ಕರ್ನಾಟಕದಲ್ಲಿ ನಡೆಯಲಿದೆ ಭಾರತದ ಮೊತ್ತಮೊದಲ ಮೆಡಿಕಲ್ ಡ್ರೋಣ್ ಪರೀಕ್ಷಾರ್ಥ ಪ್ರಯೋಗ

ಭಾರತದ ಮೊತ್ತ ಮೊದಲ Beyond Visual Line of Sight (BVLOS) ಮಾದರಿಯ ಮೆಡಿಕಲ್ ಡ್ರೋಣ್’ನ ಪರೀಕ್ಷಾರ್ಥ ಪ್ರಯೋಗ ಕರ್ನಾಟಕದಲ್ಲಿ ನಡೆಯಲಿದೆ. ಮಾನವ ರಹಿತ ಡ್ರೋಣ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಔಷಧಿಗಳನ್ನು ತಲುಪಿಸುವ ಈ ಯೋಜನೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ

ಭಾರತದ ಮೊತ್ತ ಮೊದಲ Beyond Visual Line of Sight (BVLOS) ಮಾದರಿಯ ಮೆಡಿಕಲ್ ಡ್ರೋಣ್’ನ ಪರೀಕ್ಷಾರ್ಥ ಪ್ರಯೋಗ ಕರ್ನಾಟಕದಲ್ಲಿ ನಡೆಯಲಿದೆ. ಮಾನವ ರಹಿತ ಡ್ರೋಣ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಔಷಧಿಗಳನ್ನು ತಲುಪಿಸುವ ಈ ಯೋಜನೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ. ಜೂನ್ 18ರಿಂದ ತುಮಕೂರಿನ ಗೌರಿಬಿದನೂರಿನಲ್ಲಿ ಈ ಡ್ರೋಣ್’ಗಳ ಹಾರಾಟ ಆರಂಭವಾಗಲಿದೆ.

ಬೆಂಗಳೂರಿನ Throttle Aerospace System (TAS) ನೇತೃತ್ವದ ಕಂಪನಿಗಳ ಒಕ್ಕೂಟದಿಂದ ಈ ಡ್ರೋಣ್ ನಿರ್ಮಿಸಲ್ಪಟ್ಟಿದೆ. ಇದರ ಪರೀಕ್ಷಾರ್ಥ ಪ್ರಯೋಗಕ್ಕೆ 2020ರ ಮಾರ್ಚ್ ತಿಂಗಳಲ್ಲಿಯೇ ಡಿಜಿಸಿಎ ಅನುಮತಿ ದೊರಕಿತ್ತು. ಆದರೆ, ಕೋವಿಡ್ ಕಾರಣದಿಂದ ಇತರ ಪರವಾನಗಿಯನ್ನು ಪಡೆಯಲು ತಡವಾಗಿತ್ತು. ಈಗ ಎಲ್ಲಾ ಇಲಾಖೆಗಳ ಅನುಮತಿಯನ್ನು ಪಡೆದ ನಂತರ ಈ ಪ್ರಯೋಗಕ್ಕೆ TAS ಮುಂದಾಗಿದೆ.

ಈ ಕುರಿತಾಗಿ ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿರುವ TAS ಸಿಇಒ, ನಾಗೇಂದ್ರನ್ ಕಂದಸಾಮಿ ಅವರು, ಇತರ ಒಕ್ಕೂಟಗಳು ಕೂಡಾ BVLOSಗೆ ಅನುಮತಿಯನ್ನು ಪಡೆದಿವೆ. ಆದರೆ, ಅಧಿಕೃತವಾಗಿ ಹಾಗೂ ಕಾನೂನಾತ್ಮಕವಾಗಿ ಮಡಿಕಲ್ ಡ್ರೋಣ್ ಡೆಲಿವರಿ ನೀಡುವ ಮೊತ್ತ ಮೊದಲ ಒಕ್ಕೂಟ ನಮ್ಮದಾಗಿದೆ. ಬಹಳ ಸಮಯದ ಕಾಯುವಿಕೆಯ ನಂತರ BVLOS ಪ್ರಯೋಗಕ್ಕೆ ಅಧಿಕೃತವಾಗಿ ಅನುಮತಿ ದೊರಕಿದೆ. ಭಾರತದಲ್ಲಿ ವಾಣಿಜ್ಯ ಡ್ರೋಣ್ ಬಳಕೆಯ ದಿನಗಳು ದೂರವಿಲ್ಲ, ಎಂದಿದ್ದಾರೆ.

