ಸಾಮಾಜಿಕ ಜಾಲತಾಣಗಳ ದೊಡ್ಡಣ್ಣ ಫೇಸ್‌ಬುಕ್ ತನ್ನ 17 ವರ್ಷಗಳ ಕಾರ್ಯಾವಧಿಯಲ್ಲಿ ಇದೇ ಮೊದಲ ಬಾರಿಗೆ ಸುಮಾರು 5 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದೆ.
ಮೆಟಾವರ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ ತ್ರೈಮಾಸಿಕ ವರದಿಯ ಪ್ರಕಾರ, ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ 2021ರ ನಾಲ್ಕನೇ ತ್ರೈಮಾಸಿಕದಲ್ಲಿ ಫೇಸ್‌ಬುಕ್ ಜಾಗತಿಕವಾಗಿ ಸುಮಾರು ಅರ್ಧ ಮಿಲಿಯನ್ ದೈನಂದಿನ ಬಳಕೆದಾರರನ್ನು ಕಳೆದುಕೊಂಡಿದೆ.
ಫೇಸ್‌ಬುಕ್‌ನ ದೈನಂದಿನ ಸಕ್ರಿಯ ಬಳಕೆದಾರರ ಸಂಖ್ಯೆ ಹಿಂದಿನ ತ್ರೈಮಾಸಿಕದಲ್ಲಿ 1.930 ಶತಕೋಟಿ ಇತ್ತು. ಅದು ಅಕ್ಟೋಬರ್-ಡಿಸೆಂಬರ್ 2021 ರಲ್ಲಿ 1.929 ಬಿಲಿಯನ್‌ಗೆ ಎಂದು ಮೆಟಾವರ್ಸ್ ವರದಿ ಮಾಡಿದೆ.
ಈ ಬೆಳವಣಿಗೆಯಿಂದಾಗಿ ಫೇಸ್‌ಬುಕ್‌ನ ಶೇರು ಮೌಲ್ಯ ಶೇ.22 ರಷ್ಟು ಕುಸಿತ ಕಂಡಿದೆ.
ಇತ್ತೀಚೆಗಷ್ಟೆ ಮಾತೃ ಕಂಪನಿಯ ಹೆಸರನ್ನು ಮೆಟಾವರ್ಸ್ ಎಂದು ಬದಲಿಸಿದ್ದ ಫೇಸ್‌ಬುಕ್, ಕಳೆದ ಕೆಲವು ವರ್ಷಗಳಲ್ಲಿ ಬಳಕೆದಾರರ ಖಾಸಗಿತನ ವಿಷಯ ಸೇರಿದಂತೆ ಹಲವಾರು ವಿವಾದಗಳನ್ನು ಎದುರಿಸಿದೆ.
ಯುವ ತಲೆಮಾರು ತನ್ನದೇ ಒಡೆತನದ ಇನ್‌ಸ್ಟಾಗ್ರಾಮ್‌ನತ್ತ ಗಮನ ಹರಿಸಿರುವುದು ಒಂದೆಡೆಯಾದರೆ ಟಿಕ್‌ಟಾಕ್‌ನಂತಹ ಹಲವಾರು ಆ್ಯಪ್‌ಗಳು ಜನರನ್ನು ಸೆಳೆಯುತ್ತಿರುವುದು ಈ ಕುಸಿತಕ್ಕೆ ಕಾರಣವಾಗಿಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಬಳಕೆದಾರರ ಸಂಖ್ಯೆಯಲ್ಲಿನ ಇಳಿಕೆ ಮುಂಬರುವ ದಿನಗಳಲ್ಲಿ ಫೇಸ್ಬುಕ್‌ನ ಜನಪ್ರಿಯತೆಯ ಕುಸಿತದ ಮುನ್ಸೂಚನೆ ಎಂದೇ ಲೆಕ್ಕ ಹಾಕಲಾಗುತ್ತಿದೆ. ನಿಖರ ಉತ್ತರವನ್ನು ಕಾಲವೇ ನೀಡಬೇಕಿದೆ.