ವಿಶ್ವದ ದೊಡ್ಡಣ್ಣ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ಅಮೆರಿಕ, ಬಾಹ್ಯಾಕಾಶದಲ್ಲಿಯೂ ತನ್ನ ಅಧಿಪತ್ಯವನ್ನು ಸ್ಥಾಪಿಸಲು ಹಿಂದಿನಿಂದಲೂ ಪ್ರಯತ್ನಿಸಿಕೊಂಡು ಬಂದಿದೆ. ಈಗ ಹೊಸದೊಂದು ಯೋಜನೆಗೆ ಕೈ ಹಾಕಿದ್ದು ಚಂದ್ರ ಮತ್ತು ಮಂಗಳ ಗ್ರಹದ ಅಂಗಳದಲ್ಲಿ ನ್ಯೂಕ್ಲಿಯರ್ ಪವರ್ ಪ್ಲಾಂಟ್ ನಿರ್ಮಿಸುಲು ಸಿದ್ಧತೆ ನಡೆಸುತ್ತಿದೆ.
ಅಮೆರಿಕ ಚಂದ್ರ ಮತ್ತು ಮಂಗಳ ಗ್ರಹಗಳಲ್ಲಿ ಪರಮಾಣು ವಿದ್ಯುತ್ ಸ್ಥಾವರಗಳನ್ನು (ನ್ಯೂಕ್ಲಿಯರ್ ಪವರ್ ರಿಯಾಕ್ಟರ್) ನಿರ್ಮಿಸಲು ಬಯಸಿದೆ ಮತ್ತು ಅದನ್ನು ಹೇಗೆ ನಿರ್ಮಿಸಬೇಕು ಎಂಬುದರ ಕುರಿತು ಖಾಸಗಿ ವಲಯದಿಂದ ಸಲಹೆಗಳನ್ನು ವಿನಂತಿಸಿದ್ದು, ಯಾರಿಗಾದರು ಯೋಜನೆಗಳಿದ್ದರೆ ತಿಳಿಸುವಂತೆ ಮನವಿ ಮಾಡಿದೆ.
ಅಮೆರಿಕ ಇಂಧನ ಇಲಾಖೆಯು ವಿದಳನದ ಮೂಲಕ ವಿದ್ಯುತ್ ಪಡೆಯುವ ಘಟಕಗಳನ್ನು ಬಾಹ್ಯಾಕಾಶದಲ್ಲಿ ನಿರ್ಮಿಸಿಲು ಕಾರಣವನ್ನು ತಿಳಿಸಿದ್ದು, ಕಠಿಣ ಬಾಹ್ಯಾಕಾಶ ಪರಿಸರದಲ್ಲಿ ಮನುಷ್ಯರಿಗೆ ದೀರ್ಘಕಾಲ ಬದುಕಲು ಅನುವು ಮಾಡಿಕೊಡುತ್ತದೆ ಎಂದಿದೆ.
“ಸಣ್ಣ ಪರಮಾಣು ರಿಯಾಕ್ಟರ್‌ಗಳು ಫೆಡರಲ್ ಸರ್ಕಾರಕ್ಕೆ ಆಸಕ್ತಿಯ ಬಾಹ್ಯಾಕಾಶ ಪರಿಶೋಧನೆ ಕಾರ್ಯಾಚರಣೆಗಳಿಗೆ ಅಗತ್ಯವಾದ ವಿದ್ಯುತ್ ಸಾಮರ್ಥ್ಯವನ್ನು ಒದಗಿಸಬಲ್ಲವು” ಎಂದು ಅಮೆರಿಕಾದ ಇಂಧನ ಇಲಾಖೆ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಬಾಹ್ಯಾಕಾಶದಲ್ಲಿ ರಿಯಾಕ್ಟರ್ ಸ್ಥಾಪಿಸುವ ಯೋಜನೆಯು ಎರಡು ಹಂತಗಳನ್ನು ಹೊಂದಿರಲಿದೆ. ಮೊದಲನೆಯದು ರಿಯಾಕ್ಟರ್ ವಿನ್ಯಾಸವನ್ನು ಅಭಿವೃದ್ಧಿಪಡಿಸುವುದು, ಪರೀಕ್ಷಾ ರಿಯಾಕ್ಟರ್ ನಿರ್ಮಿಸುವುದು ಮತ್ತು ರಿಯಾಕ್ಟರ್ ಅನ್ನು ಚಂದ್ರನಿಗೆ ಕಳುಹಿಸುವುದು.
