ಹೊಸ ಐಟಿ ನಿಯಮಗಳನ್ನು ಅನುಸರಿಸಲು ಕಾಲಾವಕಾಶ ಕೇಳಿದ ಟ್ವಿಟರ್

ಟ್ವಿಟರ್ ಹೊಸ ನಿಯಮಗಳನ್ನು ಪಾಲಿಸಲು ಸಿದ್ದವಿದ್ದು, ಭಾರತದಲ್ಲಿ ಇರುವಂತಹ ಕೋವಿಡ್ ಪರಿಸ್ಥಿಯ ಕಾರಣ ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಕೇಂದ್ರವನ್ನು ಸಂಪರ್ಕಿಸಿದೆ, ಎಂದು ಪಿಟಿಐ ವರದಿ ಮಾಡಿದೆ. 

ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ನಡುವೆ ಹೊಸ ಐಟಿ ನಿಯಮಗಳ ಕುರಿತು ಉಂಟಾದ ಜಟಾಪಟಿ ಮುಕ್ತಾಯಗೊಳ್ಳುವ ಹಂತಕ್ಕೆ ತಲುಪಿದ ಹಾಗೆ ಕಾಣುತ್ತಿದೆ.  ಇಲ್ಲಿಯವರೆಗೆ ಹೊಸ ನಿಯಮಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದ ಟ್ವಿಟರ್, ಈಗ ನಿಯಗಳನ್ನು ಪಾಲಿಸಲು ಮತ್ತಷ್ಟು ಕಾಲಾವಕಾಶವನ್ನು ಕೇಳಿದೆ. 

ಟ್ವಿಟರ್ ಹೊಸ ನಿಯಮಗಳನ್ನು ಪಾಲಿಸಲು ಸಿದ್ದವಿದ್ದು, ಭಾರತದಲ್ಲಿ ಇರುವಂತಹ ಕೋವಿಡ್ ಪರಿಸ್ಥಿಯ ಕಾರಣ ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಕೇಂದ್ರವನ್ನು ಸಂಪರ್ಕಿಸಿದೆ, ಎಂದು ಪಿಟಿಐ ವರದಿ ಮಾಡಿದೆ. 

ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಟ್ವಿಟರ್ ಅಧಿಕೃತ ವಕ್ತಾರರು, ಸಾಮಾಜಿಕ ಸಂವಹನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಭಾರತದಲ್ಲಿ ಕಾರ್ಯ ನಿರ್ಬಹಿಸಲು ಟ್ವಿಟರ್ ಬದ್ದವಾಗಿದೆ. ಹೊಸ ನಿಯಮಗಳನ್ನು ಒಪ್ಪಿಕೊಂಡು ಅದರಂತೆ ಕಾರ್ಯನಿರ್ವಹಿಸುತ್ತೇವೆ ಎಂದು ನಾವು ಕೇಂದ್ರ ಸರ್ಕಾರಕ್ಕೆ ಆಶ್ವಾಸನೆ ನಿಡಿದ್ದೇವೆ. ಭಾರತದ ಸರ್ಕಾರದೊಂದಿಗೆ ನಮ್ಮ ಕ್ರಿಯಾಶೀಲ ಮಾತುಕತೆಯನ್ನು ನಾವು ಖಂಡಿತ ಮುಂದುವರೆಸುತ್ತೇವೆ, ಎಂದು ಹೇಳಿದ್ದಾರೆ. 

ಕಳೆದ ವಾರ ಕೇಂದ್ರ ಸರ್ಕಾರ ಟ್ವಿಟರ್’ಗೆ ತೀಕ್ಷ್ಣವಾದ ನೋಟಿಸ್ ಜಾರಿಮಾಡಿತ್ತು. ಭಾರತೀಯರಿಗೆ ಸುರಕ್ಷಿತವಾದ ಅನುಭವವನ್ನು ನೀಡಲು ಟ್ವಿಟರ್ ವಿಫಲವಾಗಿದೆ ಎಂದು ಕಿಡಿಕಾರಿತ್ತು. 

“ಭಾರತದಲ್ಲಿ ದಶಕಗಳಿಗೂ ಅಧಿಕ ಕಾಲದಿಂದ ಕಾರ್ಯನಿರ್ವಹಿಸುತ್ತಿಎರುವ ಟ್ವಿಟರ್, ಭಾರತೀಯರಿಗಾಗಿ ಪಾರದರ್ಶಕ ರೀತಿಯಲ್ಲಿ ಅವರ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯವಿಧಾನವನ್ನು ಅನುಸರಿಸಲು ನಿರಾಕರಿಸಿದೆ,” ಎಂದು ಹೇಳಿತ್ತು. 

ಒಂದು ವೇಳೆ ಹೊಸ ಐಟಿ ನಿಯಮಗಳನ್ನು ಮೇ 26ರ ಒಳಗಾಗಿ ಟ್ವಿಟರ್ ಒಪ್ಪಿಕೊಳ್ಳದೇ ಇದ್ದಲ್ಲಿ ಕಠಿಣ ನಿರ್ಧಾರವನ್ನು ಕೈಗೊಳ್ಳುವುದಾಗಿ ಟ್ವಿಟರ್ ಎಚ್ಚರಿಕೆ ನೀಡಿತ್ತು. ಆದರೆ, ಒಂದು ಕೊನೆಯ ಅವಕಾಶವೆಂಬಂತೆ ನೋಟಿಸ್ ನಿಡಲಾಗುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ತಿಳಿಸಿತ್ತು. ಈ ನೋಟಿಸ್ ಜಾರಿಯಾದ ಬಳಿಕೆ ಮೆತ್ತಗಾಗಿರುವ ಟ್ವಿಟರ್, ಹೊಸ ನಿಯಮಗಳನ್ನು ಅನುಸರಿಸಲು ಸಿದ್ದ ಎಂದು ಹೇಳಿದೆ. 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.