1969ರ ಜುಲೈ 16ರಂದು ಆಕಾಶಕ್ಕೆ ನೆಗೆದ ಅಪೊಲೊ 11, ನಾಲ್ಕು ದಿನಗಳ ನಂತರ ಇತಿಹಾಸ ಬರೆಯಿತು. ಭೂಮಿಯ ಸುತ್ತ ಪ್ರದಕ್ಷಿಣೆ ಹಾಕುವ ಚಂದ್ರನ ಮೇಲೆ ಮಾನವ ಪದಾರ್ಪಣೆಗೆ ಕಾರಣವಾಯಿತು. ಆ ಕ್ಷಣಗಳನ್ನು ಚಿತ್ರಿಸುವ ಸಾಕ್ಷ್ಯಚಿತ್ರ ಇಲ್ಲಿದೆ ನೋಡಿ
ಅಪೋಲೋ 11 ನೌಕೆ, ನೀಲ್ ಆರ್ಮ್‌ಸ್ಟ್ರಾಂಗ್ ನೇತೃತ್ವದಲ್ಲಿ 1969ರ ಜುಲೈ 16ರಂದು ಗಗನಕ್ಕೆ ಹಾರಿತು. 12 ನಿಮಿಷಗಳಲ್ಲಿ ಭೂಮಿಯ ಕಕ್ಷೆಗೆ ತಲುಪಿ, ಭೂಮಿಯ ಸುತ್ತ ಒಂದೂವರೆ ಬಾರಿ ಸುತ್ತಿದ ನಂತರ ಚಂದ್ರನತ್ತ ಹಾರಿತು. ಜುಲೈ 19ರಂದು ರಂದು ಚಂದ್ರನ ಮೇಲ್ಮೆಯ ಹತ್ತಿರ ತಲುಪಿದ ನೌಕೆ ಮೂವತ್ತು ಬಾರಿ ಚಂದ್ರನನ್ನು ಪ್ರದಕ್ಷಿಣೆ ಹಾಕಿತು. ಜುಲೈ 20ರಂದು ನೌಕೆಯ ಘಟಕ “ಈಗಲ್” ಪ್ರಧಾನ ನೌಕೆಯಿಂದ ಬೇರೆಯಾಗಿ ಚಂದ್ರನ ಮೇಲೆ ಇಳಿಯಿತು. ಈ ಕ್ಷಣ ಮನುಕುಲದ ಜಿಗಿತ ಎಂದು ಇತಿಹಾಸ ಬರೆಯಿತು.