ವಾಟ್ಸ್‌ಆ್ಯಪ್‌ ಹೊಸ 5 ಫೀಚರ್ಸ್‌ಗಳು | ಸುಳ್ಳು ಸುದ್ದಿ ನಿಯಂತ್ರಣಕ್ಕೆ ಆದ್ಯತೆ, ನಿರಾಳ ಬಳಕೆಗೆ ಒತ್ತು

ಫೇಸ್‌ಬುಕ್‌ ಮಾಲಿಕತ್ವದ ವಾಟ್ಸ್‌ಆ್ಯಪ್‌ ಈ ವರ್ಷ ಒಂದಾದ ಮೇಲೆ ಒಂದು ಹೊಸ ಫೀಚರ್‌ ಬಿಡುಗಡೆ ಮಾಡುತ್ತಲೇ ಇದೆ. ಈಗ ಐದು ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡುವುದಕ್ಕೆ ಫೇಸ್‌ಬುಕ್‌ ಸಿದ್ಧವಾಗಿದ್ದು, ಇದರ ಪ್ರಯೋಗಾರ್ಥ ಪರೀಕ್ಷೆ ನಡೆದಿದೆ

ಬೀಟಾ ವರ್ಷನ್‌ ಬಳಕೆಯ ಅನುಭವಕ್ಕೆ ಆಹ್ವಾನವನ್ನೂ ನೀಡಿದ್ದ ಫೇಸ್‌ಬುಕ್‌ ಬಳಕೆದಾರರ ಅಭಿಪ್ರಾಯವನ್ನು ಆಧರಿಸಿ ಬದಲಾವಣೆಗಳೊಂದಿಗೆ ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಏನಿವು ಹೊಸ ಫೀಚರ್‌? ಮುಂದೆ ಓದಿ.

ಫಾರ್ವರ್ಡ್‌ ಮೆಸೇಜ್‌ ಮಾಹಿತಿ

ಸುಳ್ಳು ಸುದ್ದಿ ವ್ಯಾಪಕವೂ, ಜಾಗತಿಕ ಸಮಸ್ಯೆಯೂ ಆಗಿ ಬೆಳೆದಿದೆ. ಇದರಲ್ಲಿ ವಾಟ್ಸ್‌ಆಪ್‌ನದ್ದು ದೊಡ್ಡ ಪಾಲು. ಹಾಗಾಗಿ ಸ್ವತಃ ಫೇಸ್‌ಬುಕ್‌ ಇದನ್ನು ನಿಯಂತ್ರಿಸುವುದಕ್ಕೆ ಮುಂದಾಗಿದ್ದು, ಯಾವುದೇ ಫಾರ್ವರ್ಡ್‌ ಮೆಸೇಜ್ ಬಂದರೆ, ಅದು ಎಷ್ಟು ಬಾರಿ ಫಾರ್ವರ್ಡ್‌ ಆಗಿದೆ ಎಂಬ ಮಾಹಿತಿಯನ್ನು ನೀಡುತ್ತದೆ. 4ಕ್ಕೂ ಹೆಚ್ಚು ಬಾರಿ ಫಾರ್ವರ್ಡ್‌ ಆಗಿರುವ ಮೆಸೇಜ್‌ ಆದರೆ, “ಫ್ರೀಕ್ವೆಂಟ್ಲಿ ಫಾರ್ವರ್ಡೆಡ್‌” ಮೆಸೇಜ್‌ ಎಂದು ತಿಳಿಸುತ್ತದೆ.