ಪ್ರಯೋಗದ ಸಂದರ್ಭದಲ್ಲಿ TASನ ಎರಡು ಮಾದರಿಯ ‘MedCOPTER’ ಡ್ರೋಣ್ ಮತ್ತು RANDIT ಎಂಬ ಡೆಲಿವರಿ ತಂತ್ರಾಂಶ ಪರೀಕ್ಷೆಗೆ ಒಳಪಡಲಿದೆ. MedCOPTER ಸಣ್ಣ ಮಾದರಿಯು ಒಂದು ಕೆಜಿ ತೂಕದ ಔಧಿಯನ್ನು 15 ಕಿ.ಮಿ. ವರೆಗೆ ಕೊಂಡೊಯ್ಯಬಲ್ಲದು. ಇನ್ನೊಂದು ಮಾದರಿಯು ಎರಡು ಕೆಜಿ ತೂಕದಷ್ಟು ಔಷಧಿಯನ್ನು 12 ಕಿ.ಮಿ. ವರೆಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.

ಈ ಎರಡೂ ಡ್ರೋಣ್’ಗಳು ಪ್ರಯೋಗಾಲಯದ ಹೊರಗಡೆ ಎಷ್ಟು ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬುದನ್ನು 30-45 ದಿನಗಳ ಕಾಲ ಪರೀಕ್ಷಿಸಲಾಗುವುದು. ಡಿಜಿಸಿಎ ನಿಯಮದ ಪ್ರಕಾರ 100 ಗಂಟೆಗಳಷ್ಟು ಕಾಲ ಡ್ರೋನ್ ಹಾರಾಟ ನಡೆಸಬೇಕು. ಆದರೆ, TAS 125 ಗಂಟೆಗಳ ಕಾಲ ಹಾರಾಟ ನಡೆಸುವ ಗುರಿಯನ್ನು ಹೊಂದಿದೆ.

TASನೊಂದಿಗೆ ಮೆಡಿಕಲ್ ಡ್ರೋಣ್ ತಯಾರಿಕಾ ಒಕ್ಕೂಟದಲ್ಲಿ Involi-Swiss ಮತ್ತು Honeywell Aerospace ಎಂಬೆರಡು ಸಂಸ್ಥೆಗಳು ಜತೆಯಾಗಿವೆ. Involi-Swiss ಡ್ರೋಣ್’ಗೆ ಸಂಬಂಧಪಟ್ಟಂತಹ ಅಪ್ಲಿಕೇಷನ್ ತಯಾರಿಕಾ ಕಂಪನಿಯಾಗಿದ್ದು, ಮಾನವ ರಹಿತ ಏರ್ ಟ್ರಾಫಿಕ್ ಮ್ಯಾನೆಜ್ಮೆಂಟ್ ಸಂಬಂಧಿಸಿದ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದೆ. Honeywell Aerospace ಡ್ರೋಣ್ ಅಥವಾ ಇತರ ವೈಮಾನಿಕ ಉಪಕರಣಗಳ ಸುರಕ್ಷತೆಯ ಕುರಿತು ಸಲಹೆ ನೀಡುವಂತೆ ಕಂಪನಿಯಾಗಿದೆ.

ಈ ಪ್ರಯೋಗವು ಕರ್ನಾಟಕದಲ್ಲಿ ಯಶಸ್ವಿಯಾದರೆ, ಔಷಧಗಳು ತ್ವರಿತಗತಿಯಲ್ಲಿ ಜನರ ಬಳಿ ತಲುಪಲು ಸಾಧ‌್ಯ. ಟ್ರಾಫಿಕ್ ಜಂಜಾಟವಿಲ್ಲದೇ, ತುರ್ತು ಸಂದರ್ಭದಲ್ಲಿ ಜೀವ ಉಳಿಸುವಂತಹ ಶಕ್ತಿಯನ್ನು ಈ ಡ್ರೋಣ್’ಗಳು ಹೊಂದಿವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.