ಬಜೆಟ್‌ 2020| ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಸಿಕ್ಕಿದ್ದೇನು?

ಡಿಜಿಟಲ್‌ ಇಂಡಿಯಾ, ಸ್ಟಾರ್ಟಪ್‌ ಇಂಡಿಯಾಗಳಿಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿರುವ ಪ್ರಸ್ತುತ ಸರ್ಕಾರ 2020 ಬಜೆಟ್‌ನಲ್ಲಿ ತಂತ್ರಜ್ಞಾನವನ್ನು ವಿವಿಧ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವ ಆಸಕ್ತಿ ತೋರಿದೆ. ಹಾಗಾಗಿ ತಂತ್ರಜ್ಞಾನ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದು ಅರ್ಥ ಸಚಿವರು ತಿಳಿಸಿದ್ದಾರೆ

  • ಸರ್ಕಾರಿ ಇ-ಮಾರ್ಕೆಟ್‌ ಮೂಲಕ ಸಮಗ್ರ ಸಂಗ್ರಹ ವ್ಯವಸ್ಥೆಯನ್ನು ರೂಪಿಸುವ ಮೂಲಕ ಒಂದೇ ಮೂಲದ ಮೂಲಕ ಸರಕು, ಸೇವೆ ಮತ್ತು ಇತರೆ ಕಾರ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಿದೆ.
  • ಡಾಟಾ ಹೊಸ ತೈಲ. ಯಾವುದೇ ಸೇವೆಯ ಪ್ರತಿ ಹಂತದಲ್ಲಿ ದತ್ತಾಂಶ ಅಗತ್ಯ. ಖಾಸಗಿ ವಲಯದಲ್ಲಿ ಡಾಟಾ ಸೆಂಟರ್‌ ಪಾರ್ಕ್‌ಗಳನ್ನು ದೇಶದ ವಿವಿಧ ಭಾಗಗಳಲ್ಲಿ ನಿರ್ಮಿಸಲು ಅನುವು ಮಾಡಿಕೊಡುವ ನೀತಿಯನ್ನು ಶೀಘ್ರ ಜಾರಿಗೊಳಿಸಲಾಗುವುದು
  • ರಾಷ್ಟ್ಟೀಯ ಮಿಷನ್‌ ಅಡಿಯಲ್ಲಿ ಕ್ವಾಂಟಂ ಟೆಕ್ನಾಲಜಿ ಅಭಿವೃದ್ಧಿಗೆ ಐದು ವರ್ಷಗಳ ಅವಧಿಗೆ ಸುಮಾರು 8000 ಎಕರೆ ಪ್ರದೇಶ ನೀಡುವ ಪ್ರಸ್ತಾವನೆ.
  • ಭಾರತ್‌ ನೆಟ್‌ ಮೂಲಕ 1 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಫೈಬರ್‌ ನೆಟ್‌ ಸಂಪರ್ಕ
  • ಸಮಗ್ರ ಮಾಹಿತಿ ಪೋರ್ಟಲ್‌ ಅನ್ನು ರೂಪಿಸುವ ನಿಟ್ಟಿನಲ್ಲಿ ಹೊಸ ನೀತಿ ರಚನೆಗೆ ಆದ್ಯತೆ. ಈ ಮೂಲಕ ಸರಿಯಾದ ಸಮಯಕ್ಕೆ ಮಾಹಿತಿ ವಿಲೇವಾರಿಯತ್ತ ಗಮನ.
  • ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಡಿಜಿಟಲ್‌ ಪ್ಲಾಟ್‌ಫಾರಂ ನಿರ್ಮಾಣ. ಈ ವಿಷಯವಾಗಿ ಇರುವ ಗೊಂದಲ, ಮಾಹಿತಿ ಕೊರತೆ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ
  • 1 ಕೋಟಿ ಯುವಕರಿಗೆ ಉದ್ಯಮ ಕೇಂದ್ರಿತ ಅಂದರೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌, 3ಡಿ ಪ್ರಿಂಟಿಂಗ್‌, ರೊಬೊಟಿಕ್ಸ್ ಮತ್ತು ಬಿಗ್‌ಡಾಟಾಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಹೊಂದಲು ಅನುಕೂಲವಾಗುವ ತರಬೇತಿಗೆ ಆದ್ಯತೆ
  • ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಐದು ಸ್ಮಾರ್ಟ್‌ ಸಿಟಿಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರಗಳೊಂದಿಗೆ ಕೈ ಜೋಡಿಸಲಾಗುವುದು
  • ಹೊಸ ಉದ್ಯಮಿಗಳಿಗೆ ಹೂಡಿಕೆ, ಸಾಲ ವ್ಯವಸ್ಥೆ ಸೇರಿದಂತೆ ವಿವಿಧ ರೀತಿಯಲ್ಲಿ ನೆರವಾಗಲು ಕ್ಲಿಯರೆನ್ಸ್‌ ಸೆಲ್‌ ನಿರ್ಮಾಣ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.