂಲಗಳನ್ನು ದುರುಪಯೋಗ ಮಾಡಿದ್ದೇ ಇಂಥ ಸ್ಥಿತಿಯನ್ನು ತಂದೊಡ್ಡಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗೆ ಮುಂದುವರಿದರೆ ಏನಾಗುತ್ತದೆ?

ಕೇವಲ ಮೂರು ದಿನಗಳಲ್ಲಿ ಸಿದ್ಧಪಡಿಸಿರುವ ಸಿನಿಮಾ ಇದು. ಚಿತ್ರ ಬರೆದು ನಿರ್ದೇಶಿಸಿರುವ ದುಷ್ಯಂತ್‌ಕುಮಾರ್‌, “ಕರೋನಾ ಎಷ್ಟು ವ್ಯಾಪಕವಾಗಿ ಹರಡುತ್ತಿದೆ ಎಂದರೆ ಜನರಲ್ಲಿ ನಾವು, ನಮ್ಮ ಪರಿಸರ, ಭೂಮಿಯ ಬಗ್ಗೆ ಜಾಗೃತಿ ಮೂಡಿಸಬೇಕಾದ ತುರ್ತು ಇದೆ ಅನ್ನಿಸಿತು. ಅದಕ್ಕೆ ಈ ಸಿನಿಮಾವನ್ನು ನಿರ್ಮಿಸಿದೆವು. ಒಂದು ರಾತ್ರಿಯಲ್ಲಿ ಕತೆ ಸಿದ್ಧವಾಯಿತು. ಒಂದು ದಿನದಲ್ಲಿ ಶೂಟಿಂಗ್ ಮುಗಿಸಿದೆವು. ಎರಡು ದಿನಗಳಲ್ಲಿ ಎಡಿಟಿಂಗ್‌ ಮುಗಿಸಿದೆವು” ಎಂದು ಚಿತ್ರೀಕರಣ ವಿವರ ನೀಡಿದರು.

” ಜನರಿಗೆ ಬೇಗ ತಲುಪಲಿ ಎಂಬ ಕಾರಣಕ್ಕೆ ಅನೇಕ ಬಾಲಿವುಡ್‌ ನಟರನ್ನು ಕೇಳಿಕೊಂಡೆವು. ಯಾರೂ ಸ್ಪಂದಿಸಲಿಲ್ಲ. ಸಿನಿಮಾ ತಾಣಗಳನ್ನು ಪ್ರಕಟಿಸಿ, ಸುದ್ದಿ ಮಾಡಿ ಎಂದು ಕೆಳಿಕೊಂಡೆವು. ಅವರು ಹಣ ಕೇಳಿದ್ರು. ಕಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿ, ಹಂಚಿಕೊಳ್ಳಲು ಜನರಲ್ಲಿ ಮನವಿ ಮಾಡಿದೆವು. 25 ಲಕ್ಷ ಬಾರಿ ವೀಕ್ಷಣೆಗೆ ಒಳಗಾಗಬಹುದು ಎಂಬ ನಿರೀಕ್ಷೆಯಂತು ಹುಟ್ಟಿಸಿರಲಿಲ್ಲ. ಜನ ನೋಡುತ್ತಿದ್ದಾರೆ. ನಮ್ಮ ಪ್ರಯತ್ನ ಸಾರ್ಥಕ ವಾಯಿತು ಎಂದು ಹೇಳಿಚ್ಛಿಸುತ್ತೇನೆ” ಎಂದರು ದುಷ್ಯಂತ್‌.

ಚಿತ್ರತಂಡ

ಆನಂದ ಬಡೋನಿಯಾ, ಅಖಿಂತ್‌ ವತ್ಸ, ಪ್ರಶಾಂತ್ ರಾಜ್‌, ತುಷಾರ್ ಸಿರೋಹಿ, ವಿಕಾಸ್‌ ಚೌಹಾನ್‌, ನವೀನ್‌ ಸಿಂಗ್‌ ತಂಡ ಈ ಶಾರ್ಟ್‌ ಫಿಲ್ಮ್‌ ಅನ್ನು ರೂಪಿಸಿದೆ.

ನೇರವಾಗಿ ಕರೋನಾ ಕುರಿತು ಯಾವುದೇ ವಿಚಾರವನ್ನು ಚರ್ಚಿಸದೇ ಇದ್ದರೂ, ಕರೋನಾ ನಮಗೆ ನಮ್ಮ ಭೂಮಿಯ, ಪರಿಸರದ ಮಹತ್ವವನ್ನು ಎಚ್ಚರಿಸಲು ಬಂದಿರುವ ಸಂದೇಶ ಎಂಬಂತೆ ಚಿತ್ರ ಬಿಂಬಿಸುತ್ತದೆ.

ಒಂದು ವೇಳೆ ಕರೋನಾ ವೈರಸ್‌, ಒಂದು ರೋಗವಾಗದೆ, ಚಿಕಿತ್ಸೆಯಾಗಿದ್ದು, ನಾವೇ ಈ ಭೂಮಿಯ ಮೇಲಿರುವ ವೈರಸ್‌ ಆಗಿದ್ದರೆ? ಎಂಬ ಪ್ರಶ್ನೆಯನ್ನು ನೋಡುಗನ ಮುಂದಿಡುತ್ತದೆ. ನೀವೂ ನೋಡಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.