ಬೆಂಗಳೂರಿನ ಮೂವರು ಸೇರಿ 11 ವಿಜ್ಞಾನಿಗಳಿಗೆ 2021ನೇ ಸಾಲಿನ ಶಾಂತಿ ಸ್ವರೂಪ್‌ ಭಟ್ನಾಗರ್‌ ಪ್ರಶಸ್ತಿ

ಏಳು ವಿಜ್ಞಾನ ವಿಭಾಗದಲ್ಲಿ ಅಪೂರ್ವ ಸಾಧನೆ ಮಾಡಿದ ನಲವತ್ತೈದು ವರ್ಷದೊಳಗಿನ ವಿಜ್ಞಾನಿಗಳಿಗೆ ನೀಡಲಾಗುವ, ಭಾರತದ ನೊಬೆಲ್‌ ಎಂದೇ ಪರಿಗಣಿಸಲಾಗುವ ಶಾಂತಿ ಸ್ವರೂಪ್‌ ಭಟ್ನಾಗರ್‌ ಪ್ರಶಸ್ತಿ ಘೋಷಣೆಯಾಗಿದ್ದು, ಬೆಂಗಳೂರು ಜವಹರ್‌ಲಾಲ್‌ ನೆಹರು ಸಂಟರ್‌ ಆಫ್‌ ಅಡ್ವಾನ್ಸ್ಡ್‌ ಸೈನ್ಸ್‌ ರೀಸರ್ಚ್‌ನ ಇಬ್ಬರು, ಐಐಎಸ್ಸಿಯ ಒಬ್ಬರು ಸೇರಿದಂತೆ 11 ವಿಜ್ಞಾನಿಗಳಿಗೆ 2021ನೇ ಸಾಲಿನ ಪ್ರಶಸ್ತಿ ಲಭಿಸಿದೆ.

ರಸಾಯನ ವಿಜ್ಞಾನ ವಿಭಾಗದಲ್ಲಿ ಜವಹರ್‌ಲಾಲ್‌ ನೆಹರು ಸಂಟರ್‌ ಆಫ್‌ ಅಡ್ವಾನ್ಸ್ಡ್‌ ಸೈನ್ಸ್‌ ರೀಸರ್ಚ್‌ನ ವಿಜ್ಞಾನಿಗಳಾದ ಡಾ. ಕಾನಿಷ್ಕಾ ಬಿಸ್ವಾಸ್‌ ಹಾಗೂ ಡಾ ಟಿ ಗೋವಿಂದರಾಜು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕಾನಿಷ್ಕಾ ಬಿಸ್ವಾಸ್‌ ಅವರು ತ್ಯಾಜ್ಯವನ್ನು ಬಳಸಿ ವಿದ್ಯುತ್‌ ಉತ್ಪಾದಿಸುವ ಥರ್ಮೋ ಎಲೆಕ್ಟ್ರಿಕ್‌ ಸಲಕರಣೆ ಮತ್ತು ಸಾಧನೆಗಳ ವಿಷಯದಲ್ಲಿ ನಡೆಸಿದ ಸಂಶೋಧನೆಗಾಗಿ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಗೋವಿಂದರಾಜು ಅವರು ರಸಾಯನ ಜೀವಶಾಸ್ತ್ರದಡಿ ಮಾನವ ಆರೋಗ್ಯ ಮತ್ತು ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಡೆಸಿದ ಸಂಶೋಧನೆ ಈ ಪ್ರಶಸ್ತಿಯನ್ನು ಪಡೆಯಲು ಕಾರಣವಾಗಿದೆ.

ಜೀವ ವಿಜ್ಞಾನ ವಿಭಾಗದಲ್ಲಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನ ಡಾ. ಅಮಿತ್‌ ಸಿಂಗ್‌ ಅವರು ಕ್ಷಯ ರೋಗಕ್ಕೆ ಕಾರಣವಾಗುವ ಮೈಕೋಬ್ಯಾಕ್ಟೀರಿಯಂ ಟುಬರ್‌ಕ್ಯುಲೊಸಿಸ್‌ನಲ್ಲಿ ಜೀನ್‌ಗಳ ಪಾತ್ರವನ್ನು ಕುರಿತು ನಡೆಸಿದ ಅಧ್ಯಯನಕ್ಕೆ ಈ ಪ್ರಶಸ್ತಿ ಲಭಿಸಿದೆ.

ಉಳಿದ ಪ್ರಶಸ್ತಿಗಳು

ಜೀವ ವಿಜ್ಞಾನ ವಿಭಾಗ – ಡಾ. ಅರುಣ್‌ ಕುಮಾರ್‌ ಶುಕ್ಲಾ, ಐಐಟಿ, ಕಾನ್ಪುರ್‌

ಭೂಮಿ, ಸಾಗರ ಮತ್ತು ಗ್ರಹ ವಿಜ್ಞಾನ ವಿಭಾಗ – ಡಾ. ಬಿನಯ್‌ ಕುಮಾರ್ ಸೈಕಿಯಾ, ಕೋಲ್‌ ಅಂಡ್‌ ಎನರ್ಜಿ ರೀಸರ್ಚ್‌ ಗ್ರೂಪ್‌, ಜೋರ್ಹಟ್‌

ಎಂಜಿನಿಯರಿಂಗ್‌ ವಿಜ್ಞಾನ ವಿಭಾಗ – ದೇಬ್‌ದೀಪ್‌ ಮುಖೋಪಾಧ್ಯಾಯ್‌, ಐಐಟಿ, ಖರಗ್‌ಪುರ್‌

ಗಣಿತ ವಿಜ್ಞಾನ ವಿಭಾಗ – ಡಾ. ಅನಿಶ್‌ ಘೋಷ್‌, ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರೀಸರ್ಚ್‌, ಮುಂಬೈ

ಡಾ. ಸಾಕೇತ್‌ ಸೌರಭ್‌, ದಿ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾಥಮೆಟಿಕಲ್‌ ಸೈನ್ಸಸ್‌

ವೈದ್ಯವಿಜ್ಞಾನ ವಿಭಾಗ – ಡಾ ಜೀವಮನ್‌ ಪನ್ನಿಯಮಕಲ್‌, ಶ್ರೀ ಚಿತ್ರ ತಿರುನಾಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌, ತಿರುವಂತನಪುರ

ಡಾ. ರೋಹಿತ್‌ ಶ್ರೀವಾಸ್ತವ, ಐಐಟಿ, ಮುಂಬೈ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.