ಎರಡನೇಯದು ರಿಯಾಕ್ಟರ್ ಅನ್ನು ಚಂದ್ರನಿಗೆ ಸಾಗಿಸಬಲ್ಲ ಫ್ಲೈಟ್ ಸಿಸ್ಟಮ್ ಮತ್ತು ಲ್ಯಾಂಡರ್ ಅನ್ನು ಅಭಿವೃದ್ಧಿಪಡಿಸುವುದು. ಅಮೆರಿಕಾ ರಿಯಾಕ್ಟರ್, ಫ್ಲೈಟ್ ಸಿಸ್ಟಮ್ ಮತ್ತು ಲ್ಯಾಂಡರ್ ಅನ್ನು 2026 ರ ಅಂತ್ಯದ ವೇಳೆಗೆ ಸಿದ್ಧಪಡಿಸುವ ಗುರಿಯನ್ನು ಹೊಂದಿದೆ.
ಅಮೆರಿಕಾದ ಪ್ರತಿ ಮನೆಯು ವರ್ಷವೊಂದರಲ್ಲಿ ಸುಮಾರು 11,000 ಕಿಲೋವ್ಯಾಟ್-ಗಂಟೆಗಳ ವಿದ್ಯುತ್ ಅನ್ನು ಬಳಕೆ ಮಾಡುತ್ತದೆ ಎನ್ನಲಾಗಿದೆ. ಹಾಗಾಗಿ ಬಾಹ್ಯಾಕಾಶಕ್ಕೆ ಕಳುಹಿಸುವ ರಿಯಾಕ್ಟರ್ ಗಳು ಕನಿಷ್ಠ 10 ಕಿಲೋವ್ಯಾಟ್ ವಿದ್ಯುತ್ ಅನ್ನು ನಿರಂತರವಾಗಿ ಉತ್ಪಾದನೆ ಮಾಡುವಷ್ಟು ಶಕ್ತವಾಗಿಸುವ ಯೋಜನೆಯನ್ನು ಹೊಂದಿದೆ. ಚಂದ್ರ ಅಥವಾ ಮಂಗಳ ಗ್ರಹದ ವಿದ್ಯುತ್ ಅಗತ್ಯಗಳನ್ನು ಪೂರೈಸಲು ಬಹು ಲಿಂಕ್ಡ್ ರಿಯಾಕ್ಟರ್‌ಗಳನ್ನು ಸ್ಥಾಪಿಸುವ ಯೋಜನೆ ಇದೆ ಎಂದು ಇಂಧನ ಇಲಾಖೆ ತಿಳಿಸಿದೆ.
ಇದನ್ನು ಓದಿ: ಇಂಟರ್ನೆಟ್ ಇಲ್ಲದೇ PUBG ಇನ್ಸ್ಟಾಲ್ ಮಾಡುವುದು ಹೇಗೆ ಗೊತ್ತಾ?
ಈಗಾಗಲೇ ಅಮೆರಿಕವು ಸಾಕಷ್ಟು ಸುಧಾರಿತ ಪರಮಾಣು ರಿಯಾಕ್ಟರ್‌ಗಳನ್ನು ಹೊಂದಿದ್ದು, ಅವುಗಳಲ್ಲಿ ಅತ್ಯುತ್ತಮ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದೆ.
ಅಮೆರಿಕಾದಲ್ಲಿ ಮೈಕ್ರೋ ರಿಯಾಕ್ಟರ್ ಗಳನ್ನು ನೋಡಬಹುದಾಗಿದ್ದು, ಅವುಗಳಲ್ಲಿನ ಕೆಲವು ಪರಮಾಣು ವಿದ್ಯುತ್ ಸ್ಥಾವರಗಳು ನೀರನ್ನು ಬಳಕೆ ಮಾಡದೇ ತಂಪಾಗಿಸುವ ವ್ಯವಸ್ಥೆಯನ್ನು ಸಹ ಹೊಂದಿವೆ. ಆದರೆ ವಿಶ್ವದ ಎಲ್ಲಡೆ ನೀರಿನಿಂದ ಮಾತ್ರವೇ ತಂಪಾಗುವ ಪರಮಾಣು ರಿಯಾಕ್ಟರ್‌ಗಳು ಕಾರ್ಯನಿರ್ವಹಿಸುತ್ತಿವೆ.