ವಾಟ್ಸ್ಆಪ್ ವೆಬ್‌ನಲ್ಲಿ ಬಳಸಿ ಡಾರ್ಕ್ ಮೋಡ್: ಸುಲಭದ ನಾಲ್ಕು ಹಂತಗಳು

ಸ್ಮಾರ್ಟ್‌ಫೋನಿನಲ್ಲಿ ಡಾರ್ಕ್ ಥೀಮ್ ಬಳಕೆ ಮಾಡುವವರ ಸಂಖ್ಯೆ ದಿನೇ ದಿನೇ ಅಧಿಕವಾಗುತ್ತಿರುವ ಹಿನ್ನಲೆಯಲ್ಲಿ ಜನಪ್ರಿಯ ಆಪ್‌ಗಳೇಲ್ಲವೂ ಡಾರ್ಕ್ ಥೀಮಿನಲ್ಲಿ ಬಳಸುವ ಅವಕಾಶವನ್ನು ಮಾಡಿಕೊಡುತ್ತಿವೆ.

ಕೇವಲ ಆಂಡ್ರಾಯ್ಡ್‌ ಮತ್ತು ಐಓಎಸ್‌ ಬಳಕೆದಾರರಿಗೆ ಮಾತ್ರವಲ್ಲದೇ ವೆಬ್‌ನಲ್ಲಿ ತಮ್ಮ ಆಪ್‌ಗಳನ್ನು ಬಳಸುವವರಿಗೂ ಡಾರ್ಕ್‌ ಥೀಮ್ ಅನ್ನು ನೀಡಲಾಗುತ್ತಿದೆ. ಈಗ ಈ ಸರದಿ ವಾಟ್ಸ್‌ಆಪ್‌ನದ್ದು.

ಸುಮಾರು ಎರಡು ಬಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ಆಪ್, ಈಗಾಗಲೇ ತನ್ನ ಆಂಡ್ರಾಯ್ಡ್‌ ಮತ್ತು ಐಓಎಸ್‌ ಬಳಕೆದಾರರಿಗೆ ಡಾರ್ಕ್ ಥೀಮ್ ಬಳಕೆಯ ಅವಕಾಶವನ್ನು ಮಾಡಿಕೊಟ್ಟಿದೆ. ಸದ್ಯ ಈ ಸೇವೆಯನ್ನು ತನ್ನ ವೆಬ್ ಆಪ್ ಬಳಕೆದಾರರಿಗೂ ವಿಸ್ತರಿಸಲು ಮುಂದಾಗಿದೆ.

ಇದನ್ನು ಓಡಿ: ‘ಸಿ-ಮಾಸ್ಕ್’ : ಸ್ಮಾರ್ಟ್‌ಪೋನ್‌ ಕನೆಕ್ಟ್‌ ಮಾಡಬಹುದಾದ ವಿಶ್ವದ ಮೊದಲ ‘ಸ್ಮಾರ್ಟ್ ಮಾಸ್ಕ್’

ವಾಟ್ಸ್‌ಆಪ್ ಬಳಕೆದಾರರಿಗೆ ಟೆಕ್ಸ್ಟ್, ಆಡಿಯೊ ಫೈಲ್‌ಗಳು, ಡಾಕ್ಯುಮೆಂಟ್‌ಗಳು, ಕರೆಂಟ್ ಮತ್ತು ಲೈವ್ ಲೋಕೇಷನ್  ಹಂಚಿಕೊಳ್ಳಲು ಮತ್ತು ಡಾಕ್ಯೂಮೆಂಟ್‌ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಅವಕಾಶ ಮಾಡಿಕೊಟ್ಟಿದ್ದು, ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿ ಇರಲು ವಿಡಿಯೋ ಕಾಲ್ ಮತ್ತು ಆಡಿಯೋ ಕಾಲ್ ಸಹ ಮಾಡಬಹುದಾಗಿದೆ. ಅಲ್ಲದೇ ಹೊಸದಾಗಿ UPI  ಸೇವೆಯನ್ನು ಪರಿಚಯಿಸಿದೆ.  

ವಾಟ್ಸ್‌ಆಪ್ ಡೆಸ್ಕ್‌ ಟಾಪ್ ಆವೃತ್ತಿಯು ಮೊಬೈಲ್ ಆವೃತ್ತಿಯಂತೆಯೇ ಕಾರ್ಯನಿರ್ವಹಿಸುತ್ತದೆ. ಟೆಕ್ಸ್ಟ್‌ಗಳನ್ನು ಕಳುಹಿಸಬಹುದು – ಸ್ವೀಕರಿಸಬಹುದು, ವಾಯ್ಸ್‌ ಚಾಟ್‌ಗಳನ್ನು ಕಳುಹಿಸಬಹುದು, ಅವರ ಸಂಪರ್ಕಗಳ  ಸ್ಟೇಟಸ್ ಅನ್ನು ವೀಕ್ಷಿಸಬಹುದು. ಆದರೆ ವಿಡಿಯೋ ಮತ್ತು ಆಡಿಯೋ ಕಾಲ್ ಮಾಡುವ ಅವಕಾಶ ಇಲ್ಲ.

