ಇಲ್ಲಿವೆ ನೆಟ್‌ಫ್ಲಿಕ್ಸ್‌ ಒರಿಜಿನಲ್‌ ಡಾಕ್ಯುಮೆಂಟ್ರಿ ಮತ್ತು ಸರಣಿಯ 34 ವಿಡಿಯೋಗಳು, ಸಂಪೂರ್ಣ ಉಚಿತ!

ಶೈಕ್ಷಣಿಕ ಮಹತ್ವ ಇರುವ 34 ವಿಡಿಯೋಗಳನ್ನು ನೆಟ್‌ಫ್ಲಿಕ್ಸ್‌ ಉಚಿತವಾಗಿ ಲಭ್ಯವಾಗಿಸಿದೆ. ಯೂಟ್ಯೂಬ್‌ನಲ್ಲಿ ಈ ವಿಡಿಯೋಗಳು ಲಭ್ಯವಿದ್ದು, ವಿಜ್ಞಾನ, ತಂತ್ರಜ್ಞಾನ, ಕಲೆಯನ್ನು ಕುರಿತು ವಿಶಿಷ್ಟ ಮಾಹಿತಿಯನ್ನು ನೀಡುತ್ತವೆ. ಅಷ್ಟೂ ವಿಡಿಯೋಗಳು ಲಿಂಕ್‌ ಇಲ್ಲಿವೆ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಲ್ಲ ಕಲಿಕೆಯೂ ಆನ್‌ಲೈನ್‌ ಮೂಲಕ ಆಗುತ್ತಿದೆ. ನೆಟ್‌ಫ್ಲಿಕ್ಸ್‌ ವಿಷಯಾಸಕ್ತರು ಮತ್ತು ಶಿಕ್ಷಕ- ವಿದ್ಯಾರ್ಥಿಗಳಿಗೆ ನೆರವಾಗಲೆಂದು ತನ್ನದೇ ನಿರ್ಮಾಣದ ಮೂವತ್ತ ನಾಲ್ಕು ವಿಡಿಯೋಗಳನ್ನು ಉಚಿತವಾಗಿ ನೀಡುತ್ತಿದೆ. ಹಲವು ಸಾಕ್ಷ್ಯಚಿತ್ರಗಳಿಗೆ ಪೂರಕವಾದ ಶೈಕ್ಷಣಿಕ ಮಾಹಿತಿಗಳನ್ನು ಒದಗಿಸಿದೆ.

ವಿಶ್ವದ ಹಲವು ಭಾಗಗಳಲ್ಲಿ ಈ ಸಾಕ್ಷ್ಯಚಿತ್ರಗಳನ್ನು ಶಾಲೆಗಳಲ್ಲಿ ಪ್ರದರ್ಶಿಸುವ ಪರಿಪಾಠವನ್ನು ಅನೇಕ ಶಿಕ್ಷಕರು ಪಾಲಿಸುತ್ತಾ ಬಂದಿದ್ದರು. ಆದರೆ ಶಾಲೆಗಳು ಮುಚ್ಚಿರುವುದರಿಂದ ಈ ಸಾಕ್ಷ್ಯಚಿತ್ರಗಳು ಉಚಿತವಾಗಿ ಲಭ್ಯವಾಗುವಂತಾದರೆ, ಮಕ್ಕಳ ಕಲಿಕೆಗೆ ಅನುಕೂಲವಾಗುತ್ತದೆ ಎಂದು ಶಿಕ್ಷಕರು ಮಾಡಿದ ಮನವಿಗೆ ನೆಟ್‌ಫ್ಲಿಕ್ಸ್‌ ಸ್ಪಂದಿಸಿ ಈ ಸಾಕ್ಷ್ಯಚಿತ್ರಗಳನ್ನು ಉಚಿತವಾಗಿ ನೀಡುತ್ತಿದೆ.

13th

ಆಸ್ಕರ್‌ಗೆ ನಾಮ ನಿರ್ದೇಶನಗೊಂಡಿದ್ದ ಈ ಸಾಕ್ಷ್ಯಚಿತ್ರ ಗುಲಾಮ ಪದ್ಧತಿ ಕುರಿತು ಮಾಹಿತಿಯನ್ನು ನೀಡುತ್ತದೆ . ಅವಾ ಡ್ಯುವರ್ನಿ ನಿರ್ದೇಶನದಲ್ಲಿ ಹೊರಬಂದ ಈ ಸಾಕ್ಷ್ಯಚಿತ್ರ ಅಮೆರಿಕದ ಸಂವಿಧಾನದಲ್ಲಿ ಗುಲಾಮ ಪದ್ಧತಿ ನಿಯಂತ್ರಣಕ್ಕೆ ತಂದ ತಿದ್ದುಪಡಿಗಳ ವಿವರಗಳನ್ನು, ನಡೆದ ಹೋರಾಟಗಳನ್ನು ಕಟ್ಟಿಕೊಡುತ್ತದೆ.

