ಟ್ವಿಟರ್‌ ಹೋಲುವ ಟ್ರಂಪ್‌ ಮಾಲೀಕತ್ವದ ಸೋಷಿಯಲ್‌ ಮೀಡಿಯಾ ʻಟ್ರೂತ್‌ ಸೋಷಿಯಲ್‌ʼಫೆಬ್ರವರಿ 21ಕ್ಕೆ ಆರಂಭ?

ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ಬಹುಕೋಟಿ ಒಡೆಯ ಡೊನಾಲ್ಡ್‌ ಟ್ರಂಪ್‌ ಅವರ ಖಾತೆಯನ್ನು ಟ್ವಿಟರ್‌ ನಿಷೇಧಿಸಿತ್ತು. ಇದರಿಂದ ಅವಮಾನಿತರಾದ ಟ್ರಂಪ್‌ ಕೆಲವೇ ದಿನಗಳಲ್ಲಿ ಹೊಸದೊಂದು ಸಾಮಾಜಿಕ ಜಾಲತಾಣವನ್ನು ಆರಂಭಿಸುವುದಾಗಿ ಘೋಷಿಸಿದ್ದರು.

ಸತ್ಯವನ್ನು ಅನುಸರಿಸು ಎಂಬ ಅಡಿ ಶೀರ್ಷಿಕೆಯನ್ನು ಹೊಂದಿರುವ ಟ್ರೂತ್‌ ಶೋಷಿಯಲ್‌ ಹೆಸರಿನ ಸಾಮಾಜಿಕ ಜಾಲತಾಣ ಪ್ರಯೋಗದ ಹಂತ ತಲುಪಿದ್ದು, ಫೆಬ್ರವರಿ 21ಕ್ಕೆ ಅಧಿಕೃತವಾಗಿ ಲೋಕಾಪರ್ಣೆಯಾಗುವ ನಿರೀಕ್ಷೆ ಇದೆ.

ಪ್ರಸ್ತುತ ಆ‍್ಯಪಲ್‌ ಆ‍್ಯಪ್‌ಸ್ಟೋರಿನಲ್ಲಿ ಈ ಸಾಮಾಜಿಕ ಜಾಲತಾಣದ ಅಪ್ಲಿಕೇಷನ್‌ ವಿವರಗಳು ಪ್ರಕಟವಾಗಿದ್ದು, ಫೆಬ್ರವರಿ 21, 2022 ನಿರೀಕ್ಷಿಸಲಾಗಿದೆ ಎಂದು ಹೇಳಿದೆ.

ಟ್ರಂಪ್‌ ಮೀಡಿಯಾ ಅಂಡ್‌ ಟೆಕ್ನಾಲಜಿ ಗ್ರೂಪ್‌ ಸಂಸ್ಥೆಯಡಿ ಅಭಿವೃದ್ಧಿಗೊಂಡಿರುವ ಈ ಸಾಮಾಜಿಕ ಜಾಲತಾಣದ ವಿನ್ಯಾಸ ಟ್ವಿಟರ್‌ಅನ್ನು ಹೋಲುತ್ತದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. ಟ್ರೂತ್‌ನ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಹಾಗೂ ಸಂಸ್ಥೆಯ ಅಧಿಕೃತ ತಾಣದಲ್ಲಿರುವ ವಿಡಿಯೋ ಕೂಡ ಇದನ್ನು ಪುಷ್ಟೀಕರಿಸುತ್ತದೆ.

ದೈತ್ಯ ಟೆಕ್‌ ಸಂಸ್ಥೆಗಳ ದಬ್ಬಾಳಿಕೆಯ ವಿರುದ್ಧ ಹೋರಾಡಬೇಕು ಎಂಬ ಗುರಿ ಇಟ್ಟುಕೊಂಡಿರುವ ಈ ಸೋಷಿಯಲ್‌ ಮೀಡಿಯಾ ಕಂಪನಿ ಇದುವರೆಗೂ ಒಂದು ಬಿಲಿಯನ್‌ ಡಾಲರ್‌ನಷ್ಟು ಹೂಡಿಕೆಯನ್ನು ಗಳಿಸಿದೆ. ಆದರೆ ಸದ್ಯದ ಚರ್ಚೆ ಏನೆಂದರೆ ಬಲಪಂಥೀಯ ನಿಲುವಿನವರ ವೇದಿಕೆಯಾದ ಪಾರ್ಲರ್‌ ರೀತಿಯಲ್ಲೇ ಟ್ರೂತ್‌ ಸೋಷಿಯಲ್‌ ಆಗದಂತೆ ನೋಡಿಕೊಳ್ಳುವುದೇ ಟ್ರಂಪ್‌ ಮುಂದಿರುವ ಸವಾಲು ಎಂಬುದಾಗಿದೆ.

ಕಳೆದ ವರ್ಷ ಜನವರಿ 21ರಂದು, ಜನವರಿ ೬ರಂದು ಕ್ಯಾಪಿಟಲ್‌ ಕಟ್ಟಡದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಆಧಾರ ರಹಿತ ವಿಡಿಯೋವೊಂದನ್ನು ಟ್ವೀಟ್‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹಿಂಸೆಗೆ ಪ್ರಚೋದಿಸಿದ ಕಾರಣ ನೀಡಿ, ಟ್ವಿಟರ್‌ ಟ್ರಂಪ್‌ ಖಾತೆಯನ್ನು ಶಾಶ್ವತವಾಗಿ ನಿಷೇಧಿಸಿತ್ತು. ನಂತರದಲ್ಲಿ ಫೇಸ್‌ಬುಕ್‌ ಕೂಡ ಟ್ರಂಪ್‌ ಖಾತೆಯನ್ನು ನಿಷೇಧಿಸಿತ್ತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.