ಸುಳ್ಳು ಸುದ್ದಿ ಹಬ್ಬಿಸುವುದನ್ನು ತಡೆಯಲು ವಾಟ್ಸ್ಆಪ್‌ ನಿಂದ ಹೊಸ ಪ್ರಯತ್ನ: ವೆಬ್ ಸರ್ಚ್ ಆಯ್ಕೆ!

ಸುಳ್ಳು ಸುದ್ದಿಯನ್ನು ತಡೆಯಲು ವಾಟ್ಸ್‌ಆಪ್ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿದೆ. ಭಾರತದಲ್ಲಿ ವಾಟ್ಸ್‌ಆಪ್‌ ಮೂಲಕ ಹಬ್ಬುತ್ತಿರುವ ಸುಳ್ಳು ಸುದ್ಧಿಗಳಿಂದಾಗಿ ಸಾಕಷ್ಟು ತೊಂದರೆಗಳು, ಪ್ರಾಣ ಹಾನಿ ಸಂಭವಿಸಿದೆ. ಈ ಹಿನ್ನಲೆಯಲ್ಲಿ ಸರ್ಕಾರವು ವಾಟ್ಸ್‌ಆಪ್‌ ಗೆ ಸುಳ್ಳು ಸುದ್ದಿಯ ಪ್ರಸಾರವನ್ನು ತಡೆಯುವಂತೆ ಸೂಚನೆಯನ್ನು ನೀಡಿತ್ತು.

ಈ ಹಿನ್ನಲೆಯಲ್ಲಿ ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ಆಪ್ ಭಾರತದಲ್ಲಿ ಹೆಚ್ಚುತ್ತಿರುವ ಸುಳ್ಳು ಸುದ್ದಿ ಪ್ರಸಾರವನ್ನು ತಡೆಯಲು ಹಲವು ಮಾದರಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಿದೆ.

ಅಲ್ಲದೇ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕೋವಿಡ್ -19 ಕುರಿತಂತೆ ನಕಲಿ ಸುದ್ದಿಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಕಲಿ ಸುದ್ದಿಯನ್ನು ತಡೆಯಲು ಹೊಸ ಆಯ್ಕೆಯನ್ನು ವಾಟ್ಸ್‌ಆಪ್ ನೀಡಿದೆ.  

ಬಳಕೆದಾರರು ಸುಲಭವಾಗಿ ತಮಗೆ ವಾಟ್ಸ್‌ಆಪ್ ಮೂಲಕ ಬಂದಿರುವ ಸುದ್ದಿಯ ನಿಖರತೆಯನ್ನು ತಿಳಿದುಕೊಳ್ಳಲು ಅವುಗಳ ಕುರಿತು ವಾಟ್ಸ್‌ಆಪ್‌ ಮೂಲಕ ಗೂಗಲ್‌ನಲ್ಲಿ ಸರ್ಚ್ ಮಾಡುವ ಹೊಸದೊಂದು ಆಯ್ಕೆಯನ್ನು ನೀಡಿದೆ.  

ಈ ವರ್ಷದ ಆರಂಭದಲ್ಲಿ ವಾಟ್ಸಾಪ್ ಫಾರ್ವರ್ಡ್ ಮೆಸೇಜ್ ಗಳನ್ನು ಕೇವಲ ಐದು ಬಳಕೆದಾರರಿಗೆ ಮಾತ್ರವೇ ಕಳುಹಿಸಲು ಅವಕಾಶವನ್ನು ಮಾಡಿಕೊಟ್ಟಿತ್ತು. ಇದರರ್ಥ ವಾಟ್ಸಾಪ್ ಬಳಕೆದಾರರು ಆ ಸಮಯದಲ್ಲಿ ಐದು ಕ್ಕೂ ಹೆಚ್ಚು ಬಳಕೆದಾರರಿಗೆ ಸಂದೇಶಗಳನ್ನು ಫಾರ್ವರ್ಡ್ ಮಾಡಲು ಸಾಧ್ಯವಿರಲಿಲ್ಲ.

ಈಗ ಫಾರ್ವರ್ಡ್ ಮಾಡಿದ ನಕಲಿ ಸಂದೇಶಗಳನ್ನು ಮತ್ತಷ್ಟು ಗುರುತಿಸಲು ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಈಗ ‘ವೆಬ್ ನಲ್ಲಿ ಹುಡುಕಿ’ ವೈಶಿಷ್ಟ್ಯವನ್ನು ಪರಿಚಯಿಸಿದೆ.

ಹೊಸ ವಾಟ್ಸ್‌ಆಪ್ ವೈಶಿಷ್ಟ್ಯವು ಅನೇಕ ಬಾರಿ ಫಾರ್ವರ್ಡ್ ಮಾಡಲಾದ ಸಂದೇಶಗಳನ್ನು ಹುಡುಕಲು ಸರಳವಾದ ಮಾರ್ಗವನ್ನು ಒದಗಿಸುತ್ತಿದೆ, ಇದು ಸ್ವೀಕರಿಸಿದ ವಿಷಯದ ಬಗ್ಗೆ ಸುದ್ದಿ ಫಲಿತಾಂಶಗಳನ್ನು ಅಥವಾ ಇತರ ಮಾಹಿತಿಯ ಮೂಲಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.

ಬಳಸುವುದು ಹೇಗೆ?

ವೆಬ್ ವೈಶಿಷ್ಟ್ಯವನ್ನು ಸುಲಭವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಬಳಕೆದಾರರು ಫಾರ್ವರ್ಡ್ ಮೇಸೆಜ್‌ ಪಕ್ಕದಲ್ಲಿ ಸರ್ಜ್ ಚಿಹ್ನೆಯ ಬಟನ್ ಕ್ಲಿಕ್ ಮಾಡಿದೆ. ಸಾಕು ಇದು ಬಳಕೆದಾರರನ್ನು ಗೂಗಲ್ ಸರ್ಜ್‌ಗೆ ಕರೆದುಕೊಂಡು ಹೋಗಲಿದೆ. ಅಲ್ಲಿಯೇ ಸಂದೇಶವು ನಕಲಿ ಅಥವಾ ನಿಜವೇ ಎಂಬ ಫಲಿತಾಂಶಗಳನ್ನು ತೋರಿಸುತ್ತದೆ.

ಹೊಸ ಅಪ್‌ಡೇಟ್‌ನಲ್ಲಿ ಹಲವು ಬಾರಿ ಫಾರ್ವರ್ಡ್ ಮಾಡಲಾದ ಚಾಟ್‌ಗಳಲ್ಲಿ ಹಂಚಲಾದ ಸಂದೇಶಗಳಿಗೆ ವಿಶೇಷ ಫಾರ್ವರ್ಡ್ ಮಾಡಲಾದ ಲೇಬಲ್ ಅನ್ನು ನೀಡಲಿದೆ. ಈ ಎರಡು ಫೀಚರ್‌ಗಳು ಜನರಿಗೆ ನಕಲಿ ಸುದ್ದಿಗಳ ಬಗ್ಗೆ ಎಚ್ಚರ ವಹಿಸಲು ಸಹಾಯ ಮಾಡಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.