ಅಬ್‌ಸ್ಟ್ರಾಕ್ಟ್‌: ದಿ ಆರ್ಟ್‌ ಆಫ್‌ ಡಿಸೈನ್‌ (ಸೀಸನ್‌ 1)

ಎಂಟು ಕಂತುಗಳಿರುವ ಈ ಸರಣಿಯಲ್ಲಿ ಯಾವುದೇ ವಿನ್ಯಾಸದ ಹಿಂದಿರುವ ಕಲೆ, ವಿಜ್ಞಾನ ಮತ್ತು ತಾತ್ವಿಕತೆಯನ್ನು ಪರಿಚಯಿಸುತ್ತದೆ. ಅತ್ಯಂತ ಜನಪ್ರಿಯವಾದ ಸಾಕ್ಷ್ಯಚಿತ್ರ ಸರಣಿ ಇದು.

ಕಂತು 1

ಕಂತು 2

ಕಂತು 3

ಕಂತು 4

ಕಂತು 5

ಕಂತು 6

ಕಂತು 7

ಕಂತು 8

ಬೇಬೀಸ್

ಸರಣಿಯ ಆಯ್ದ ಕಂತುಗಳನ್ನು ಉಚಿತವಾಗಿ ನೀಡಲಾಗಿದೆ. ಮಗುವಿನ ಹುಟ್ಟಿನ ಮೊದಲ ವರ್ಷದ ಎಲ್ಲ ಸಂಗತಿಗಳನ್ನು ಈ ಸರಣಿ ದಾಖಲಿಸುತ್ತದೆ. ತೆವಳುವುದು, ನಿದ್ರೆ, ತೊದಲುನುಡಿ, ಪ್ರೀತಿ ಇತ್ಯಾದಿಗಳನ್ನು ಸರಣಿ ಕಟ್ಟಿಕೊಡುತ್ತದೆ.

ಕಂತು 1

ಕಂತು 2

ಕಂತು 3

ಕಂತು 4

ಕಂತು 5

ಚೇಸಿಂಗ್‌ ಕೋರಲ್

ಹವಳದ ದಂಡೆಗಳ ಪ್ರಕೃತಿಯ ವಿಸ್ಮಯಗಳಲ್ಲಿ ಒಂದು. ಈ ದಂಡೆಗಳ ಆಸಕ್ತಿ ಇರುವ ಚಿತ್ರ ನಿರ್ಮಾಪಕರು, ವಿಜ್ಞಾನಿಗಳು, ವಿಷಯಾಸಕ್ತರು ಹವಳದಂಡೆಗಳ ಸ್ಥಿತಿಗಳನ್ನು ಅಧ್ಯಯನ ಮಾಡುತ್ತಿರುವ ಬಗ್ಗೆ, ಅವುಗಳ ರಕ್ಷಣೆಗೆ ಶ್ರಮಿಸುತ್ತಿರುವವರ ಬಗ್ಗೆ ಈ ಸಾಕ್ಷ್ಯಚಿತ್ರ ಮಾಹಿತಿ ನೀಡುತ್ತದೆ.

ಎಕ್ಸ್‌ಪ್ಲೇನ್ಡ್‌

ಈ ಸರಣಿಯ ಆಯ್ದ ಏಳು ಕಂತುಗಳನ್ನು ಮುಕ್ತವಾಗಿ ನೀಡಲಾಗಿದೆ. ಜಾಗತಿಕವಾಗಿರುವ ನೀರಿನ ಸಮಸ್ಯೆ, ಜನಾಂಗ ಮತ್ತು ಲಿಂಗ ತಾರತಮ್ಯದಂತಹ ಸಾಮಾಜಿಕ ವಿಷಯಗಳು, ಮಹಿಳೆಯರಿಗೆ ಯಾಕೆ ಕಡಿಮೆ ವೇತನ, ಕ್ರಿಕೆಟ್‌ ಆಟ, ಷೇರುಮಾರುಕಟ್ಟೆಯಂತಹ ವಿಷಯಗಳ ಬಗ್ಗೆ ತಿಳಿಸುವ ಕಂತುಗಳು ಇಲ್ಲಿವೆ.

ಕಂತು 1

ಕಂತು 2

ಕಂತು 3

ಕಂತು 4

ಕಂತು 5

ಕಂತು 6

ಕಂತು 7

ನಾಕ್‌ಡೌನ್‌ ದಿ ಹೌಸ್‌

ಅಮೆರಿಕದ ನಾಲ್ಕು ಸಾಮಾನ್ಯ ಮಹಿಳೆಯರು ಹುಟ್ಟಿಹಾಕುವ ಚಳವಳಿಯನ್ನು ಈ ಸಾಕ್ಷ್ಯಚಿತ್ರ ಚಿತ್ರಿಸುತ್ತದೆ. ಕಳೆದ ವರ್ಷದ ಸನ್‌ಡಾನ್ಸ್‌ ಚಿತ್ರೋತ್ಸವದಲ್ಲಿ ಬಹು ಚರ್ಚೆಗೆ ಕಾರಣವಾದ ಈ ಸಾಕ್ಷ್ಯಚಿತ್ರ ಅಪಾರ ಪ್ರಶಂಸೆಗೆ ಪಾತ್ರವಾದುದು.

