ಕೋವಿಡ್ ಸಾಂಕ್ರಾಮಿಕದ ಕಾರಣಕ್ಕಾಗಿ ಕಳೆದ ವರ್ಷ ರದ್ದಾಗಿದ್ದ ಗೂಗಲ್ ಐ/ಒ ಸಮಾವೇಶ ಈ ಬಾರಿ ವರ್ಚ್ಯುವಲ್ ರೂಪದಲ್ಲಿ ನಡೆಯಲಿದ್ದು ಇಂದಿನಿಂದ ಆರಂಭವಾಗಲಿದೆ

ಡೆವೆಲಪರ್‌ಗಳು, ಗೂಗಲ್ ಉತ್ಪನ್ನಗಳ ಬಗ್ಗೆ ಕುತೂಹಲವಿರುವವರು ಪ್ರತಿ ವರ್ಷ ನಿರೀಕ್ಷಿಸುವ ಗೂಗಲ್ ಐ/ಒ ಸಮಾವೇಶ ಈ ಬಾರಿ ಮೇ 18-20ರವರೆಗೆ ವರ್ಚ್ಯುವಲ್ ರೂಪದಲ್ಲಿ ನಡೆಯಲಿದೆ.
ಭಾರತೀಯ ಕಾಲ 10.30ಕ್ಕೆ ಸಮಾವೇಶ ಆರಂಭವಾಗಲಿದ್ದು, ಈ ಬಾರಿ ಉಚಿತವಾಗಿ ಸಮಾವೇಶದಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದಾಗಿದೆ.
ಸಮಾವೇಶದಲ್ಲಿ ಈ ಬಾರಿ ಬಿಡುಗಡೆಯಾಗಲಿದೆ?
ಈಗಾಗಲೇ ಹಲವು ಕಡೆಗಳಲ್ಲಿ ಗೂಗಲ್ ಪರಿಚಯಿಸಲಿರುವ ಹೊಸ ಫೀಚರ್‌ಗಳ ಸುದ್ದಿ ಸೋರಿಕೆಯಾಗಿದ್ದು, ನೋಟಿಫಿಕೇಷನ್ ಪ್ಯಾನೆಲ್ ಮತ್ತು ಇಮೇಜ್ ಕಂಪ್ರೆಷನ್‌ನಲ್ಲಿ ಸುಧಾರಣೆ, ಒನ್ ಹ್ಯಾಂಡ್ ಮೋಡ್‌ಗಳು ಪಟ್ಟಿಯಲ್ಲಿವೆ.
ಪಿಕ್ಸೆಲ್ ವಾಚ್
ತೊಡುವ ಗ್ಯಾಜೆಟ್‌ಗಳ ಬಗ್ಗೆ ತೀವ್ರ ಆಸಕ್ತಿ ತೋರದಿದ್ದ ಗೂಗಲ್ ಈಗ ಹೆಚ್ಚು ಗಮನ ಹರಿಸುತ್ತಿದೆ. ಇದಕ್ಕಾಗಿ ಆಪರೇಟಿಂಗ್ ಸಿಸ್ಟಮ್ ಅಭಿವೃದ್ಧಿ ಪಡಿಸಿದ್ದು, ಇದರ ಪಿಕ್ಸೆಲ್ ವಾಚ್‌ಅನ್ನು ಪರಿಚಯಿಸಲು ಸಿದ್ಧವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಆಪಲ್ ವಾಚ್‌ಗೆ ಪರ್ಯಾಯವಾಗಿ ಗೂಗಲ್ ಪಿಕ್ಸೆಲ್ ವಾಚ್ ಪರಿಚಯಿಸಲಿದೆ ಎಂಬ ನಿರೀಕ್ಷೆ ಇದೆ. ಪಿಕ್ಸೆಲ್ ವಾಚ್ ಎಂಬ ಸ್ಮಾರ್ಟ್ ಕೈಗಡಿಯಾರ ನೋಡಲು ಹೀಗಿದೆಯಂತೆ..
ಗೂಗಲ್ ಅಸಿಸ್ಟಂಟ್