ವಾಟ್ಸ್‌ಆಪ್ ತನ್ನ ಬಳಕೆದಾರರಿಗಾಗಿ ಹಲವಾರು ಅಪ್‌ಡೇಟ್‌ಗಳನ್ನು ಹೊರತರುತ್ತಿದೆ. ಅನಿಮೇಟೆಡ್ ಸ್ಟಿಕ್ಕರ್‌, ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನಿಂಗ್ ಮಾಡುವ ಹೊಸ ವೈಶಿಷ್ಟ್ಯಗಳ ಜೊತೆಗೆ, ಡೆಸ್ಕ್‌ ಟಾಪ್ ಅಪ್ಲಿಕೇಶನ್‌ಗೆ ಬಹುನಿರೀಕ್ಷಿತ ಡಾರ್ಕ್ ಮೋಡ್ ಅನ್ನು ಪರಿಚಯಿಸಿದೆ. ಇಷ್ಟು ದಿನ ವಾಟ್ಸ್‌ಆಪ್ ಮೊಬೈಲ್ ಆವೃತ್ತಿಯಲ್ಲಿ ಮಾತ್ರವೇ ಡಾರ್ಕ್ ಥೀಮ್ ಬಳಕೆ ಮಾಡುತ್ತಿದ್ದವರು ಇನ್ನು ಮುಂದೆ ವೆಬ್ ಆವೃತ್ತಿಯಲ್ಲಿಯೂ ಡಾರ್ಕ್ ಥೀಮ್ ಬಳಸಲು ಶುರು ಮಾಡಿ.

ವೆಬ್ ಬಳಕೆದಾರರಿಗಾಗಿ ಹೊಸ ಡಾರ್ಕ್ ಮೋಡ್ ವೈಶಿಷ್ಟ್ಯದಿಂದಾಗಿ ವಾಟ್ಸ್‌ಆಪ್‌ ಥೀಮ್ ಅನ್ನು ಬಿಳಿ ಬಣ್ಣದಿಂದ ಕಪ್ಪು ಬಣ್ಣಕ್ಕೆ ಬದಲಾಯಿಸಬಹುದಾಗಿದೆ.  ನೀವು ವಾಟ್ಸಾಪ್ ವೆಬ್‌ನಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸಲು ಬಯಸಿದರೆ, ನೀವು ಮಾಡಬೇಕಾಗಿರುವುದು ಇಲ್ಲಿದೆ.

ವಾಟ್ಸಾಪ್ ವೆಬ್‌ನಲ್ಲಿ ಡಾರ್ಕ್ ಮೋಡ್ ಅನ್ನು ಹೇಗೆ ಸಕ್ರಿಯಗೊಳಿಸುವುದು?

  • ವಾಟ್ಸಾಪ್ ತೆರೆಯಿರಿ: ನಿಮ್ಮ ಪಿಸಿ ಅಥವಾ ಲ್ಯಾಪ್‌ಟಾಪ್‌ನಲ್ಲಿ ವಾಟ್ಸ್‌ಆಪ್ ವೆಬ್ ತೆರೆಯಿರಿ. ನೀವು ಲಾಗ್ ಇನ್ ಆಗದಿದ್ದರೆ, ಸೈನ್ ಇನ್ ಮಾಡಲು ನಿಮ್ಮ ಲ್ಯಾಪ್‌ಟಾಪ್ / ಪಿಸಿಯಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ನಿಮ್ಮ ಫೋನ್ ಬಳಸಿ.
  • ಸೆಟ್ಟಿಂಗ್‌ ಓಪನ್ ಮಾಡಿ: ಈಗ, ಮೇಲಿನ ಮೂರು-ಡಾಟ್ ಐಕಾನ್‌ಗಳನ್ನು ಟ್ಯಾಪ್ ಮಾಡಿ ಮತ್ತು ಸೆಟ್ಟಿಂಗ್‌ಗಳಿಗೆ ಹೋಗಿ.
  • ಥೀಮ್‌ನಲ್ಲಿ ಕ್ಲಿಕ್ ಮಾಡಿ: ಸೆಟ್ಟಿಂಗ್‌ಗಳಲ್ಲಿ, ನೀಡಿರುವ ಪಟ್ಟಿಯಿಂದ ಥೀಮ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಅಂತಿಮ ಹಂತ: ಈಗ, ಡಾರ್ಕ್ ಮೋಡ್ ಅನ್ನು ಅನ್ವಯಿಸಲು, ಡಾರ್ಕ್ ಥೀಮ್ ಅನ್ನು ಆರಿಸಿ. ಈಗ, ವಾಟ್ಸಾಪ್ ವೆಬ್ ನಲ್ಲಿ ಡಾರ್ಕ್ ಮೋಡ್ ಅನ್ನು ಸಕ್ರಿಯಗೊಳಿಸಲಾಗುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.