ಅವರ್‌ ಪ್ಲಾನೆಟ್‌

ಡೇವಿಡ್‌ ಅಟೆನ್‌ಬರೋ ನಿರೂಪಣೆ ಮಾಡಿರುವ ಬಿಬಿಸಿ ಸಾಕ್ಷ್ಯಚಿತ್ರಗಳ 8 ಕಂತುಗಳು ಇಲ್ಲಿವೆ. ನಿಸರ್ಗದ ಅಚ್ಚರಿಗಳನ್ನು ಅನಾವರಣ ಮಾಡುವ ಈ ಕಂತುಗಳನ್ನು 600 ಮಂದಿ 50 ದೇಶಗಳನ್ನು ಸುತ್ತಿ ಚಿತ್ರಿಸಿದ್ದಾರೆ. ಕಾಡು, ಕರಾವಳಿ, ಮರುಭೂಮಿ, ಪರ್ವತಗಳು, ಹಿಮಪ್ರದೇಶಗಳನ್ನು, ಅಲ್ಲಿನ ಅಚ್ಚರಿಗಳನ್ನು ಈ ಕಂತುಗಳಲ್ಲಿ ನೋಡಬಹುದು.

ಕಂತು 1

ಕಂತು 2

ಕಂತು 3

ಕಂತು 4

ಕಂತು 5

ಕಂತು 6

ಕಂತು 7

ಕಂತು 8

ಪೀರಿಯಡ್‌. ಎಂಡ್‌ ಅಫ್‌ ಸೆಂಟೆನ್ಸ್‌

2019ರಲ್ಲಿ ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್‌ ಪಡೆದ ಈ ಸಾಕ್ಷ್ಯಚಿತ್ರ ಭಾರತದ ಮಹಿಳೆಯರನ್ನು ಕುರಿತದ್ದು. ಋತುಸ್ರಾವದ ದಿನಗಳಲ್ಲಿ ಎದುರಿಸುವ ಸಮಸ್ಯೆಗಳು, ಅದರ ಬಗ್ಗೆ ಸಮಾಜದಲ್ಲಿರುವ ಮಡಿವಂತಿಕೆ ಮತ್ತು ಗ್ರಾಮೀಣ ಮಹಿಳೆಯರು ಕಂಡುಕೊಂಡ ಪರಿಹಾರಗಳನ್ನು ಈ ಸಾಕ್ಷ್ಯಚಿತ್ರ ಚಿತ್ರಿಸಿತ್ತು.

ದಿ ವೈಟ್‌ ಹೆಲ್ಮೆಟ್ಸ್‌

ಬಿಳಿ ಹೆಲ್ಮೆಟ್‌ ತೊಟ್ಟು ರಕ್ಷಣೆಯ ಕಾರ್ಯದಲ್ಲಿ ತೊಡಗಿರುವವರ ಸವಾಲಿನ ಕೆಲಸಗಳನ್ನು ಚಿತ್ರಿಸುವ ಈ ಸಾಕ್ಷ್ಯಚಿತ್ರ 2017ರಲ್ಲಿ ಆಸ್ಕರ್‌ ಪ್ರಶಸ್ತಿ ಪಡೆದುಕೊಂಡಿದೆ. ಸಿರಿಯಾದ ಅಲೆಪ್ಪೊದಲ್ಲಿ ರಕ್ಷಣಾ ಕಾರ್ಯದಲ್ಲಿ ಶ್ರಮಿಸಿದವರನ್ನು ಪರಿಚಯಿಸುತ್ತದೆ.

ಜಿಯಾನ್‌

ಈ ಕಿರು ಸಾಕ್ಷ್ಯಚಿತ್ರ ಜಿಯಾನ್‌ ಕ್ಲಾರ್ಕ್‌ ಎಂಬ ಯುವ ಕುಸ್ತಿಪಟುವಿನ ಸವಾಲಿನ ಬದುಕನ್ನು ಪರಿಚಯಿಸುತ್ತದೆ. ಕಾಲುಗಳಿಲ್ಲದೆ ಹುಟ್ಟಿದ ಈತ, ತನ್ನ ಮಿತಿಯನ್ನೇ ಶಕ್ತಿಯನ್ನಾಗಿಸಿಕೊಂಡು ವಿಶ್ವವೇ ಬೆರಗಾಗುವಂತೆ ಬೆಳೆದ ಬಗೆಯನ್ನು ವಿವರಿಸುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.