ಹೊಸ ಖಾಸಗಿ ನೀತಿ: ಟೀಕೆಗೆ ಹೆದರಿ ಮೂರು ತಿಂಗಳು ಮುಂದೂಡಿದ ವಾಟ್ಸ್‌ಆಪ್‌

ಕಳೆದ ಹದಿನೈದು ದಿನಗಳಿಂದ ವಾಟ್ಸ್‌ಆಪ್‌ನ ಹೊಸ ಖಾಸಗಿ ನೀತಿಯ ಕುರಿತು ಚರ್ಚೆ. ಫೆಬ್ರವರಿ 8ರಂದು ಜಾರಿಗೆ ತರಲು ನಿಗದಿಯಾಗಿದ್ದ ಈ ನೀತಿಯಿಂದಾಗಿ ಬಳಕೆದಾರರು ವಾಟ್ಸ್‌ಆಪ್‌ಗೆ ವಿದಾಯ ಹೇಳಲಾರಂಭಿಸಿದ್ದರು

ವಾಟ್ಸ್‌ಆಪ್
ವಾಟ್ಸ್‌ಆಪ್

ಬಳಕೆದಾರರ ಮಾಹಿತಿಯನ್ನು ತನ್ನ ಮಾರುಕಟ್ಟೆಯ ಅಗತ್ಯಗಳಿ ಬಳಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದು, ವಾಟ್ಸ್‌ಆಪ್‌ ಹಿಂದೆ ಸರಿದಿದೆ. ಫೆಬ್ರವರಿ 8ರಂದು ಜಾರಿ ಮಾಡಲು ನಿರ್ಧರಿಸಿದ್ದ ಹೊಸ ಖಾಸಗಿ ನೀತಿಯನ್ನು ಮೂರು ತಿಂಗಳು ಮುಂದೂಡಿದೆ.

ಜನವರಿ ಮೊದಲ ವಾರದಲ್ಲಿ ಭಾರತೀಯ ಬಳಕೆದಾರರಿಗೆ ತನ್ನ ಹೊಸ ಖಾಸಗಿ ಜಾರಿ ಕುರಿತು ಮಾಹಿತಿ ನೀಡಿದ, ಸಮ್ಮತಿ ಇರುವವರು ಮುಂದುವರೆಯುವಂತೆ, ಇಲ್ಲದವರ ಖಾತೆಯನ್ನು ಡಿಲೀಟ್‌ ಮಾಡುವುದಾಗಿ ಹೇಳಿತ್ತು.

ವಕೀಲ ಚೈತನ್ಯ ರೋಹಿಲ್ಲಾ ಅವರು ಈ ಅರ್ಜಿಯನ್ನು ಸಲ್ಲಿಸಿದ್ದು, ಅವರು ತಮ್ಮ ಅರ್ಜಿಯಲ್ಲಿ ವಾಟ್ಸ್​ಆ್ಯಪ್​ನ ಹೊಸ ಗೌಪ್ಯತೆ ನೀತಿಯು ವ್ಯಕ್ತಿಯ ಖಾಸಗೀತನದ ಹಕ್ಕಿನ ಉಲ್ಲಂಘನೆಯಾಗಿದೆ ಹೇಳಿದ್ದಾರೆ. ಖಾಸಗೀತನದ ಹಕ್ಕನ್ನು ಸುಪ್ರೀಂ ಕೋರ್ಟ್ ಸಹ ಮೂಲಭೂತ ಹಕ್ಕು ಎಂದು ಈಗಾಗಲೇ ಘೋಷಿಸಿದೆ.

ವಾಟ್ಸ್​ಆ್ಯಪ್​ನ ಹೊಸ ಗೌಪ್ಯತೆ ನೀತಿಯ ಪ್ರಕಾರ ವಾಟ್ಸ್​ಆ್ಯಪ್​ ತನ್ನ ಗ್ರಾಹಕರ ಸಂದೇಶ ಸೇರಿದಂತೆ ಯಾವುದೇ ವ್ಯಯಕ್ತಿಕ ಮಾಹಿತಿಯನ್ನು ಲಾಭಕ್ಕಾಗಿ ಮಾರಿಕೊಳ್ಳುವ ಅವಕಾಶವನ್ನು ಹೊಂದಿರುತ್ತದೆ ಎಂದು ಹೊಸ ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿತ್ತು.

