ವಾರದಲ್ಲಿ 17.8 ಮಿಲಿಯನ್‌ ಡೌನ್‌ಲೋಡ್‌ಗಳು; ಹೆಚ್ಚಿದ ಒತ್ತಡದಿಂದ ಸಿಗ್ನಲ್‌ ಮೆಸೇಜಿಂಗ್‌ ಆಪ್‌ ಡೌನ್‌ !

ವಾಟ್ಸ್‌ಆಪ್‌ ಖಾಸಗಿ ನೀತಿಯಿಂದಾಗಿ ಬಳಕೆದಾರರು ಪರ್ಯಾಯ ಆಪ್‌ಗಳತ್ತ ವಾಲಿದರು. ಅವುಗಳಲ್ಲಿ ಅತಿ ಹೆಚ್ಚು ಜನಪ್ರಿಯವಾಗಿದ್ದು ಸಿಗ್ನಲ್‌. ಘಟಾನುಘಟಿಗಳೇ ಇದನ್ನು ಬಳಸಿ ಎಂದು ಪ್ರಚಾರ ಮಾಡಿದ್ದರಿಂದ ದಿಢೀರನೆ ಸಿಗ್ನಲ್‌ ಬಳಕೆ ಹೆಚ್ಚಿದೆ!

signal

ಖಾಸಗಿತನದ ಕಾರಣಕ್ಕೆ ಏಕಾಏಕಿ ಸುದ್ದಿಯ ಕೇಂದ್ರವಾದ ಸಿಗ್ನಲ್‌ ಮೆಸೇಜಿಂಗ್ ಆಪ್‌ ತಾಂತ್ರಿಕ ದೋಷಗಳಿಂದ ಸೇವೆಯಲ್ಲಿ ವ್ಯತ್ಯಯವನ್ನು ಎದುರಿಸುತ್ತಿದೆ.

ಜಗತ್ತಿನ ನಂಬರ್‌ 1 ಮೆಸೇಜಿಂಗ್‌ ಆದ ವಾಟ್ಸ್ಆಪ್‌ ತನ್ನ ಖಾಸಗಿನೀತಿ ಬದಲಿಸಿದ್ದು ಬಳಕೆದಾರರಲ್ಲಿ ಅಸಮಾಧಾನ ಹುಟ್ಟು ಹಾಕಿತ್ತು. ತಮ್ಮ ಮಾಹಿತಿ ಸುರಕ್ಷತೆ, ಖಾಸಗಿತನದ ಹಿನ್ನೆಲೆಯಲ್ಲಿ ಅವರು ಆಯ್ಕೆ ಮಾಡಿಕೊಂಡಿದ್ದು ಸಿಗ್ನಲ್‌ ಆಪ್‌.

ಕ್ಯಾಲಿಫೋರ್ನಿಯಾ ಮೂಲದ ಈ ಸಂಸ್ಥೆ ಎಂಟು ವರ್ಷಗಳ ಹಿಂದೆಯೇ ಈ ಆಪ್‌ ಪರಿಚಯಿಸಿತ್ತು. ಆದರೆ ವಾಟ್ಸ್‌ಆಪ್‌ ಜನಪ್ರಿಯತೆ, ಫೇಸ್‌ಬುಕ್‌ ಖರೀದಿಯ ನಂತರ ಸಿಕ್ಕ ಮಾರುಕಟ್ಟೆಯ ಬಲ ಎರಡರಿಂದಾಗಿ ಕೆಲವೇ ಕೆಲವರು ಬಳಸುತ್ತಿದ್ದರು.

ವಿಶೇಷವಾಗಿ ಎಡ್ವರ್ಡ್‌ ಸ್ನೋಡೆನ್‌ರಂತಹ ತಂತ್ರಜ್ಞಾನ ತಜ್ಞರು ಹಾಗೂ ಖಾಸಗಿತನ ಪರ ಹೋರಾಟ ಮಾಡುತ್ತಿದ್ದ ಎಲ್ಲರೂ ಸಿಗ್ನಲ್‌ ಬಳಕೆ ಆರಂಭಿಸಿದ್ದರು.

ಕೆಲವ ದಿನಗಳ ಹಿಂದೆ ವಾಟ್ಸ್‌ಆಪ್‌ ಖಾಸಗಿ ನೀತಿ ಘೋಷಣೆಯಿಂದ ಬೇಸರಗೊಂಡ ಬಳಕೆದಾರರು ಟೆಲಿಗ್ರಾಮ್‌ ಮತ್ತು ಸಿಗ್ನಲ್‌ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲಾರಂಭಿಸಿದರು. ಒಂದೇ ದಿನದಲ್ಲಿ 4 ಮಿಲಿಯನ್‌ ಡೌನ್‌ಲೋಡ್‌ಗಳಾದವು. ಗ್ಯಾಜೆಟ್‌360 ವರದಿಯಂತೆ ಕಳೆದ ಒಂದು ವಾರದಲ್ಲಿ ಆಗಿರುವ ಡೌನ್‌ಲೋಡ್‌ಗಳ ಸಂಖ್ಯೆ 17.8 ಮಿಲಿಯನ್‌!

ಈ ರೀತಿ ಅನಿರೀಕ್ಷಿತವಾಗಿ ಬಳಕೆದಾರರ ಸಂಖ್ಯೆ ಹೆಚ್ಚಿದ್ದರಿಂದ ಅದಕ್ಕೆ ತಕ್ಕುದಾದ ತಾಂತ್ರಿಕ ಮೂಲ ಸೌಕರ್ಯಗಳಿಲ್ಲದ ಕಾರಣ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಅದನ್ನು ಸರಿಪಡಿಸುವುದಕ್ಕೆ ಸಿಗ್ನಲ್‌ ಸಂಸ್ಥೆ ಪ್ರಯತ್ನಿಸುತ್ತಿದೆ.

ಶುಕ್ರವಾರ ರಾತ್ರಿಯಿಂದ ಬಳಕೆದಾರರು ಸಮಸ್ಯೆ ಎದುರಿಸುತ್ತಿದ್ದು, ಇದನ್ನು ತಮ್ಮ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಖಚಿತಪಡಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.