ಡಾ. ಆಂಡ್ಯ್ರೂ ಜಿ ಹಫ್ ಎಂಬ ಅಮೆರಿಕದ ವಿಜ್ಞಾನಿ ಬರೆದಿರುವ ‘ದಿ ಟ್ರೂತ್ ಅಬೋಟ್ ವುಹಾನ್’ ಪುಸ್ತಕ ನಾಳೆ ಅಧಿಕೃತವಾಗಿ ಬಿಡುಗಡೆಯಾಗುತ್ತಿದ್ದು, ವೈರಸ್ ಕುರಿತು ಹಲವು ಸ್ಫೋಟಕ ಸತ್ಯಗಳನ್ನು ಬಿಚ್ಚಿಡುವ ನಿರೀಕ್ಷೆ ಹುಟ್ಟಿಸಿದೆ.

ಇಡೀ ಜಗತ್ತನ್ನು ಅಲುಗಾಡಿಸಿ, ಲಕ್ಷಾಂತರ ಮಂದಿ ಸಾವಿಗೆ ಕಾರಣವಾದ ಕೋವಿಡ್ 19 ವೈರಸ್ ಚೀನಾದಿಂದ ಹರಡಿದ್ದು ಎಂಬುದು ಎಲ್ಲರಿಗೂ ತಿಳಿದಿದೆ. ಅದು ಮಾನವ ನಿರ್ಮಿತ ವೈರಸ್ ಎಂದೂ ಪ್ರಯೋಗಲಾಯದಿಂದ ಸೋರಿಕೆಯಾಗಿತ್ತು ಎಂಬ ವಾದಗಳು ಆಗ ಕೇಳಿ ಬಂದಿದ್ದವು.
ಅಮೆರಿಕದ ಸಂಶೋಧಕ ಡಾ. ಆಂಡ್ಯ್ರೂ ಜಿ ಹಫ್ ಈಗ ಆ ವಾದವನ್ನು ಪುಷ್ಟೀಕರಿಸುವ ಸಂಗತಿಗಳನ್ನು ಪುಸ್ತಕ ರೂಪದಲ್ಲಿ ಹೊರತರುತ್ತಿದ್ದಾರೆ. ಮಂಗಳವಾರ ಬಿಡುಗಡೆಯಾಗುತ್ತಿರುವ ‘ ದಿ ಟ್ರೂತ್ ಅಬೋಟ್ ವುಹಾನ್’ ಪುಸ್ತಕ ಕೋವಿಡ್ 19 ವೈರಸ್ ಕುರಿತ ಹಲವು ಸಂಗತಿಗಳನ್ನು ಹೊರಹಾಕಲಿದೆ ಎಂದು ಹಫ್ ಹೇಳಿದ್ದು, ಈಗ ತೀವ್ರ ಕುತೂಹಲಕಕ್ಕೆ ಕಾರಣವಾಗಿದೆ.

ಅಮೆರಿಕದ ಎಕೊಹೆಲ್ತ್ ಅಲೈನ್ಸ್ ಸಂಸ್ಥೆಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಹಫ್, ವಿಜ್ಞಾನಿಯಾಗಿ, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ವುಹಾನ್ನಲ್ಲಿರುವ ವೈರಾಲಜಿ ಸಂಶೋಧನಾ ಸಂಸ್ಥೆಯೂ ಸರ್ಕಾರಿ ಪೋಷಿತ ಸಂಸ್ಥೆ. ಈ ಸಂಸ್ಥೆಗೆ ಅಮೆರಿಕ ಸರ್ಕಾರವೂ ಹಣ ನೀಡಿತ್ತು ಎಂಬುದು ಹಫ್ ಅವರ ವಾದ.
ಹಫ್ ಅವರು ಕೆಲಸ ಮಾಡುತ್ತಿದ್ದ ಎಕೊಹೆಲ್ತ್ ಅಲೈನ್ಸ್ ಒಂದು ಸರ್ಕಾರತೇತರ ಸಂಸ್ಥೆಯಾಗಿದ್ದು ಇದು ಸೋಂಕಿನ ರೋಗಗಳ ಕುರಿತು ಅಧ್ಯಯನ ನಡೆಸುತ್ತದೆ. ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಹಫ್ ಸೋಂಕುಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದ ಕೋವಿಡ್ 19 ಹಿನ್ನೆಲೆಯನ್ನು ತಿಳಿಯುವ ಪ್ರಯತ್ನ ಮಾಡಿದ್ದಾರೆ.
ವುಹಾನ್ ವೈರಾಲಜಿ ಸಂಸ್ಥೆಯು ಸಮರ್ಥವಾದ ಜೈವಿಕ ಸುರಕ್ಷತೆಯ ವ್ಯವಸ್ಥೆಯನ್ನು ಹೊಂದಿರಲಿಲ್ಲ. ಅಪಾಯಕಾರ ಸಂದರ್ಭಗಳನ್ನು ಎದುರಿಸುವುದಕ್ಕೆ ಸೂಕ್ತ ತಯಾರಿ ಇರಲಿಲ್ಲ. ಹಾಗಾಗಿ ಸೋರಿಕೆಯೂ ಸುಲಭವಾಗಿ ಆಗಿದೆ ಎಂಬುದು ಹಫ್ ಅವರ ವಾದ. ಕೋವಿಡ್ ವೈರಸ್, ಜೀನ್ಗಳನ್ನು ತಿದ್ದುಪಡಿ ರೂಪಿಸಿದ್ದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಹಫ್ ಅವರು ಈ ಪ್ರಯೋಗ ಒಂದು ಜೈವಿಕ ಯುದ್ಧದ ತಯಾರಿ ಎಂದು ಅಭಿಪ್ರಾಯ ಪಟ್ಟಿದ್ದು, ಅಮೆರಿಕ, ಇಂತಹ ಅಪಾಯಕಾರಿ ಜೈವಿಕ ತಂತ್ರಜ್ಞಾನವನ್ನು ಚೀನಾಕ್ಕೆ ವರ್ಗ ಮಾಡಿದೆ’ ಎಂದು ಆರೋಪಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ವೈರಸ್ ಹರಡಲು ಆರಂಭಿಸಿದ ಮೂಲ ಸ್ಥಳದ ತನಿಖೆಗೆ ಅವಕಾಶ ಮಾಡಿಕೊಡದೇ ಇದ್ದಿದ್ದು, ಚೀನ ಸರ್ಕಾರ ಇದು ಮಾನವ ರೂಪಿಸಿದ ವೈರಸ್ ಅಲ್ಲವೆಂದು ಹೇಳುತ್ತಾ ಬಂದಿದ್ದು ಎಲ್ಲವೂ ಅನುಮಾನಸ್ಪದ ಎಂದು ಹಫ್ ಬೆರಳು ಮಾಡಿ ತೋರಿಸಿದ್ದಾರೆ. ಈ ಪುಸ್ತಕ ಮಾರುಕಟ್ಟೆಗೆ ಬಂದ ಮೇಲೆ ಇನ್ನೇನು ಹೊಸ ಸತ್ಯಗಳು ಹೊರಬೀಳಲಿವೆ ಎಂಬ ಕುತೂಹಲ ತೀವ್ರವಾಗಿದೆ.