ಎಲೆಕ್ಟ್ರಿಕ್‌ ಸಾಧನಗಳನ್ನು ಉತ್ಪತ್ತಿ ಮಾಡುವ ಸೋನಿ ಕಂಪನಿ ಅಚ್ಚರಿಯ ಬಿಡುಗಡೆಯೊಂದನ್ನು ಮಾಡಿದೆ, ಏನದು?

ಎಲೆಕ್ಟ್ರಾನಿಕ್‌ ಸಾಧನಗಳನ್ನು ಉತ್ಪತ್ತಿ ಮಾಡುತ್ತಾ ಬಂದಿರುವ ಸೋನಿ ಕಂಪನಿ ಲಾಸ್‌ವೆಗಾಸ್‌ನಲ್ಲಿ ನಡೆಯುತ್ತಿರುವ ಸಿಇಎಸ್‌ ಮೇಳದಲ್ಲಿ ಅಚ್ಚರಿಯ ಉತ್ಪನ್ನವೊಂದನ್ನು ಅನಾವರಣ ಮಾಡಿತು. ಅದು ಮತ್ತೊಂದು ಎಲೆಕ್ಟ್ರಾನಿಕ್‌ ಸಾಧನವಲ್ಲ, ಎಲೆಕ್ಟ್ರಿಕ್‌ ಕಾರು!!

ಲಾಸ್‌ವೆಗಾಸ್‌ನಲ್ಲಿ ಮಂಗಳವಾರ ಆರಂಭವಾದ ಕನ್‌ಸ್ಯೂಮರ್‌ ಎಲೆಕ್ಟ್ರಾನಿಕ್‌ ಶೋನಲ್ಲಿ ಅಚ್ಚರಿಯ ಅನಾವರಣ. ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗಳಿಕೆ ಹೊಂದಿರುವ ಸೋನಿ, ಮೊಬೈಲ್‌ ಸೇರಿದಂತೆ ಹತ್ತಾರು ಎಲೆಕ್ಟ್ರಾನಿಕ್‌ ಸಾಧನಗಳನ್ನು ಮಾರುಕಟ್ಟೆಗೆ ನೀಡುತ್ತಾ ಬಂದಿದೆ. ಆದರೆ ಈ ಬಿಡುಗಡೆ ಮಾಡಿದ್ದೇ ಬೇರೆ.

ಅದು ಬಿಡುಗಡೆ ಮಾಡಿದ್ದು ಸದ್ಯದಲ್ಲೇ ಮಾರುಕಟ್ಟೆಗೆ ತರಲು ಸಿದ್ಧವಿರುವ ವಿಷನ್‌ ಎಸ್‌ ಹೆಸರಿನ ಎಲೆಕ್ಟ್ರಿಕ್‌ ಕಾರಿನ ಮಾದರಿಯನ್ನು!

ಸಿಎಂಒಎಸ್‌ ಮತ್ತು ಟಿಒಎಫ್‌ ಸೇರಿದಂತೆ 33 ಸೆನ್ಸಾರ್‌ಗಳನ್ನು ಒಳಗೊಂಡ ಈ ಕಾರು ಕಾರಿನ ಒಳ ಮತ್ತು ಹೊರಗೆ ಯಾವುದೇ ವಸ್ತು ಮತ್ತು ವ್ಯಕ್ತಿಯ ಇರುವನ್ನು ನಿಖರಾಗಿ ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ. ಕೇವಲ 4.8 ಸೆಕೆಂಡ್‌ಗಳಲ್ಲಿ ಸೊನ್ನೆಯಿಂದ 100 ಕಿಮಿ ವೇಗವನ್ನು ಪಡೆದುಕೊಳ್ಳುವ ವಿಷನ್‌ ಎಸ್‌ ಈ ವಿಷಯದಲ್ಲಿ ಟೆಸ್ಲಾ3 ಕಾರಿನ ನಂತರದ ಸ್ಥಾನದಲ್ಲಿದೆ. ಟೆಸ್ಲಾ ಕಾರು ಈ ವೇಗವನ್ನು ಪಡೆದುಕೊಳ್ಳಲು ತೆಗೆದುಕೊಳ್ಳುವ ಕಾಲ 3.4 ಸೆಕೆಂಡ್ಸ್‌!

ಇದೇ ಮೊದಲ ಬಾರಿಗೆ ಎಲೆಕ್ಟ್ರಾನಿಕ್‌ ಸಾಧನಗಳನ್ನು ಉತ್ಪಾದಿಸುವ ಕಂಪನಿಯೊಂದು ಕಾರು ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟಿದೆ. ನಾಲ್ಕು ವರ್ಷಗಳ ಹಿಂದೆ ಲೀಕೊ ಇಂಥದ್ದೇ ಒಂದು ಯೋಜನೆಯ ಘೋಷಣೆ ಮಾಡಿತ್ತು. ಆದರೆ ಆರ್ಥಿಕ ಹಿನ್ನಡೆಯಿಂದ ಯೋಜನೆಯನ್ನು ಕೈಬಿಟ್ಟಿತ್ತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.