ಟ್ವೀಟ್‌ ಅಂಡ್‌ಡು ಮಾಡಲು ಅವಕಾಶ ನೀಡುವ ಟ್ವಿಟರ್‌ ಬ್ಲೂ; ತಿಂಗಳಿಗೆ 3 ಡಾಲರ್‌ಗಳ ಪ್ರೀಮಿಯಂ ಸೇವೆ

ಮೈಕ್ರೊಬ್ಲಾಗಿಂಗ್‌ ತಾಣವಾಗಿ ಅತ್ಯಂತ ಜನಪ್ರಿಯವಾಗಿರುವ ಟ್ವಿಟರ್‌ ಪ್ರೀಮಿಯಂ ಸೇವೆಯನ್ನು ಪರಿಚಯಿಸುತ್ತಿದೆ. ಟ್ವಿಟರ್‌ ಬ್ಲೂ ಹೆಸರಿನ ಈ ಸೇವೆ ವಿಶೇಷ ಫೀಚರ್‌ಗಳನ್ನು ಬಳಕೆದಾರರಿಗೆ ನೀಡಲಿದೆ.

ಮೈಕ್ರೊ ಬ್ಲಾಗಿಂಗ್‌ ತಾಣವಾದ ಟ್ವಿಟರ್‌ ಸದ್ಯದಲ್ಲೇ ಚಂದಾ ಆಧರಿಸಿದ ‘ಟ್ವಿಟರ್‌ ಬ್ಲೂ’ ಹೆಸರಿನ ಸೇವೆಯನ್ನು ಪರಿಚಯಿಸುತ್ತಿದ್ದು ತಿಂಗಳಿಗೆ 2.99 ಡಾಲರ್‌ಗಳಿಗೆ ಈ ಸೇವೆ ಲಭ್ಯವಾಗಲಿದೆ ಎನ್ನಲಾಗಿದೆ. ದರದ ವಿಷಯದಲ್ಲಿ ಇನ್ನು ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ.

ಟ್ವಿಟರ್‌ನಲ್ಲಿನಲ್ಲಿ ಒಮ್ಮೆ ಪ್ರಕಟಿಸಿದ ಟ್ವೀಟ್‌ಅನ್ನು ಹಿಂದಕ್ಕೆ ಪಡೆಯುವ, ಅಂಡ್‌ ಡು ಮಾಡುವ ಅವಕಾಶವಿಲ್ಲ. ಆದರೆ ಟ್ವಿಟರ್‌ ಬ್ಲೂ ಈ ಸೇವೆಯನ್ನು ಬಳಕೆದಾರರಿಗೆ ಒದಗಿಸಲಿದೆ.

ಎಡಿಟ್‌ ಮಾಡುವ ಅವಕಾಶವಿಲ್ಲದಿದ್ದರೂ, ಅಂಡ್‌ ಡು ಮಾಡಿ, ತಿದ್ದುಪಡಿಗಳೊಂದಿಗೆ ಮತ್ತೆ ಟ್ವೀಟ್‌ ಮಾಡುವುದಕ್ಕೆ ಈ ಫೀಚರ್‌ ಅವಕಾಶ ಕಲ್ಪಿಸುತ್ತದೆ.

ಇದರ ಜೊತೆಗೆ ಬುಕ್‌ಮಾರ್ಕ್‌ ಫೀಚರ್‌ ಲಭ್ಯವಾಗಲಿದೆ. ಇದು ನಿಮ್ಮ ಇಷ್ಟ, ಉಪಯುಕ್ತ ಟ್ವೀಟ್‌ಗಳನ್ನು ಬುಕ್‌ ಮಾಡಿಕೊಳ್ಳುವ ಜೊತೆಗೆ, ಪ್ರತ್ಯೇಕ ಫೋಲ್ಡರ್‌ಗಳನ್ನು ಹೊಂದುವುದಕ್ಕೂ ಸಾಧ್ಯವಾಗಲಿದೆ.

ಜಾಹೀರಾತು ಮುಕ್ತ ಸುದ್ದಿ, ಲೇಖನಗಳನ್ನು ಓದಬಹುದು ಎಂಬುದು ಈ ಟ್ವಿಟರ್‌ ಬ್ಲೂನ ವಿಶೇಷ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.