ಉತ್ಪನ್ನಗಳ ಕ್ಯಾಟಲಾಗ್‌

ಸಣ್ಣ ಉದ್ದಿಮೆಗಳಿಗೆ ನೆರವು ನೀಡುವಂತಾಗಲೆಂದು ಉತ್ಪನ್ನಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ನೀಡಲಿದೆ. ಉದ್ಯಮಗಳ ಪ್ರೊಫೈಲ್‌ನಲ್ಲೇ ಉತ್ಪನ್ನಗಳ ಪಟ್ಟಿ ಕಾಣಿಸಿಕೊಳ್ಳಲಿದೆ. ಗ್ರಾಹಕರು/ಬಳಕೆದಾರರು ಇಲ್ಲಿ ಉತ್ಪನ್ನಗಳನ್ನು ನೋಡಿ ವ್ಯವಹಾರ ನಡೆಸುವುದಕ್ಕೆ ನೆರವಾಗುತ್ತದೆ.

ಸ್ಟಿಕರ್‌ ನೋಟಿಫಿಕೇಷನ್‌

ವಾಟ್ಸ್‌ಆಪ್‌ ಮೆಸೇಜ್‌ಗಳು ಸ್ಟಿಕರ್‌ನೊಂದಿಗೆ ನೋಟಿಫಿಕೇಷನ್‌ ಬಾರ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಅದನ್ನು ತೆರೆಯದೇ ಹಾಗೆಯೇ ಕೆಳಗೆ ಎಳೆದು ನೋಡಬಹುದು. ಈ ಫೀಚರ್‌ ಈಗಾಗಲೇ ಐಫೋನ್‌ಗಳಲ್ಲಿ ಲಭ್ಯವಿದೆ.

ಇನ್‌ ಆಪ್‌ ಬ್ರೌಸರ್‌

ವಾಟ್ಸ್‌ಆಪ್‌ ಮೂಲಕ ಯಾವುದೇ ಲಿಂಕ್‌ ಬಂದರೆ, ಅದನ್ನು ಕ್ಲಿಕ್‌ ಮಾಡಿದಾಗ ವಾಟ್ಸ್‌ಆಪ್‌ನಿಂದ ಹೊರಬಂದು ಇನ್ನೊಮದು ಆ್ಯಪ್‌ನಲ್ಲಿ ತೆರೆದುಕೊಳ್ಳುತ್ತದೆ. ಹೊಸ ಅಪ್‌ಡೇಟ್‌ ಈ ಸಂಕೀರ್ಣ ಪ್ರಕ್ರಿಯೆಯಿಂದ ಮುಕ್ತಿ ನೀಡಲಿದೆ. ಬೀಟಾ ಆವೃತ್ತಿಯಲ್ಲಿ ಇನ್‌ ಆಪ್‌ ಬ್ರೌಸರ್‌ ಪೂರೈಸಲಾಗಿದ್ದು, ಪರೀಕ್ಷಾರ್ಥ ಪ್ರಯೋಗ ನಡೆಯುತ್ತಿದೆ. ಈ ಬ್ರೌಸರ್‌ನ ಸರ್ಚ್‌ ಹಿಸ್ಟರಿ ಫೇಸ್‌ಬುಕ್‌ ಕೂಡ ನೋಡಲು ಆಗುವುದಿಲ್ಲ ಎನ್ನಲಾಗಿದೆ.

ಡಾರ್ಕ್‌ ಮೋಡ್‌

ಫೇಸ್‌ಬುಕ್‌ ಇತ್ತೀಚೆಗೆ ತನ್ನ ಫೇಸ್‌ಬುಕ್‌ ಆ್ಯಪ್‌ಗೆ ಡಾರ್ಕ್‌ ಮೋಡ್‌ ಪರಿಚಯಿಸಿತ್ತು. ಈ ವಾಟ್ಸ್‌ಆ್ಯಪ್‌ ಸರದಿ. ವಾಟ್ಸ್‌ಆ್ಯಪ್‌ ಐಕಾನ್‌, ಹೆಡ್ಡಿಂಗ್‌ಗಳು ಹಸಿರು ಬಣ್ಣದಲ್ಲಿರುತ್ತವೆ. ಉಳಿದಂತೆ ಅಕ್ಷರಗಳು ಬಿಳಿಯ ಬಣ್ಣದಲ್ಲಿ ಕಾಣಿಸಿಕೊಳ್ಳಲಿವೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.