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧರಿಸಿದ ಈ ವರ್ಚ್ಯುವಲ್ ಅಸಿಸ್ಟಂಟ್‌ನಲ್ಲಿ ಇನ್ನಷ್ಟು ಸುಧಾರಣೆಗೆ ಗೂಗಲ್ ಒತ್ತು ನೀಡಿದೆ ಎನ್ನಲಾಗಿದೆ. ವಿಶೇಷವಾಗಿ ಪ್ರತಿಬಾರಿ ಸೂಚನೆ ಅಥವಾ ಆದೇಶ ನೀಡಲು ‘ಹೇ ಗೂಗಲ್’, ‘ಒಕೆ ಗೂಗಲ್’ ಎಂದು ಹೇಳಿಯೇ ಆದೇಶ ನೀಡುವ ಕ್ರಮವನ್ನು ಬದಲಿಸಲು ಹೊರಟಿದೆಯಂತೆ. ಗಾಕಮೋಲ್ ಹೆಸರಿನ ಫೀಚರ್ ಅನ್ನು ಪರಿಚಯಿಸುತ್ತಿದ್ದು, ಪದೇಪದೇ ಗೂಗಲ್ ಹೆಸರನ್ನು ಬಳಸದೆ ಸೂಚನೆ ನೀಡಬಹುದು ಎಂದು ಹೇಳಲಾಗುತ್ತಿದೆ.
ಪಿಕ್ಸೆಲ್ ಬಡ್ಸ್ ಎ ಸರಣಿ

ಈಗಾಗಲೇ ಗೂಗಲ್ ಬಡ್ಸ್ ಹೆಸರಿನ ಬ್ಲೂಟೂತ್ ಹಿಯರ್‌ಫೋನ್ ಕುರಿತ ಸುದ್ದಿಗಳು ಸೋರಿಕೆಯಾಗಿವೆ. ಅಗ್ಗದ ದರದಲ್ಲಿ ಲಭ್ಯವಾಗುವಂತಹ ಬಡ್ಸ್‌ಅನ್ನು ಗೂಗಲ್ ಪರಿಚಯಿಸಲಿದೆ ಎಂಬ ನಿರೀಕ್ಷೆ ಇದೆ.
ಆಂಡ್ರಾಯ್ಡ್ 12

ಬಹುನಿರೀಕ್ಷಿತ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್‌ನ 12ನೇ ಆವೃತ್ತಿಯ ಮೂರು ಪ್ರಿವ್ಯೂವ್‌ಗಳು ಈಗಾಗಲೇ ಡೆವೆಲಪರ್‌ಗಳಿಗೆ ನೀಡಿ ಅಭಿಪ್ರಾಯಗಳನ್ನು ಪಡೆಯಲಾಗಿದೆ. ಮೊದಲ ಬಿಟಾ ಆವೃತ್ತಿಯನ್ನು ಸಾರ್ವಜನಿಕರಿಗೆ ಈ ಬಾರಿಯ ಸಮಾವೇಶದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಇಂಟರ್‌ಫೇಸ್‌ನಲ್ಲಿ ಬಹುದೊಡ್ಡ ಬದಲಾವಣೆ ನಿರೀಕ್ಷಿಸಲಾಗಿದ್ದು, ಟಾಗಲ್‌ಗಳು, ಬಟನ್‌ಗಳು, ಹೊಸ ಅನಿಮೇಷನ್‌ಗಳು ಕಾಣಿಸಿಕೊಳ್ಳಲಾಗಿವೆ ಎನ್ನಲಾಗಿದೆ.
ನೇರ ಪ್ರಸಾರ ನೋಡಿ
ಮೂರು ದಿನಗಳ ಸಮಾವೇಶದಲ್ಲಿ ನೀವೂ ಭಾಗಿಯಾಗಬಹುದು. ಇಲ್ಲಿ ಕ್ಲಿಕ್ ಮಾಡಿ ನೊಂದಾಯಿಸಿಕೊಳ್ಳುವ ಮೂಲಕ ಸಮಾವೇಶದ ಎಲ್ಲ ಭಾಷಣ ಮತ್ತು ಬಿಡುಗಡೆಗಳಿಗೆ ಸಾಕ್ಷಿಯಾಗಬಹುದು.
ಅಥವಾ ಇಲ್ಲಿ ನೇರ ಪ್ರಸಾರ ನೋಡಬಹುದು