ಹೀಗೆ ಮಾಡಿದರೆ ಜಾಹೀರಾತುಗಳ ಕಿರಿಕಿರಿ ಇಲ್ಲದೆ ಯೂಟ್ಯೂಬ್‌ ವಿಡಿಯೋಗಳನ್ನು ನೋಡಬಹುದು!!

ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ನೋಡುವುದು ಒಂದು ರೀತಿಯಲ್ಲಿ ಟಿವಿಯನ್ನು ನೋಡಿದ ಹಾಗೆ. ಏಕೆಂದರೆ ಅಷ್ಟೊಂದು ಜಾಹೀರಾತುಗಳು. ವಿಡಿಯೋವನ್ನು ಸತತವಾಗಿ ನೋಡಲು ಸಾಧ್ಯವೇ ಇಲ್ಲ. ಆದರೆ, ಈಗ ಅದಕ್ಕೊಂದು ಪರಿಹಾರ ಸಿಕ್ಕಿದೆ. ಏನದು?

youtube stream without advertisements

ಈಗ ಮನರಂಜನೆಗಾಗಿ ಟಿವಿ ನೋಡುವುದು ಕಡಿಮೆ. ಯೂಟ್ಯೂಬ್‌ ಅತಿ ದೊಡ್ಡ ಮನರಂಜನ ಕೇಂದ್ರವಾಗಿ ಬದಲಾಗಿದೆ. ಹಾಗಾಗಿ ಯೂಟ್ಯೂಬ್‌ ಕೂಡ ಜಾಹೀರಾತುಗಳನ್ನು ಎಗ್ಗಿಲ್ಲದೆ ಪ್ರತಿವಿಡಿಯೋದ ಆರಂಭದಲ್ಲಿ, ಮಧ್ಯದಲ್ಲಿ ಕೊನೆಯಲ್ಲಿ ಬಿತ್ತರಿಸುತ್ತದೆ.

ಈ ಜಾಹೀರಾತುಗಳ ಕಿರಿಕಿರಿಯಿಂದ ಮುಕ್ತಿ ಪಡೆಯುವುದಕ್ಕೆ ಕನಿಷ್ಠ ಐದು ಸೆಕೆಂಡ್‌ಗಳಾದರೂ ಕಾಯಬೇಕು. ಆಮೇಲೆ ಸ್ಕಿಪ್‌ ಮಾಡಿ ಮತ್ತೊಂದು ಜಾಹೀರಾತು ಪ್ರತ್ಯಕ್ಷವಾಗುವವರೆಗೆ ನಿರಾತಂಕವಾಗಿ ನೋಡಬಹುದು. ಆದರೆ ಜಾಹೀರಾತಿನಿಂದ ಸಂಪೂರ್ಣ ಮುಕ್ತಿ ಸಿಗುವುದಿಲ್ಲ!

ಆದರೆ ರೆಡಿಟ್‌ ತಾಣದಲ್ಲಿ u/unicorn4sale ಹೆಸರಿನ ಬಳಕೆದಾರ ಒಂದು ಸರಳ ಉಪಾಯವನ್ನು ಕಂಡುಕೊಂಡಿದ್ದಾರೆ. ತಾಂತ್ರಿಕ ಭಾಷೆಯಲ್ಲಿ ಹೇಳುವುದಾದರೆ ಇದೊಂದು ಬಗ್‌, ಲೋಪ. ಯಾವುದೇ ಯೂಟ್ಯೂಬ್‌ ಲಿಂಕ್‌ನಲ್ಲಿ youtube.com ನಂತರದಲ್ಲಿ ಬರುವ ‘/’ ಚಿಹ್ನೆಗೂ ಮೊದಲು ಒಂದು ಚುಕ್ಕಿ (.)ಹಾಕಿ ಪ್ಲೇ ಮಾಡಿದರೆ, ಆ ವಿಡಿಯೋದಲ್ಲಿ ಮುಂದೆ ಕಾಣಿಸಿಕೊಳ್ಳಬಹುದಾದ ಎಲ್ಲ ಜಾಹೀರಾತುಗಳನ್ನು ಬ್ಲಾಕ್‌ ಮಾಡುತ್ತದೆ!

ಇದನ್ನೂ ಓದಿ | ವಿಡಿಯೋ |ಆಕಾಶದಿಂದ ಭೂಮಿ ಹೇಗೆ ಕಾಣುತ್ತದೆ ನೋಡಿದ್ದೀರಾ? ಇಲ್ಲಿದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ 24×7 ನೇರ ಪ್ರಸಾರ !

ಇದು ಕೇವಲ ಡೆಸ್ಕ್‌ಟಾಪ್‌ ಬ್ರೌಸರ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ. ಮೊಬೈಲ್‌ನಲ್ಲಿ ಯೂಟ್ಯೂಬ್‌ ಆಪ್‌ ಬದಲಿಗೆ ಬ್ರೌಸರ್‌ ಮೂಲಕ ನೋಡುವವರು ರಿಕ್ವೆಸ್ಟ್‌ ಡೆಸ್ಕ್‌ಟಾಪ್‌ ಆಯ್ಕೆ ಮಾಡಿಕೊಂಡು, ಅದರಲ್ಲಿ ಈ ತಂತ್ರ ಬಳಸಿ ವಿಡಿಯೋ ನೋಡಬಹುದು.

ನಾನು ಆರಂಭದಲ್ಲೇ ಹೇಳಿದಂತೆ ಇದೊಂದು ಬಗ್‌ ಆಗಿದ್ದು, ಯೂಟ್ಯೂಬ್‌ ಯಾವ ಕ್ಷಣದಲ್ಲಾದರೂ ಇದನ್ನು ಸರಿಪಡಿಸಿ, ಜಾಹೀರಾತು ಇಲ್ಲದೆ ವಿಡಿಯೋ ನೋಡುವ ಆಸೆಗೆ ತಣ್ಣೀರು ಎರಚಬಹುದು!!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.