ಟೆಕ್ ಕಂಪನಿಗಳು ನಮ್ಮ ದೈನಂದಿನ ಚಟುವಟಿಕೆಗಳನ್ನು ಅನುಸರಿಸಿ ನಮಗೆ ಹೊಸ ಹೊಸ ಉತ್ಪನ್ನಗಳನ್ನು ತೋರಿಸಿ ಖರೀದಿಸಲು ಪ್ರೇರೇಪಿಸುವ ವಿಧಾನ ಗೊತ್ತು. ಆದರೆ ಇದು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ನಾವು ಬಯಸುವುದನ್ನು ಎಲ್ಲಿ ಹೇಗೆ ಪಡೆಯಬಹುದು ಅನ್ನೋದನ್ನು ತಿಳಿಸುವ ಕ್ರಮವೇ ಕ್ರಾಂತಿಕಾರಿ ಅಚ್ಚರಿಯಾಗಿದೆ!
ಪ್ರತಿಯೊಬ್ಬರಿಗೂ ಅವರದೇ ಆದ ಮಾಯಾ ಪ್ರಪಂಚವನ್ನು ಕಟ್ಟಿಕೊಡುವ ಪ್ರಯತ್ನವೊಂದು ಸದ್ದಿಲ್ಲದೇ ನಡೆದಿದೆ. ಇಷ್ಟು ದಿನ ನಿಮ್ಮ ಬೆರಳ ತುದಿಯಲ್ಲಿದ್ದ ಪ್ರಪಂಚ ನಿಮ್ಮ ಕಣ್ಣಿನ ಮುಂದೆ ನಿಮಗೆ ಬೇಕಾದ ಹಾಗೆ ಕಾಣಿಸಿಕೊಳ್ಳಲಿದೆ ಎಂದರೇ ನೀವು ನಂಬಲೇ ಬೇಕು. ಇಷ್ಟು ದಿನ ಸಿನಿಮಾಗಳಲ್ಲಿ ಮಾತ್ರವೇ ಕಾಣುತ್ತಿದ್ದ ಪ್ರಪಂಚವನ್ನು ಶೀಘ್ರದಲ್ಲಿಯೇ ನೀವು ಅನುಭವಿಸುವಿರಿ ಎನ್ನುವುದಲ್ಲಿ ಯಾವುದೇ ಸಂಶಯವಿಲ್ಲ.
ಇಂದಿನ ದಿನದಲ್ಲಿ ನಾವು ಇಂಟರ್‌ನೆಟ್ ಪ್ರಪಂಚದಲ್ಲಿ ಬದುಕು ನಡೆಸುತ್ತಿದ್ದೇವೆ, ಹೀಗೆ ಡಿಜಿಟಲ್ ಆಗಿರುವ ನಮ್ಮ ಜೀವನವನ್ನು ಮಾಯಾ ಪ್ರಪಂಚವನ್ನಾಗಿಸಲು ಹೊಸದೊಂದು ತಂತ್ರಜ್ಞಾನವೊಂದು ನಮ್ಮ ಮನೆಯ ಬಾಗಿಲಿನ ಹೊಸಲಿನಲ್ಲಿಯೇ ಕಾಯುತ್ತಿದೆ.
ಈಗ ನೀವು ಮನೆಯಲ್ಲಿ ಕುಳಿತು, ಕೈನಲ್ಲಿ ಮೊಬೈಲ್ ಹಿಡಿದು ಬಟ್ಟೆಗಳನ್ನ ತರಿಸಿಕೊಳ್ಳುತ್ತಿದ್ದಿರಿ ಅಲ್ಲವೇ? ಅವು ಬಂದ ಮೇಲೆ ಒಮ್ಮೆ ಟ್ರೈ ಮಾಡಿ, ಇಷ್ಟವಾಗದೆ ಇದ್ದರೆ ರಿರ್ಟನ್ ಮಾಡುತ್ತೀರಿ. ಒಮ್ಮೆ ಈ ಹೊಸ ತಂತ್ರಜ್ಞಾನ ಕಾರ್ಯಚರಣೆ ಆರಂಭಿಸಿದರೆ ನೀವು ಮನೆಯಲ್ಲಿಯೇ ಕುಳಿತು ವರ್ಚುವಲ್ ಆಗಿ ಆ ಬಟ್ಟೆಯಲ್ಲಿ ತೊಟ್ಟು ನಿಮಗೆ ಉತ್ತಮವಾಗಿ ಕಾಣುತ್ತಿದೆಯೇ? ಬಣ್ಣ ಸರಿ ಇದೆಯೇ? ಗುಣಮಟ್ಟ ಹೇಗಿದೆ ಎಂಬುದನ್ನು ನೋಡಿ, ಬೇರೆಯವರಿಗೂ ತೋರಿಸಿ, ಚೆನ್ನಾಗಿದೆ ಎಂದ ನಂತರವೇ ಖರೀದಿಸುವ ಅವಕಾಶವನ್ನು ಮಾಡಿಕೊಡಲಿದೆ ಹೊಸ ಕನ್ನಡಿಯೊಳಗಿನ ಪ್ರಪಂಚ. ಇದು ಸಣ್ಣ ಉದಾಹರಣೆ ಅಷ್ಟೆ..!
