ಕರೋನಾ ಕಳವಳ | ಕೋವಿಡ್‌-19 ಸೋಂಕಿನ ಬಗ್ಗೆ ನಿಮಗಿರಬಹುದಾದ ಅನುಮಾನಗಳಿಗೆ ಇಲ್ಲಿದೆ ಉತ್ತರ

ಕರೋನಾ ವೈರಸ್‌ ಈ ಜಗತ್ತನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಹಲವು ಮಾಧ್ಯಮಗಳ ಮೂಲಕ ಹಲವು ರೀತಿಯ ವಿಷಯಗಳು ಚರ್ಚೆಯಾಗುವಾಗ ಗೊಂದಲ ಮೂಡುವುದು ಸಹಜ. ಹಾಗೆಯೇ ಆತಂಕವೂ ಉಂಟಾಗುತ್ತದೆ. ಚಿಂತೆ ಬಿಡಿ. ಕರೋನಾ ವೈರಸ್‌ ಬಗ್ಗೆ ಇರುವ ನಿಮ್ಮ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರಗಳು

ಕೋವಿಡ್ -19ರ ಸೋಂಕಿನ ಇನ್ ಕ್ಯುಬೇಷನ್ ಅವಧಿ ಎಷ್ಟು?

ಸೋಂಕು ಪತ್ತೆಯಾದ ನಂತರ 14 ದಿನಗಳ ದಿನವನ್ನು ಇನ್ ಕ್ಯುಬೇಷನ್ ಅವಧಿ ಎಂದು ಪರಿಗಣಿಸಲಾಗುತ್ತದೆ. ಸೋಂಕಿಗೆ ಗುರಿಯಾದ ಐದು ದಿನಗಳ ಬಳಿಕ ಹಲವು ಪ್ರಕರಣಗಳು ವರದಿಯಾಗಿವೆ. ಕುಟುಂಬಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ ಅಂದಾಜು ಮೂರು ರಿಂದ ಆರು ದಿನಗಳಲ್ಲಿ ಜ್ವರ ಮತ್ತು ಉಸಿರಾಟದ ಸಮಸ್ಯೆಗಳೊಂದಿಗೆ ಕಾಣಿಸಿಕೊಳ್ಳುತ್ತದೆ.

ಕೋವಿಡ್-19 ಪರೀಕ್ಷೆಗೆ ಎಷ್ಟು ಸಮಯಬೇಕು?

1-3 ದಿನ

ಯಾರೆಲ್ಲರಿಗೆ ಹೆಚ್ಚಿನ ಸಮಸ್ಯೆಯಾಗುತ್ತದೆ?

ವಿವಿಧ ರೀತಿಯಲ್ಲಿ ಎಲ್ಲರೂ ಅಪಾಯ ಎದುರಿಸಬೇಕಾಗುತ್ತದೆ. ಅದರಲ್ಲೂ ಹೆಚ್ಚಿನ ಸಮಸ್ಯೆಗೆ ಸಿಲುಕಿಕೊಳ್ಳುವವರೆಂದರೆ:

  1. ಸಾಮಾಜಿಕವಾಗಿ ಬೇಜವಾಬ್ದಾರಿಯಾಗಿರುವವರು
  2. ಮಕ್ಕಳು
  3. ಗರ್ಭಿಣಿಯರು
  4. ವಯಸ್ಸಾದವರು
  5. ವಯೋವೃದ್ಧರ ಆಶ್ರಮಗಳು

ಹಾಗಾದರೆ ನಾವು ವಹಿಸಬೇಕಾದ ಮುನ್ನೆಚ್ಚರಿಕೆಗಳೇನು?

ಯಾವಾಗ ಯಾವಾಗ ನಾವು ಕೈ ತೊಳೆದುಕೊಳ್ಳಬೇಕು?

ಮುಖವನ್ನು ಮುಟ್ಟಿಕೊಳ್ಳುವುದಕ್ಕೂ ಮುನ್ನ ಸೋಪು ಅಥವಾ ಸ್ಯಾನಿಟೈಸರ್‌ನಿಂದ ಕೈತೊಳೆದುಕೊಳ್ಳಬೇಕು. ಕೈ ತೊಳೆಯದೇ ಕಣ್ಣು, ಮೂಗು ಮತ್ತು ಬಾಯಿ ಮುಟ್ಟಬಾರದು.

ಜ್ವರದ ಲಕ್ಷಣಗಳು ಕಂಡುಬಂದರೆ ಏನು ಮಾಡಬೇಕು?

ಎಲ್ಲರಿಂದ ದೂರವಿರಬೇಕು(ಸೆಲ್ಫ್‌ ಕ್ವಾರಂಟೈನ್‌), ಜೊತೆಗೆ ಸಹಾಯವಾಣಿ -104ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಕುಟುಂಬದ ವೈದ್ಯರು ಅಥವಾ ಹತ್ತಿರದಲ್ಲಿರುವ ಸುಸಜ್ಜಿತ ಆಸ್ಪತ್ರೆಗೆ ಭೇಟಿ ನೀಡಿ. ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ನೀಡುವ ಸಲಹೆ-ಸೂಚನೆಗಳನ್ನು ಪಾಲಿಸಿ.

ಸ್ವತಃ ಪರೀಕ್ಷೆ ಮಾಡಿಕೊಳ್ಳುವ ಕಿಟ್‌ ಗಳೇನಾದರು ಇವೆಯೇ?

ಇಲ್ಲ

ಆರೋಗ್ಯವಾಗಿರುವವರು ಮಾಸ್ಕ್ ಧರಿಸುವ ಅಗತ್ಯವಿದೆಯೇ?

ಕೋವಿಡ್-19 ಸೋಂಕು ಇದ್ದಲ್ಲಿ ಅಥವಾ ಸೋಂಕಿತರ ಆರೈಕೆಯಲ್ಲಿ ತೊಡಗಿದ್ದವರು ಮಾತ್ರ ಮಾಸ್ಕ್ ಧರಿಸಬೇಕು (ಕೆಮ್ಮು ಇದ್ದರೆ ಮಾತ್ರ). ಬಳಸಿ ಎಸೆಯುವಂತಹ ಮಾಸ್ಕ್ ಗಳನ್ನು ಒಮ್ಮೆ ಮಾತ್ರ ಬಳಸಬೇಕು. ಸೋಂಕಿತರಲ್ಲದವರು ಮಾಸ್ಕ್ ಧರಿಸುವ ಅಗತ್ಯವಿಲ್ಲ. ಜಗತ್ತಿನಾದ್ಯಂತ ಮಾಸ್ಕ್ ಗಳಿಗೆ ಸಾಕಷ್ಟು ಕೊರತೆಯಿದೆ. ವಿಶ್ವ ಆರೋಗ್ಯ ಸಂಸ್ಥೆಯು ಮಾಸ್ಕ್ ಗಳನ್ನು ಜವಾಬ್ದಾರಿಯಿಂದ ಬಳಸುವಂತೆ ಸಲಹೆ ನೀಡಿದೆ.

ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್‌ಗಳು ಪರಿಣಾಮಕಾರಿಯಾಗಿ ಸ್ವಚ್ಛ ಮಾಡುತ್ತವೆಯೇ?

ಹ್ಯಾಂಡ್ ಸ್ಯಾನಿಟೈಸರ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದ್ದರಿಂದ ಕನಿಷ್ಠ 30 ಸೆಕೆಂಡ್ ಕೈತೊಳೆದುಕೊಳ್ಳಬೇಕು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.