2022 ಮುಗಿಯುತ್ತಿದೆ. ಹಾಗಾಗಿ ವರ್ಷವಿಡೀ ಜನರ ಗಮನಸೆಳೆದ, ಹೆಚ್ಚು ನೋಡಲ್ಪಟ್ಟ ವಿಡಿಯೋಗಳು ಯಾವುವು ಎಂಬ ಕುತೂಹಲ ಇದ್ದೇ ಇರುತ್ತದೆ ಅಲ್ಲವೆ? ಅಂತಹ ಹತ್ತು ವಿಡಿಯೋಗಳು ಇಲ್ಲಿವೆ. ನೋಡಿ

ಪೆಪ್ಸಿ ಎಸ್ಬಿ ಎಲ್ವಿಐ ಹಾಫ್ ಟೈಮ್ ಶೋ
ಕ್ಯಾಲಿಫೋರ್ನಿಯಾದ ಇಂಗಲ್ವುಂಡ್ನಲ್ಲಿ ಫೆಬ್ರವರಿಯಲ್ಲಿ ನಡೆದ ಪೆಪ್ಸಿ ಎಸ್ಬಿ ಎಲ್ವಿಐ ಹಾಫ್ಟೈಮ್ ಶೋ ಸಾಕಷ್ಟು ಜನಪ್ರಿಯವಾಯಿತು. ಡಾ. ಡ್ರೆ, ಸ್ನೂಪ್ ಡಾಗ್, ಎಮಿನೆಮ್, ಮೇರಿ ಜೆ ಬ್ಲಿಗ್, ಕೆಂಡ್ರಿಕ್ ಲಾಮರ್ ಮತ್ತು 5 0 ಸೆಂಟ್ ಶೋನಲ್ಲಿ ಭಾಗವಹಿಸಿದ್ದರು. ಈ ವಿಡಿಯೋಕ್ಕೆ 144 ದಶ ಲಕ್ಷ ಬಾರಿ ವೀಕ್ಷಿಸಲ್ಪಟ್ಟಿದೆ.
ಆಸ್ಕರ್ ವೇದಿಕೆಯಲ್ಲಿ ಸ್ಮಿತ್
ಹಾಲಿವುಡ್ನ ಅತ್ಯಂತ ಜನಪ್ರಿಯ ನಟ ಈ ಬಾರಿಯ ಆಸ್ಕರ್ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ‘ಸದ್ದು’ ಮಾಡಿದರು. ಹೌದು ತಮ್ಮ ಪತ್ನಿಯ ಬಗ್ಗೆ ಹಾಸ್ಯ ಮಾಡಿದರು ಎಂಬ ಕಾರಣಕ್ಕೆ ಕಾರ್ಯಕ್ರಮದ ನಿರೂಪಕ ಕ್ರಿಸ್ ರಾಕ್ ಕೆನ್ನೆಗೆ ಹೊಡೆದಿದ್ದರು. ಕಳೆದ 8 ತಿಂಗಳ ಅವಧಿಯಲ್ಲಿ 107 ದಶಲಕ್ಷ ಬಾರಿ ವೀಕ್ಷಿಸಲ್ಪಟ್ಟಿತ್ತು.
ಐ ಬಿಲ್ಟ್ ವಿಲ್ಲಿ ವಾಂಕಾಸ್ ಚಾಕ್ಲೇಟ್ ಫ್ಯಾಕ್ಟರಿ
10 ಜನರ ನಡುವಿನ ಸ್ಪರ್ಧಿಗಳನ್ನು ಚಿತ್ರಿಸುವ ವಿಡಿಯೋ ಇದು. ಚಾಕ್ಲೇಟ್ ಫ್ಯಾಕ್ಟರಿಯೊಳಗೆ ನಡೆಯುವ ಸ್ಪರ್ಧೆಯನ್ನು ನೋಡಬಹುದು. ಇದುವರೆಗೂ 127 ದಶ ಲಕ್ಷ ವ್ಯೂವ್ಸ್ ಲಭಿಸಿವೆ.
ಸೋ ಲಾಂಗ್ ನರ್ಡ್ಸ್
ಟೆಕ್ನೊ ಬ್ಲೇಡ್ ಹೆಸರಿನ ಯೂಟ್ಯೂಬ್ ಚಾನೆಲ್ನ, ವಿದಾಯದ ವಿಡಿಯೋ ಅತ್ಯಂತ ಜನಪ್ರಿಯವಾಯಿತು. ಮೈನ್ಕ್ರಾಫ್ಟ್ ಸೃಷ್ಟಿಕರ್ತ ಅಲೆಕ್ಸ್, ಕ್ಯಾನ್ಸರ್ನಿಂದ ಮೃತಪಟ್ಟ. ಅದಕ್ಕೂ ಮೊದಲು ರೆಕಾರ್ಡ್ ಮಾಡಿದ ವಿದಾಯದ ಸಂದೇಶವನ್ನು ಅವರ ತಂದೆ, ಅವರ ಚಾನೆಲ್ನಲ್ಲಿ ಪ್ರಕಟಿಸಿದರು. 87 ದಶಲಕ್ಷ ಬಾರಿ ವೀಕ್ಷಿಸಲ್ಪಟ್ಟಿದೆ.
ಸ್ಕ್ಯಾಮ್ ಕಾಲರ್ನ ಪ್ರಾಂಕ್
ಯೂಟ್ಯೂಬರ್ ಮಾರ್ಕ್ ರಾಬರ್, ಇತರ ಇಬ್ಬರು ಯೂಟ್ಯೂಬರ್ಗಳು ಸೇರಿ ಕೋಲ್ಕತಾದಲ್ಲಿ ನಡೆಸುತ್ತಿದ್ದ ಸ್ಕ್ಯಾಮ್ ಕಾಲ್ ಸೆಂಟರ್ ಅನ್ನು ಬಯಲು ಮಾಡಿದರು. ಭಾರತದಲ್ಲಿ ಕೂತು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿರುವ ಜನರಿಗೆ ಕರೆಗಳ ಮೂಲಕ ವಂಚಿಸಿ, ಹಣ ದೋಚುತ್ತಿದ್ದ ಕಂಪನಿಗಳಿವು. ಒಂದೂವರೆ ವರ್ಷದ ತಯಾರಿ ಬಳಿಕ ಈ ಸಂಸ್ಥೆಗಳ ಬಣ್ಣ ಬಯಲು ಮಾಡಿದ್ದರು. ಈ ವಿಡಿಯೋಗೆ 55 ದಶ ಲಕ್ಷ ವ್ಯೂವ್ಸ್ ದೊರೆತಿವೆ.
ನಾನು ಡ್ರೀಮ್!
ಹಾಯ್ ಐ ಯಾಮ್ ಎಂದು ತನ್ನನ್ನು ತಾನು ಪರಿಚಯಿಸಿಕೊಂಡ ಮೈನ್ ಕ್ರಾಫ್ಟ್ ಕ್ರಿಯೇಟರ್ ತನ್ನ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದರು. ತಮ್ಮ ಮುಖವನ್ನು ತೋರಿಸದೆ ಇಷ್ಟು ದಿನ ವಿಡಿಯೋ ನಿರ್ಮಿಸುತ್ತಿದ್ದ ಡ್ರೀಮ್ ಅಕ್ಟೋಬರ್ನಲ್ಲಿ ತಮ್ಮನ್ನು ಪರಿಚಯಿಸಿಕೊಳ್ಳುವ ವಿಡಿಯೋ ಅಪ್ಲೋಡ್ ಮಾಡಿದರು. ಈ ವಿಡಿಯೋಕ್ಕೆ ಈಗ 47 ದಶ ಲಕ್ಷ ವ್ಯೂವ್ಸ್ ದೊರೆತಿವೆ.
ದಿ ಬ್ಯಾಕ್ರೂಮ್ಸ್- ಕಿರುಚಿತ್ರ
ಕೇನ್ ಪಿಕ್ಸೆಲ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಆಗಿರುವ ಈ ಕಿರುಚಿತ್ರ ಸಾಕಷ್ಟು ಸದ್ದು ಮಾಡಿದೆ. ಕೇನ್ ಪರ್ಸನ್ಸ್ ಎಂಬ ಯೂಟ್ಯೂಬರ್ ನಿರ್ಮಿಸಿರುವ ಈ ವಿಡಿಯೋಗೆ 42 ದಶ ಲಕ್ಷ ವ್ಯೂವ್ ಲಭಿಸಿವೆ.
ಮಿಲ್ಲಿ ಬಾಬಿ ಬ್ರೌನ್ ಮತ್ತು ಮಿಲ್ಕ್ಶೇಕ್
ಚಿತ್ರ ವಿಚಿತ್ರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ನಟಿ, ಮಿಲ್ಲಿ ಬಾಬಿ ಬ್ರೌನ್ ಅವರನ್ನು ದಿ ಸ್ಟಾರ್ ವಾಹಿನಿಯ ಸೀನ್ ಇವಾನ್ಸ್ ತಮ್ಮ ಹಾಟ್ ಒನ್ಸ್ ಶೋನಲ್ಲಿ ಸಂದರ್ಶನ ಮಾಡಿದರು. ಇದರಲ್ಲಿ ಮಸಾಲೆಭರಿತ ತಿನಿಸುವ ತಿನ್ನುವ ಮಿಲ್ಕ್ ಶೇಕ್ ಕುಡಿಯಲು ಬಯಸುತ್ತಾರಂರೆ. ಸಂದರ್ಶನದ ವಿಡಿಯೋಗೆ 23 ದಶ ಲಕ್ಷ ವ್ಯೂವ್ಸ್ ಲಭಿಸಿವೆ.
ಸ್ಟ್ರೇಟ್ ಅಲ್ಲದಿರುವುದು…
ಸ್ಟೇಟ್ ಅಂದರೆ ಗಂಡು-ಹೆಣ್ಣಿನ ನಡುವಿನ ಸಹಜ ಸಂಬಂಧ. ಪರಸ್ಪರ ಸಹಜ ಆಕರ್ಷಣೆ ಇರುವುದು. ಆದರೆ ಸಮಾನ ಲಿಂಗಿಗಳ ನಡುವೆಯೂ ಆಸಕ್ತಿ ಇರಲು ಸಾಧ್ಯವಿದೆ. ಹಾಗೂ ಸಮಾಜ ಈಗ ಈ ಸಂಬಂಧಗಳನ್ನು ಸಹಜವಾಗಿ ಸ್ವೀಕರಿಸುತ್ತವೆ. ಈ ಹಿನ್ನೆಲೆಯಲ್ಲಿ ಜೇಡನ್ ಆನಿಮೇಷನ್ ಚಾನೆಲ್ ಪ್ರಕಟಿಸಿದ ಬೀಯಿಂಗ್ ನಾಟ್ ಸ್ಟ್ರೇಟ್ ಸಾಕಷ್ಟು ಜನಪ್ರಿಯವಾಗಿತ್ತು. 17 ದಶ ಲಕ್ಷ ವ್ಯೂವ್ಗಳು ಲಭಿಸಿವೆ.
ಏನಾಯ್ತು?
ದಿ ಟ್ರೈ ಗಯ್ಸ್ ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಆಗಿರುವ ಈ ವಿಡಿಯೋವನ್ನು 11 ದಶ ಲಕ್ಷ ಬಾರಿ ನೋಡಲಾಗಿದೆ. ನೆಡ್ ಫುಲ್ಮರ್ ಎಂಬಾತನ ವಿವಾಹೇತರ ಸಂಬಂಧ ಕುರಿತು ಈ ವಿಡಿಯೋವನ್ನು ನಿರ್ಮಿಸಲಾಗಿತ್ತು. ನೆಡ್ಫುಲ್ಮರ್ ದಿ ಟ್ರೈ ಗಯ್ಸ್ ತಂಡದ ಸದಸ್ಯರಾಗಿದ್ದರು. ಅವರ ವರ್ತನೆಯಿಂದ ನೊಂದ ತಂಡದ ಸದಸ್ಯರು ಈ ವಿಡಿಯೋ ಮಾಡಿದ್ದರು.