ಈ ಮಾಯಾ ಪ್ರಪಂಚದಲ್ಲಿ ಇನ್ನೇನು ಸಾಧ್ಯ ಎಂದುದನ್ನು ಊಹಿಸಿಕೊಳ್ಳಲು ಇಲ್ಲಿದೆ ಇನ್ನೊಂದು ಉದಾಹರಣೆ, ನೀವು ಒಂದು ರಸ್ತೆಯಲ್ಲಿ ಸಾಗುತ್ತಿರುವ ವೇಳೆ ನಿಮಗೆ ಯಾವುದೋ ಒಂದು ವಸ್ತು ಬೇಕೆನಿಸುತ್ತದೆ. ಅಷ್ಟೆ ಸಾಕು ಈ ಹೊಸ ತಂತ್ರಜ್ಞಾನದ ಸಹಾಯದಿಂದ ಮುಂದಿನ ಕ್ಷಣವೇ ನಿಮ್ಮ ಮುಂದೆ ಒಂದು ವೆಂಡಿಂಗ್ ಮಿಷಿನ್ ಕಾಣಿಸಿಕೊಳ್ಳಲಿದೆ. ಅದರಲ್ಲಿ ನೀವು ಬೇಕೆಂದುಕೊಂಡ ವಸ್ತುಗಳು ವಿವಿಧ ಮಾದರಿಯಲ್ಲಿ ಇರಲಿದೆ. ನಂತರ ನೀವು ಅಲ್ಲಿಯೇ ನಿಂತು ನಿಮಗೆ ಬೇಕಾಗಿದ್ದನ್ನು ಖರೀದಿಸಿದರೆ ಸಾಕು, ಅದು ನೇರವಾಗಿ ನಿಮ್ಮ ಮನೆಯ ತಲುಪಲಿದೆ ಮತ್ತು ನೀವು ನಿಮ್ಮ ಪಾಡಿಗೆ ಮುಂದೆ ಸಾಗಬಹುದು.
ಇನ್ನೊಂದು ಉದಾಹರಣೆಯನ್ನು ನೀಡುವುದಾದರೇ, ನಿಮ್ಮ ಹೆಂಡತಿಗೆ ನೀವು ಏನಾದರು ಕೊಡಿಸುವ ಸಲುವಾಗಿ ಸ್ಟೋರ್‌ವೊಂದಕ್ಕೆ ಕರೆದುಕೊಂಡು ಹೋಗಲು ಬಯಸುತ್ತೀರಾ, ಆದರೆ ಹೆಂಡತಿಗೆ ಆ ಸಮಯದಲ್ಲಿ ಆಕೆಗೆ ಬೇಕಾಗಿರುವ ವಸ್ತುವಿನ ಹೆಸರು ಮತ್ತು ಅದು ಯಾವುದು ಎಂಬುದು ಮರೆತು ಹೋಗಿರುತ್ತದೆ ಅಂದುಕೊಳ್ಳಿ, ಆಗ ಆಕೆಯ ಬ್ರೈನ್- ಕಂಪ್ಯೂಟರ್ ಇಂಟರ್‌ಫೇಸ್ ಡಿವೈಸ್ ಆಕೆಗೆ ಬೇಕಾಗಿರುವ ವಸ್ತು ಯಾವುದು, ಅದು ಎಲ್ಲಿ ಸಿಗುತ್ತದೆ ಮತ್ತು ಅದರ ಬೆಲೆ ಎಷ್ಟು ಎನ್ನುವ ಎಲ್ಲಾ ಮಾಹಿತಿಯನ್ನು ಗಂಡನ ಮೊಬೈಲ್‌ಗೆ ಅಂದರ ನಿಮ್ಮ ಮೊಬೈಲ್‌ಗೆ ತಲುಪಿಸಲಿದೆ.
ಇಷ್ಟೇಲ್ಲ ಮಾಡುವುದು ಯಾವ ತಂತ್ರಜ್ಞಾನ ಎಂದು ಯೋಚನೆ ಮಾಡುತ್ತಿದ್ದೀರಾ? ಇದೇ ‘ಮೆಟಾವರ್ಸ್’. ಇದೊಂದು ಪರ್ಯಾಯ ಡಿಜಿಟಲ್ ರಿಯಾಲಿಟಿ, ಇಲ್ಲಿ ಜನರು ಕೆಲಸ ಮಾಡಬಹುದು, ಆಟ ಆಡಬಹುದು ಮತ್ತು ಸಾಮಾಜಿಕವಾಗಿ ಕನೆಕ್ಟ್ ಆಗಬಹುದು.
