ವರ್ಡಲ್‌ ಗೇಮ್‌ ನ್ಯೂಯಾರ್ಕ್‌ ಟೈಮ್ಸ್‌ ತೆಕ್ಕೆಗೆ

ಅತಿಕಡಿಮೆ ಅವಧಿಯಲ್ಲಿ ತೀರಾ ಜನಪ್ರಿಯವಾದ ಆನ್‌ಲೈನ್‌ ಆಟ ವರ್ಡಲ್ ಈಗ ಅಮೆರಿಕದ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ತೆಕ್ಕೆಗೆ ಬಿದ್ದಿದೆ.

ಅಮೆರಿಕದ ಜೋಶ್ ವಾರ್ಡಲ್ ಅಭಿವೃದ್ಧಿಪಡಿಸಿದ ಈ ಆಟ ಒಂದು ನಮೂನೆಯ ಪದಬಂಧ. ಪ್ರತಿ ದಿನ ಐದಕ್ಷರದ ಒಂದು ಪದದ ಬಂಧ ಬಿಡಿಸುವುದು ಈ ಅಟದ ಗುರಿ. ಆದರೆ ಆರೇ ಯತ್ನಗಳ ಒಳಗೆ ನಡೆಸಬೇಕಾದದ್ದು‌ ಮೂಲ ಸವಾಲು. ಬಿಡಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಹುದಾದ ವರ್ಡಲ್ ಅದೇ ಗುಣದಿಂದ ಒಬ್ಬರಿಂದೊಬ್ಬರಿಗೆ ಗೀಳು ಹತ್ತಿಸುತ್ತದೆ.

ನಾಲ್ಕು ತಿಂಗಳ ಹಿಂದೆ ಪರಿಚಯವಾದ ಈ ಗೇಮ್‌ಗೆ ಪ್ರಸ್ತುತ 3 ಲಕ್ಷಕ್ಕಿಂತಲೂ ಹೆಚ್ಚು ಬಳಕೆದಾರರಿದ್ದಾರೆ. ಅಕ್ಟೋಬರ್‌ನಲ್ಲಿ ಆನ್‌ಲೈನ್‌ ಜಗತ್ತಿಗೆ ಕಾಲುಟ್ಟ ವರ್ಡಲ್ ನವೆಂಬರ್‌ ವೇಳೆಗೆ ಕೇವಲ 90 ಮಂದಿಯನ್ನು ತಲುಪುವಲ್ಲಿ ಯಶ ಕಂಡಿತ್ತು. ಆದರೆ ಜನವರಿಯಲ್ಲಿ 3 ಲಕ್ಷಕ್ಕೂ ಅಧಿಕ ಮಂದಿಯನ್ನು ಸೆಳೆಯುವ ಮೂಲಕ ವೈರಲ್ ಆಗಿತ್ತು. ಪ್ರಸ್ತುತ ಪ್ರತಿದಿನ ಲಕ್ಷಾಂತರ ಜನರು ಈ ಆನ್‌ಲೈನ್‌ ಆಟವನ್ನು ಆಡುತ್ತಿದ್ದಾರೆ.

ಜೋಶ್ ವಾರ್ಡಲ್ ಒಡೆತನದಲ್ಲಿದ್ದ ವರ್ಡಲ್ಲನ್ನು ಖರೀದಿಸಿದ ಮೊತ್ತವೆಷ್ಟು ಎಂಬುದನ್ನು ನ್ಯೂಯಾರ್ಕ್ ಟೈಮ್ಸ್ ಬಹಿರಂಗಪಡಿಸಿಲ್ಲ.

ಇದನ್ನು ಓದಿ: ವರ್ಡಲ್ ಏಕೆ ಎಲ್ಲೆಲ್ಲೂ ಗುಲ್ಲೆಬ್ಬಿಸಿದೆ? ನೀವೂ ಆಡಬೇಕಿದ್ದರೆ ಈ ಪುಟ್ಟ ಕೈಪಿಡಿ ನೋಡಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: