ವಾಟ್ಸ್‌ಆಪ್‌ ಹೊಸ ಕಿರಿಕ್‌ ನೀತಿ: ಇಲ್ಲಿವೆ ಟಾಪ್‌ 5 ಪ್ರೈವೇಟ್‌ ಮೆಸೇಜಿಂಗ್‌ ಆಪ್‌ಗಳು

ವಾಟ್ಸ್‌ಆಪ್‌ ಹೊಸ ನೀತಿಯಿಂದಾಗಿ ಖಾಸಗಿತನ, ಮಾಹಿತಿ ಸುರಕ್ಷತೆಯ ಬಗ್ಗೆ ಕಾಳಜಿ ಇರುವವರಿಗೆ ಕಿರಕಿರಿಯಾಗಿದೆ. ವಾಟ್ಸ್‌ಆಪ್‌ನಷ್ಟೇ ಅನುಕೂಲಕರವಾದ, ಆದರೆ ಸುರಕ್ಷಿತ ಆಪ್‌ ಆಯ್ಕೆ ಮಾಡಿಕೊಳ್ಳಲು ಆಲೋಚಿಸುತ್ತಿದ್ದಾರೆ. ನೀವೂ ಅಂತಹ ಆಪ್‌ ಹುಡುಕುತ್ತಿದ್ದರೆ, ಇಲ್ಲಿದೆ ಪಟ್ಟಿ

ವಾಟ್ಸ್‌ಆಪ್‌ ತನ್ನ ಸೇವಾ ನೀತಿಯಲ್ಲಿ ಕೊಂಚ ಬದಲಾವಣೆ ಮಾಡುತ್ತಿದೆ. ವಾಟ್ಸ್‌ ಬಳಸುವವರಲ್ಲಿ ತನ್ನ ಫೋನ್‌ ನಂಬರ್‌, ಇತರೆ ಮಾಹಿತಿಗಳನ್ನು ಇನ್ನೊಬ್ಬ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವುದಕ್ಕೆ ಅನುಮತಿ ನೀಡುವಂತೆ ಕೇಳಿಕೊಂಡಿದೆ.

ಇಬ್ಬರು ಬಳಕೆದಾರರ ನಡುವೆ ನಡೆಯುವುದೇ ಯಾವುದೇ ವಿನಿಮಯ ಅವರಿಬ್ಬರ ನಡುವೆಯಷ್ಟೇ ಇರುತ್ತದೆ ಎಂಬ ಭರವಸೆ ನೀಡಿದ್ದ ವಾಟ್ಸ್‌ಆಪ್‌ ಆ ಮಾತನ್ನು ಮುರಿದು ತುಂಬಾ ದಿನಗಳೇ ಆಗಿವೆ.

ಈ ಅಧಿಕೃತವಾಗಿ ಬಳಕೆದಾರನ ಅನುಮತಿ ಪಡೆದುಕೊಂಡೇ ಮಾಹಿತಿಯನ್ನು ಬಳಸಿಕೊಳ್ಳಲು ಹೊರಟಿದ್ದು, ಫೆಬ್ರವರಿ 8ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ಹೊಸ ನಿಯಮಗಳ ಪ್ರಕಾರ ಬಳಕೆದಾರನ ಖಾಸಗಿ ಮಾಹಿತಿಯ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.

ಫೇಸ್‌ಬುಕ್‌ ಸಂಸ್ಥೆಯ ಭಾಗವಾಗಿರುವ ವಾಟ್ಸ್‌ಆಪ್‌ನ ಈ ಹೊಸ ಬದಲಾವಣೆಗಳು ಬಳಕೆದಾರರಲ್ಲಿ ಆತಂಕ ಹುಟ್ಟಿಸಿರುವುದಂತೂ ಹೌದು. ಹಾಗಾಗಿ ವಾಟ್ಸ್‌ಆಪ್‌ನಷ್ಟೇ ಬಳಕೆದಾರರ ಸ್ನೇಹಿಯಾದ, ಆದರೆ ಹೆಚ್ಚು ಸುರಕ್ಷಿತವೂ, ಖಾಸಗಿಯೂ ಆದ ಮೆಸೇಜಿಂಗ್‌ ಆಪ್‌ಗಳನ್ನು ಹುಡುಕಲಾರಂಭಿಸಿದ್ದಾರೆ.

ಖಾಸಗಿತನ, ಮಾಹಿತಿ ಸುರಕ್ಷತೆಗೆ ಒತ್ತು ನೀಡುವ ಅಂತಹ ಕೆಲವು ಮೆಸೇಜಿಂಗ್‌ ಆಪ್‌ಗಳನ್ನು ನಾವು ನಿಮಗಾಗಿ ಪಟ್ಟಿ ಮಾಡಿದ್ದೇವೆ.

1. ಸಿಗ್ನಲ್

ಅಮೆರಿಕ ಸರ್ಕಾರ ಗೌಪ್ಯ ಮಾಹಿತಿಯನ್ನು ಹೊರಹಾಕಿ ಸುದ್ದಿಯಾಗಿದ್ದ ಎಡ್ವರ್ಡ್‌ ಸ್ನೋಡೆನ್‌ ಮೊದಲ ಬಾರಿಗೆ ಈ ಆಪ್‌ ಬಳಸುವ ಸಲಹೆ ನೀಡಿದ್ದರು. ಈಗ ಎಲಾನ್‌ ಮಸ್ಕ್‌ ಅವರದ್ದು. ಥೇಟ್‌ ವಾಟ್ಸ್‌ಆಪ್‌ನಂತಿರುವ ಈ ಆಪ್‌ ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಷನ್‌ (ಅಂದರೆ ಇಬ್ಬರು ಬಳಕೆದಾರರ ನಡುವಿನ ಸಂವಹನದ ಗೌಪ್ಯತೆ ಅವರಿಬ್ಬರ ನಡುವೆಯೇ ಇರುವಂತೆ ನೋಡಿಕೊಳ್ಳುವ ವ್ಯವಸ್ಥೆ)ಹೊಂದಿದೆ.
ಇದು ಉಚಿತ ಆಪ್‌ ಆಗಿದ್ದು, ವಾಯ್ಸ್‌f ಕಾಲ್‌, ಟೆಕ್ಸ್‌ ಮೆಸೇಜ್‌, ಸ್ಟಿಕರ್ಸ್‌, ಗ್ರೂಪ್‌ ಚಾಟ್‌, ಸೆಲ್ಫ್‌ ಡಿಸ್ಟ್ರಕ್ಟಿಂಗ್‌ ಮೆಸೇಜ್‌ ವ್ಯವಸ್ಥೆಗಳಿವೆ.

ಇಲ್ಲಿ ಡೌನ್ಲೋಡ್‌ ಮಾಡಿಕೊಳ್ಳಿ | ಕ್ಲಿಕ್‌

2. ವೈರ್‌

ಯುರೋಪಿಯನ್‌ ಒಕ್ಕೂಟದ ಮಾಹಿತಿ ಸುರಕ್ಷತೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿರುವ ಈ ಆಪ್‌ ಮುಕ್ತ ತಂತ್ರಾಂಶವಾಗಿದ್ದು, ಉಚಿತವಾಗಿ ಲಭ್ಯವಿದೆ. ಸಂಸ್ಥೆಗಳೂ ದೊಡ್ಡ ಪ್ರಮಾಣದಲ್ಲಿ ಬಳಸಬಹುದಾಗಿದ್ದು, ಇದಕ್ಕೆ ನಿಗದಿತ ಶುಲ್ಕವಿದೆ. ಗ್ರೂಪ್‌ ಚಾಟ್‌, ಫೈಲ್‌ ಶೇರಿಂಗ್‌, ಕಾನ್ಫರೆನ್ಸ್‌ಗಳನ್ನು ನಡೆಸುವುದಕ್ಕೂ ಈ ಆಪ್‌ ಅವಕಾಶ ನೀಡುತ್ತದೆ. ಯುರೋಪಿಯನ್‌ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಆಪ್‌ ಇದಾಗಿದೆ.

ಇಲ್ಲಿ ಡೌನ್ಲೋಡ್‌ ಮಾಡಿಕೊಳ್ಳಿ | ಕ್ಲಿಕ್‌

3. ಟೆಲಿಗ್ರಾಮ್‌

ಈಗಾಗಲೇ 2 ಕೋಟಿ ಬಳಕೆದಾರರನ್ನು ಹೊಂದಿರುವ ಆಪ್‌ ಇದು. ಒಂದೇ ಗ್ರೂಪ್‌/ಚಾನೆಲ್‌ನಲ್ಲಿ ಸಾವಿರಾರು ಸಂಖ್ಯೆಯ ಸದಸ್ಯರನ್ನು ಹೊಂದಲು, ದೊಡ್ಡ ಗಾತ್ರದ ಫೈಲ್‌ಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ಅವಕಾಶವಿರುವ ಟೆಲಿಗ್ರಾಮ್‌ ಜಗತ್ತಿನಾದ್ಯಂತ ಜನಪ್ರಿಯವಾಗಿದೆ. ವಿಡಿಯೋ- ಆಡಿಯೋ ಕಾಲ್, ಸಾಮಾನ್ಯ ಚಾಟ್‌ ಜೊತೆಗೆ ಸೀಕ್ರೆಟ್‌ ಚಾಟ್‌ ವ್ಯವಸ್ಥೆ ಇರುವ ಈ ಆಪ್‌ ಬಳಕೆದಾರರ ಖಾಸಗಿತನಕ್ಕೆ ಹೆಚ್ಚು ಆದ್ಯತೆ ನೀಡುತ್ತದೆ. ಸರಳವಾಗಿರುವ ಈ ಆಪ್‌ ನಿಜಕ್ಕೂ ವಾಟ್ಸ್‌ ಆಪ್‌ಗೆ ಸೂಕ್ತ ಪರ್ಯಾಯ ಎನ್ನಬಹುದು.

ಇಲ್ಲಿ ಡೌನ್ಲೋಡ್‌ ಮಾಡಿಕೊಳ್ಳಿ | ಕ್ಲಿಕ್‌

4. ವೈಬರ್‌

100 ಕೋಟಿ ಜನ ಬಳಸುತ್ತಿರುವ ಆಪ್‌ ಇದು. ಎಚ್‌ಡಿ ವಿಡಿಯೋ ಕಾಲ್ಸ್‌, ಜಿಫ್‌, ವಿಡಿಯೋ ಚಾಟ್‌ಗೂ ಅವಕಾಶವಿದೆ. ಸ್ಟಿಕರ್‌, ನೋಡಿದ ಮೆಸೇಜ್‌ಗಳನ್ನು ಡಿಲೀಟ್‌ ಮಾಡುವುದಕ್ಕೆ ಅವಕಾಶವಿರುವ ಆಪ್‌. ಪ್ರತಿ ಚಾಟ್‌ ಅನ್ನು ಹಸಿರು, ಬೂದು ಮತ್ತು ಕೆಂಪು ಬಣ್ಣದ ಮೂಲಕ ಗೌಪ್ಯತೆ, ಖಾಸಗಿ, ಅಧಿಕೃತ ಎಂಬುದನ್ನು ಸೂಚಿಸುತ್ತದೆ. ವಿಶ್ವಾಸಾರ್ಹ ಎಂಡ್‌-ಟು-ಎಂಡ್‌ಎನ್‌ಕ್ರಿಪ್ಷನ್‌ ಕಾರಣಕ್ಕೆ ಅತಿ ಹೆಚ್ಚು ಬಳಕೆಯಲ್ಲಿದೆ.

ಇಲ್ಲಿ ಡೌನ್ಲೋಡ್‌ ಮಾಡಿಕೊಳ್ಳಿ | ಕ್ಲಿಕ್‌

5. ಡಸ್ಟ್

ಕಳಿಸಿದ ಮೆಸೇಜನ್ನು ಅನ್‌ಸೆಂಡ್‌ ಮಾಡಬಹುದು ವಿಶೇಷ ಫೀಚರ್‌ ಇಲ್ಲಿದೆ. ನಿಮ್ಮೊಂದಿಗೆ ಚಾಟ್‌ ಮಾಡುವವರು ಸ್ಕ್ರೀನ್‌ ಶಾಟ್‌ ತೆಗೆದುಕೊಂಡರೆ, ನಿಮಗೆ ಸಂದೇಶ ಬರುತ್ತದೆ. ಪ್ರತಿ 24 ಗಂಟೆಗಳ ಬಳಿಕ ನಿಮ್ಮ ಚಟುವಟಿಕೆಗಳ ಹಿಸ್ಟರಿಯನ್ನು ಸ್ವಯಂ ಅಳಿಸಿ ಬಿಡುತ್ತದೆ. ಖಾಸಗಿತನವನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುವ ಡಸ್ಟ್‌ ಬಳಕೆದಾರರಿಗೆ ವಿಶೇಷ ಅನುಭವ ನೀಡುವುದರಲ್ಲಿ ಅನುಮಾನವಿಲ್ಲ

ಇಲ್ಲಿ ಡೌನ್ಲೋಡ್‌ ಮಾಡಿಕೊಳ್ಳಿ | ಕ್ಲಿಕ್‌

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.