ಇದರಿಂದ ಅಸಮಾಧಾನಗೊಂಡ ಬಳಕೆದಾರರು ಪರ್ಯಾಯ ಆಪ್‌ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಲಾರಂಭಿಸಿದರು. ಅಷ್ಟೇ ಅಲ್ಲದೆ ವಾಟ್ಸ್‌ಆಪ್‌ ವಿರುದ್ಧ ತೀವ್ರವಾದ ಟೀಕಾ ಪ್ರಹಾರಗಳು ನಡೆದವು. ಅಷ್ಟೇ ಅಲ್ಲ, ದೆಹಲಿ ಹೈಕೋರ್ಟ್‌ನಲ್ಲಿ ವಾಟ್ಸ್‌ಆಪ್‌ ವಿರುದ್ಧ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೂ ಸಲ್ಲಿಕೆಯಾಯಿತು.

ಈ ಎಲ್ಲ ಬೆಳವಣಿಗೆಗಳಿಂದ ಬೆದರಿದ ವಾಟ್ಸ್‌ ಆಪ್ ಸಂಸ್ಥೆ, ಹೊಸ ಖಾಸಗಿ ನೀತಿಯ ಬಗ್ಗೆ ಸುಳ್ಳುಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿ ಬಳಕೆದಾರರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿತ್ತು.

ಆದರೂ ಪ್ರಯತ್ನ ಫಲಿಸದೇ ಈಗ ಹೊಸ ಖಾಸಗಿ ನೀತಿ ಜಾರಿಯನ್ನು ಮೂರು ತಿಂಗಳ ಮುಂದೂಡಿದೆ. ಈ ಅವಧಿಯಲ್ಲಿ ತನ್ನ ಹೊಸ ನೀತಿಯ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿ, ಗೊಂದಲಗಳನ್ನು ಬಗೆಹರಿಸುವ ಉದ್ದೇಶವಿರುವುದಾಗಿ ವಾಟ್ಸ್‌ಆಪ್‌ ತಿಳಿಸಿದೆ.

ಈ ಕುರಿತು ತನ್ನ ಕಂಪನಿ ಬ್ಲಾಗ್‌ನಲ್ಲಿ ಸುದೀರ್ಘವಾದ ಬರಹವನ್ನು ಪ್ರಕಟಿಸಿರುವ ವಾಟ್ಸ್‌ಆಪ್‌, ‘ ವಾಟ್ಸ್ ಆಪ್‌ ಒಂದು ಸರಳವಾದ ಪರಿಕಲ್ಪನೆಯ ಮೇಲೆ ನಿರ್ಮಾಣವಾಗಿದೆ; ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳುವ ಯಾವುದೇ ಮಾಹಿತಿ ನಿಮ್ಮ ನಡುವೆಯೇ ಇರುತ್ತದೆ. ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಷನ್‌ ಮೂಲಕ ನಿಮ್ಮ ಖಾಸಗಿ ಸಂವಾದವನ್ನು ರಕ್ಷಿಸುತ್ತೇವೆ. ಹಾಗಾಗಿ ವಾಟ್ಸ್‌ಆಪ್‌ ಆಗಲಿ, ಫೇಸ್‌ಬುಕ್‌ ಆಗಲಿ ಇದನ್ನು ನೋಡಲು ಸಾಧ್ಯವಿಲ್ಲ” ಎಂದು ಸಮಜಾಯಿಷಿ ನೀಡಲೆತ್ನಿಸಿದೆ.

ಉದ್ಯಮ-ವ್ಯವಹಾರಗಳ ದೃಷ್ಟಿಯಿಂದ ಈ ಹೊಸ ನೀತಿಯನ್ನು ತರಲು ಹೊರಟಿರುವುದಾಗಿ ಹೇಳಿರುವ ವಾಟ್ಸ್‌ಆಪ್‌ ಎಲ್ಲ ಗೊಂದಲ ನಿವಾರಣೆಯ ಮೂಲಕ ಹೊಸ ಖಾಸಗಿ ನೀತಿ ಜಾರಿಗೊಳಿಸಲಾಗುವುದು ಎಂದಿದೆ.

One thought on “ಹೊಸ ಖಾಸಗಿ ನೀತಿ: ಟೀಕೆಗೆ ಹೆದರಿ ಮೂರು ತಿಂಗಳು ಮುಂದೂಡಿದ ವಾಟ್ಸ್‌ಆಪ್‌

  1. Nice and clean write up.
    Rumba dhanyavadagalu tech Kannada. Namma pray at a Dina kaldante mattashtu yasaswiyagalendu haaraisutteve.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.