ವಾಟ್ಸ್‌ಆಪ್‌ನ ಹೊಸ ವರಸೆ: ಖಾಸಗಿ ನೀತಿ ಒಪ್ಪಿಕೊಳ್ಳದಿದ್ದರೆ, ಎಲ್ಲ ಸೇವೆ ಸಿಗೊಲ್ಲ!

ವಾಟ್ಸ್‌ಆಪ್‌ ಖಾಸಗಿ ನೀತಿ ವಿವಾದಕ್ಕೆ ಈಡಾಗಿತ್ತು. ಹಾಗಾಗಿ ಹೊಸ ನಿಯಮಗಳನ್ನು ಹಿಂಪಡೆಯಿತು. ಆದರೆ ಬಳಕೆದಾರ ಮಾಹಿತಿಯ ಮೇಲೆ ಹಿಡಿತ ಸಾಧಿಸುವುದಕ್ಕೆ ಹಟಕ್ಕೆ ಬಿದ್ದಂತೆ ಇದೆ. ಖಾಸಗಿ ನೀತಿ ಒಪ್ಪಿಕೊಳ್ಳದಿದ್ದರೆ, ಖಾತೆ ಡಿಲೀಟ್‌ ಮಾಡುವುದಿಲ್ಲ ಎಂದ ವಾಟ್ಸ್‌ಆಪ್‌ ಈಗ ಸೇವೆಯನ್ನು ಸೀಮಿತಗೊಳಿಸುತ್ತಿದೆ!

ಇತ್ತೀಚೆಗೆ ಹೊಸ ಖಾಸಗಿ ನೀತಿಯನ್ನು ಒಪ್ಪಿಕೊಳ್ಳುವಂತೆ ದಿನ (ಮೇ 15)ನಿಗದಿ ಪಡಿಸಿದ್ದ ವಾಟ್ಸ್‌ಆಪ್‌ ತನ್ನ ನಿಲುವಿನಿಂದ ಹಿಂದೆ ಸರಿದಿತ್ತು. ಖಾಸಗಿ ನೀತಿ ಒಪ್ಪಿಕೊಳ್ಳದಿದ್ದರೆ, ಷರತ್ತಿನ ಖಾತೆ ಡಿಲೀಟ್‌ ಮಾಡುವ ನಿಲುವನ್ನು ಕೈಬಿಟ್ಟಿತ್ತು. ಆದರೆ ಈ ಪ್ರಕಟಣೆ ಹೊರಡಿಸಿದ ಒಂದು ವಾರದಲ್ಲಿ ಹೊಸ ವರಸೆಯನ್ನು ಪ್ರದರ್ಶಿಸಿದೆ.

‘ಹೊಸ ನಿಯಮಗಳನ್ನು ಒಪ್ಪಿಕೊಳ್ಳುವಂತೆ ಬಳಕೆದಾರರಿಗೆ ನೆನಪಿಸಲಾಗುವುದು. ಒಪ್ಪಿಕೊಳ್ಳದವರಿಗೆ ಕೆಲವೇ ದಿನಗಳಲ್ಲಿ ಸೀಮಿತವಾದ ಸೇವೆ ಮಾತ್ರ ಲಭ್ಯವಾಗುವುದು’ ಎಂದು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.

‘ಇದು ಏಕ ಕಾಲಕ್ಕೆ ಜಾರಿಗೆ ಬರುವುದಿಲ್ಲ. ಮೊದ ಮೊದಲು ಬಳಕೆದಾರರಿಗೆ ಚಾಟ್‌ಲಿಸ್ಟ್‌ ನೋಡಲು ನಿರ್ಬಂಧಿಸಲಾಗುವುದು. ಇದಾಗಿಯೂ ಷರತ್ತುಗಳನ್ನು ಒಪ್ಪಿಕೊಳ್ಳದೇ ಇದ್ದಲ್ಲಿ ಒಳಬರುವ ಕರೆಗಳನ್ನು ಸ್ವೀಕರಿಸಲು ನಿರ್ಬಂಧಿಸಲಾಗುವುದು. ನೋಟಿಫಿಕೇಷನ್‌ಗಳನ್ನು ತಡೆ ಹಿಡಿಯಲಾಗುವುದು’ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಈ ಕ್ರಮಗಳು ಎಂದಿನಿಂದ ಜಾರಿಗೆ ಬರಲಿವೆ ಎಂಬುದನ್ನು ವಾಟ್ಸ್‌ಆಪ್‌ ಸ್ಪಷ್ಟಪಡಿಸಿಲ್ಲ.

ಹೊಸ ಖಾಸಗಿ ನೀತಿಯ ವಿಷಯದಲ್ಲಿ ತೀವ್ರ ಟೀಕೆ ಮತ್ತು ಮುಖಭಂಗ ಅನುಭವಿಸಿದ ಫೇಸ್‌ಬುಕ್‌ ಖಾಸಗಿ ನೀತಿ ಜಾರಿಗೊಳಿಸುವುದನ್ನು ತಡ ಮಾಡಿತ್ತು. ಆದರೆ ಅನ್ಯ ಆಪ್‌ಗಳತ್ತ ಬಳಕೆದಾರರು ವಾಲಲು ಆರಂಭಿಸಿದ್ದರಂತೆ ತನ್ನ ನಿರ್ಧಾರದಿಂದ ಹಿಂದೆ ಸರಿದು ಹೊಸ ನಿಯಮಗಳ ಜಾರಿಯನ್ನು ಕೈಬಿಟ್ಟಿತ್ತು. ಆದರೆ ಈಗ ಅನ್ಯ ಮಾರ್ಗದ ಮೂಲಕ ಬಳಕೆದಾರರ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸುತ್ತಿರುವುದು ವಾಟ್ಸ್‌ಆಪ್‌ ಹೇಳಿಕೆಯಿಂದ ಸ್ಪಷ್ಟವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.