ಇದೊಂದು ಮೀರರ್ ವರ್ಡ್(ಕನ್ನಡಿಯಂತಹ ಜೀವನ), ಇದನ್ನು ನೀವು ಮೆಟಾವರ್ಸ್, ಮಿರರ್ ವರ್ಲ್ಡ್, ಎಆರ್ ಮೆಗಾ, ಮ್ಯಾಜಿಕ್ವರ್ಸ್, ವೈಯಕ್ತಿಯ ಇಂಟರ್ನೆಟ್ ಅಥವಾ ಲೈವ್ ಮ್ಯಾಪ್ ಎಂದು ಸಹ ಕರೆಯಬಹುದು.
ನೀವು ಮೆಟಾವರ್ಸ್ ಎಂಬ ಪದವನ್ನು ಗೂಗಲ್ ಮಾಡಿದರೆ ನಿಮಗೆ ಹಲವು ಮಾದರಿಯ ಅರ್ಥಗಳು ದೊರೆಲಿದೆ. ವಿಕಿಪೀಡಿಯಾ ಇದನ್ನು ವರ್ಚುವಲ್ ಶೇರ್ಡ್ ಸ್ಪೇಸ್ (ಸಾಮೂಹಿಕ ವರ್ಚುವಲ್ ಹಂಚಿಕೆಯ ಸ್ಥಳ) ಎಂದು ವ್ಯಾಖ್ಯಾನಿಸುತ್ತದೆ. “ಮೆಟಾವರ್ಸ್” ಎಂಬ ಪದವು “ಮೆಟಾ” (ಊಹೆಗೂ ಮೀರಿದ) ಮತ್ತು “ಯುನಿವರ್ಸ್” (ಪ್ರಪಂಚ) ಎಂಬ ಗಳ ಸಮಿಶ್ರಣವಾಗಿದೆ.
ಇದು ಎಲ್ಲಾ ಮಾದರಿಯ ವರ್ಚುವಲ್ ತಂತ್ರಜ್ಞಾನಗಳನ್ನು ಒಳಗೊಂಡ ಮಾಸ್ಟರ್ ತಂತ್ರಜ್ಞಾನವಾಗಲಿದೆ. ವರ್ಚುವಲ್ ಎನ್ಹಾನ್ಸ್ ಫಿಸಿಕಲ್ ರಿಯಾಲಿಟಿ (ವರ್ಧಿತ ಭೌತಿಕ ವಾಸ್ತವ) ಮತ್ತು ಫಿಸಿಕಲ್ ಪ್ರಸೆಂಟ್ ವರ್ಚುವಲ್ ಸ್ಪೇಸ್( ಭೌತಿಕ ನಿರಂತರ ವಾಸ್ತವ ಪ್ರಪಂಚ)ದ ಜೊತೆಗೆ ವರ್ಚುವಲ್ ವರ್ಡ್ಸ್, ಅಗುಮೆನ್ಟೆಡ್ ರಿಯಾಲಿಟಿ ಮತ್ತು ಇಂಟರ್‌ನೆಟ್‌ಗಳನ್ನು ಒಳಗೊಂಡ ಒಂದು ಸಂಪೂರ್ಣ ಮಾಯಾ ಪ್ರಪಂಚ ಎಂದು ಹೇಳಬಹುದು.
“ ಸದ್ಯ ನೀವು ಊಹಿಸಲು ಸಾಧ್ಯವಾಗದ ವರ್ಚುವಲ್ ನಕ್ಷೆಯ ನಿರ್ಮಾಣ ಕಾರ್ಯವು ಜಾರಿಯಲ್ಲಿದೆ, ಅದು ಪೂರ್ಣಗೊಂಡರೇ, ನಮ್ಮ ಭೌತಿಕ ವಾಸ್ತವವು ಡಿಜಿಟಲ್ ಪ್ರಪಂಚದೊಂದಿಗೆ ವಿಲೀನಗೊಳ್ಳುತ್ತದೆ”. ಇದನ್ನು ಇನ್ನೊಂದು ಮಾದರಿಯಲ್ಲಿ ಹೇಳುವುದಾದರೆ ನಿಮ್ಮ ಜೀವನದಲ್ಲಿ ಇರುವ ಸದ್ಯ ಇರುವ ವಸ್ತುಗಳೊಂದಿಗೆ ಡಿಜಿಟಲ್ ಮನೆ, ಡಿಜಿಟಲ್ ದೇಶ, ಡಿಜಿಟಲ್ ಕಛೇರಿ ಮಾದರಿಯಲ್ಲಿ ಸೇರ್ಪಡೆಯಾಗಿ ನಿಮ್ಮದೇ ಇನ್ನೊಂದು ಪರ್ಯಾಯ ಜೀವನಕ್ಕೆ ಸಾಕ್ಷಿಯಾಗಲಿದೆ.
ಇದು ಹೇಗೆ ಇರಲಿದೆ ಎಂಬುದರ ಜಲಕ್ ಈ ವಿಡಿಯೋ ವನ್ನು ಅಡೋಬ್ ಬಿಡುಗಡೆ ಮಾಡಿದೆ. ಇದು ಸಹ ಒಂದು ಸಣ್ಣ ಉದಾಹರಣೆ..!