ತಾನೇ ಡಿಲೀಟ್‌ ಆಗುವ ಮೆಸೇಜ್‌ಗಳು, ಕಾಲ್‌ವೇಟಿಂಗ್‌; ವಾಟ್ಸ್‌ಆ್ಯಪ್‌ನಿಂದ ಹೊಸ ಫೀಚರ್‌ಗಳು

ವಾಟ್ಸ್‌ ಆ್ಯಪ್‌ ಹೊಸ ಅಪ್‌ಡೇಟ್‌ ಬಿಡುಗಡೆ ಮಾಡಿದೆ. ರಾಶಿ ರಾಶಿ ಮೆಸೇಜ್‌ಗಳಿಂದಾಗುವ ಕಿರಿಕಿರಿ ತಪ್ಪಿಸಲು, ಕಾಲ್‌ವೇಟಿಂಗ್‌ಗೆ ಅವಕಾಶ ಮಾಡಿಕೊಡುವ ಮೂಲಕ ಗ್ರಾಹಕರಿಗೆ ವಾಟ್ಸ್‌ ಆ್ಯಪ್‌ ಬಳಕೆ ಇನ್ನಷ್ಟು ಅನುಕೂಲಕರವಾಗಿಸಿದೆ

ವಾಟ್ಸ್‌ ಆ್ಯಪ್‌ ಹೊಸ ಅಪ್‌ಡೇಟ್‌ ಬಿಡುಗಡೆ ಮಾಡಿದೆ. ರಾಶಿ ರಾಶಿ ಮೆಸೇಜ್‌ಗಳಿಂದಾಗುವ ಕಿರಿಕಿರಿ ತಪ್ಪಿಸಲು, ಕಾಲ್‌ವೇಟಿಂಗ್‌ಗೆ ಅವಕಾಶ ಮಾಡಿಕೊಡುವ ಮೂಲಕ ಗ್ರಾಹಕರಿಗೆ  ವಾಟ್ಸ್‌ ಆ್ಯಪ್‌ ಬಳಕೆ ಇನ್ನಷ್ಟು ಅನುಕೂಲಕರವಾಗಿಸಿದೆ

ಫೇಸ್‌ಬುಕ್‌ ಮಾಲೀಕತ್ವದ ತೆಕ್ಕೆಗೆ ಹೋದ ಮೇಲೆ ವಾಟ್ಸ್‌ಆ್ಯಪ್‌ನಲ್ಲಿ ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸ ಸಾಗುತ್ತಿದೆ. ಫಿಂಗರ್‌ಪ್ರಿಂಟ್‌ ಲಾಕ್‌, ಆಂಡ್ರಾಯ್ಡ್‌ ಮತ್ತು ಐಒಎಸ್‌ ಬಳಕೆದಾರರಿಗೆ ಗ್ರೂಪ್‌ಗಳಲ್ಲಿ ಖಾಸಗಿತನಕ್ಕೆ ಸಂಬಂಧಿಸಿದ ಸೆಟ್ಟಿಂಗ್ಸ್‌ ಪರಿಚಯಿಸುವುದಕ್ಕೆ ಉತ್ಸುಕವಾಗಿದೆ. ಆದರೆ ಇವುಗಳಿಗೂ ಮುನ್ನು ಕೆಲವು ಫೀಚರ್‌ಗಳು ಈಗ ಬಿಡುಗಡೆಯಾಗಿವೆ.

ಡಾರ್ಕ್‌ ಮೋಡ್‌

ಕತ್ತಲಲ್ಲೀ ಸುಲಭವಾಗಿ ಬಳಸುವುದಕ್ಕೆ ಅನುಕೂಲಕವಾಗುವಂತೆ ಡಾರ್ಕ್‌ ಮೋಡ್‌ ಫೀಚರ್‌ಅನ್ನು ನೀಡಿದೆ. ಎರಡು ವರ್ಷಗಳಿಂದ ಗಾಳಿಸುದ್ದಿಯಾಗಿ ಉಳಿದಿದ್ದ ಡಾರ್ಕ್‌ಮೊಡ್‌ ಕಡೆಗೂ ಲಭ್ಯವಾಗುತ್ತಿದೆ. ಜಿಮೇಲ್‌, ಯೂಟ್ಯೂಬ್‌, ಟ್ವಿಟರ್‌ಗಳು ಈ ಫೀಚರ್‌ನ್ನು ಗ್ರಾಹಕರಿಗೆ ನೀಡಿ ಈಗಾಗಲೇ ತಿಂಗಳುಗಳಾಗಿವೆ.

