ದಿನಕ್ಕೊಂದು ಆ್ಯಪ್‌ | ನಿಮ್ಮ ಫೋನಿನ ಸ್ಕ್ರೀನ್ ಮೇಲೆ ಸ್ಮಾರ್ಟ್‌ ಆಗಿ ಬರೆವ ಸ್ಕ್ವಿಡ್‌

ಟೈಪ್‌ ಮಾಡುವುದು ಗೊತ್ತಿದ್ದರು, ಕೆಲವೊಮ್ಮೆ ತಾಳ್ಮೆ ಇಲ್ಲದೆಯೋ, ಟೈಪಿಸುವುದು ತಿಳಿಯದೆಯೋ ಕಿರಿಕಿರಿ ಆಗುತ್ತದೆ. ಆಗೆಲ್ಲಾ ಬರೆಯುವುದು ಅನುಕೂಲವೆನಿಸುತ್ತದೆ. ಆದರೆ ಕಾಗದದ ಮೇಲೆ ಬರೆದು, ಅದನ್ನು ಫೋನಿಗೆ ವರ್ಗಾಯಿಸುವುದು ತಲೆನೋವು. ಇದಕ್ಕೆ ಸ್ಕ್ವಿಡ್‌ ಉತ್ತರ

ಸ್ಕ್ವಿಡ್ ಆಪ್ ಬಳಸಿ ನಿಮ್ಮ ಸ್ಮಾರ್ಟ್‌ ಫೋನ್‌ ಅಥವಾ ಟ್ಯಾಬ್ಲೆಟ್‌ನಲ್ಲಿ ಸಾಮಾನ್ಯ ಪೆನ್ನಿನಲ್ಲಿ ಬರೆಯುವಂತೆಯೇ ಬರೆಯಬಹುದು. ಅರ್ಜಿಗಳಲ್ಲಿ ಬಿಟ್ಟ ಸ್ಥಳ ತುಂಬಲು, ದಾಖಲೆಗಳಿಗೆ ಸಹಿ ಹಾಕಲು ಇತ್ಯಾದಿ ಸಂದರ್ಭಗಳಲ್ಲಿ ಕೈಬರಹದ ಕರಾಮತ್ತು ಸಹಾಯ ಮಾಡಲಿದೆ. ಈ ಆ್ಯಪ್‌ ಬಳಸಿ ನಿಮ್ಮ ಟ್ಯಾಬ್ಲೆಟ್‌ನ್ನು ವೈಟ್‌ಬೋರ್ಡ್ ಆಗಿ ಪರಿವರ್ತಿಸಿ ತರಗತಿ, ಸಭೆ, ಸಮಾವೇಶಗಳಲ್ಲಿ ಪ್ರೆಸೆಂಟೇಶನ್ ನೀಡುವ ಸಂದರ್ಭದಲ್ಲೂ ಬಳಸಬಹುದು! ಕೈಬರಹದ ನೋಟ್‌ಗಳನ್ನು ಪಿಡಿಎಫ್‌, ಪಿಎನ್‌ಜಿ, ಜೆಪೆಗ್ ಆಗಿ ಎಕ್ಸ್ ಪೋರ್ಟ್ ಮಾಡಿ ಬೇಕಾದಲ್ಲಿ ರಕ್ಷಿಸಿಡಲು, ಶೇರ್ ಮಾಡಲು, ಮುದ್ರಿಸಲು ಸಾಧ್ಯ. ಖಾಲಿ, ಗ್ರಾಫ್‌ ಸಹಿತ ಇತ್ಯಾದಿ ಮಾದರಿಯ ಪುಟಗಳಲ್ಲಿ ನೀವು ಬರೆಯಬಹುದು. ಅನ್‌ಡು, ಸೆಲೆಕ್ಟ್, ಮೂವ್, ರಿಸೈಝ್ ಇತ್ಯಾದಿ ಆಯ್ಕೆಗಳಿವೆ. ಟು ಫಿಂಗರ್ ಸ್ಕ್ರೋಲ್, ಕಟ್, ಕಾಪಿ, ಪೇಸ್ಟ್, ಕಲರ್ ಚೇಂಜ್ ಮುಂತಾದ ಫೀಚರ್‌ಗಳು ಇದರಲ್ಲಿವೆ.


ನಿಮ್ಮ ಇಷ್ಟ ಮೊಬೈಲ್‌ ಆ್ಯಪ್‌ ಯಾವುದು?

ನಿಮಗೆ ಇಷ್ಟದ, ಉಪಯುಕ್ತವಾದ ಆ್ಯಪ್‌ಗಳ ಮಾಹಿತಿಯನ್ನು ಟೆಕ್‌ ಕನ್ನಡದ ಓದುಗರೊಂದಿಗೆ ಹಂಚಿಕೊಳ್ಳಬಹುದು. ನಿಮ್ಮ ಬರಹವನ್ನು editor.techkannada@gmail.com ಗೆ ಕಳಿಸಿಕೊಡಬಹುದು.


Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.