ಸೆಲ್ಫ್‌ ಡಿಸ್ಟ್ರಕ್ಟಿಂಗ್‌ ಮೆಸೇಜ್‌ಗಳು

ಸೋಷಿಯಲ್‌ ಮೆಸೇಜಿಂಗ್‌ ಆ್ಯಪ್‌ಗಳ ಪೈಕಿ ಸಿಗ್ನಲ್‌, ಟೆಲಿಗ್ರಾಮ್‌ಗಳಲ್ಲಿ ಈ ಫೀಚರ್‌ ಇದೆ. ಡಿಲೀಟ್‌ ಮಸೇಜಸ್‌ ಹೆಸರಿನಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಸೇವೆ ಲಭ್ಯವಾಗಲಿದ್ದು, ನೀವು ನಿಗದಿ ಮಾಡಿದ ಸಮಯಕ್ಕೆ ಮೆಸೇಜ್‌ಗಳು ತಾನಾಗಿಯೇ ಡಿಲೀಟ್‌ ಆಗುತ್ತವೆ. ಇದು ವ್ಯಕ್ತಿ-ವ್ಯಕ್ತಿ ನಡುವೆ ನಡೆಯುವ ಸಂಭಾಷಣೆಗಳಲ್ಲಿ ಮಾತ್ರ ಲಭ್ಯ. ಒಂದು ನಿಮಿಷದಿಂದ ಒಂದು ವರ್ಷದವರೆಗೆ ಸಮಯ ನಿಗದಿ ಮಾಡುವ ಅವಕಾಶವಿದೆ.

ಹಲವು ಸಾಧನಗಳಲ್ಲಿ ಒಂದೇ ಖಾತೆ ಬಳಕೆ

ಒಂದು ಮೊಬೈಲ್‌ನಲ್ಲಿ ವಾಟ್ಸ್‌ಆ್ಯಪ್‌ ಖಾತೆ ಸಕ್ರಿಯವಾಗಿರುತ್ತದೆ. ಅದೇ ಖಾತೆಯನ್ನು ಲ್ಯಾಪ್‌ಟಾಪ್‌, ಲ್ಯಾಬ್‌ ಹೀಗೆ ವಿವಿಧ ಸಾಧನಗಳಲ್ಲಿ ಬಳಸುವುದಕ್ಕೆ ಅನುವು ಮಾಡಿಕೊಡುವ ಫೀಚರ್‌ ಕೂಡ ಜಾರಿಗೆ ಬರಲಿದೆ.

ಕಾಲ್‌ವೇಟಿಂಗ್‌

ಸದ್ಯ ಐಫೋನ್‌ನವರಿಗೆ ಲಭ್ಯವಿರುವ ಕಾಲ್‌ವೇಟಿಂಗ್‌ ಸೇವೆ ಆಂಡ್ರಾಯ್ಡ್‌ ಬಳಕೆದಾರರಿಗೂ ಲಭ್ಯವಾಗಲಿದೆ. ಸಾಮಾನ್ಯ ಕರೆಯಂತೆಯೇ ಕೆಲಸ ಮಾಡುವ ಇದು, ನೀವು ಒಂದು ವಾಟ್ಸ್‌ಆ್ಯಪ್‌ ಕಾಲ್‌ನಲ್ಲಿದ್ದಾಗ ಇನ್ನೊಂದು ಕಾಲ್‌ ಬಂದರೆ, ಅದನ್ನು ಸ್ವೀಕರಿಸುವುದಕ್ಕೆ ಈ ಹೊಸ ಫೀಚರ್‌ ಅವಕಾಶ ಮಾಡಿಕೊಡಲಿದೆ.

ಬೇಡದ ಮೆಸೇಜ್‌ಗಳನ್ನು ಬಚ್ಚಿಡಿ!

ವಾಟ್ಸ್ಆ್ಯಪ್‌ಗಳ ಹಾವಳಿಯಿಂದಾಗಿ ಸದಾ ನೊಟಿಫಿಕೇಷನ್‌ಗಳ ಸದ್ದು ಕಿರಿಕಿರಿ ಉಂಟು ಮಾಡುತ್ತಿತ್ತು. ಇಂತಹ ಸಂದರ್ಭದಲ್ಲಿ ಮ್ಯೂಟ್‌ ಮಾಡುವ ಅವಕಾಶವನ್ನು ವಾಟ್ಸ್‌ ಆ್ಯಪ್‌ ನೀಡಿತು. ಈಗ ಮ್ಯೂಟ್‌ ಮಾಡಿದ ಮೆಸೇಜ್‌ ಅಥವಾ ಗ್ರೂಪ್‌ಗಳನ್ನು ಬಚ್ಚಿಡುವುದಕ್ಕೂ ಅವಕಾಶ ಮಾಡಿಕೊಡಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.