ನಾಲ್ಕು ಡಿವೈಸ್‌ಗಳಲ್ಲಿ ಒಂದೇ ವಾಟ್ಸಾಪ್: ಬಂದರೆ ತೊಂದರೆಯೇ ಹೆಚ್ಚು..!

ವಾಟ್ಸಾಪ್ ಮೆಸೇಜಿಂಗಾಗಿ ಗೋ-ಟು ಅಪ್ಲಿಕೇಶನ್ ಆಗಿ ಮಾರ್ಪಟ್ಟಾಗಿನಿಂದ ಬಹು ವಿನಂತಿಸಿದ ವೈಶಿಷ್ಟ್ಯವೆಂದರೆ ಬಹು ಸಾಧನಗಳಲ್ಲಿ ವಾಟ್ಸಾಪ್ ಖಾತೆಯನ್ನು ಬಳಸುವ ಅವಕಾಶ.

ಈ ಮನವಿಗೆ ಸ್ಪಂದಿಸುವುರುವ ಕಂಪನಿಯು ತನ್ನ ಬಳಕೆದಾರರಿಗಾಗಿ ಈ ವೈಶಿಷ್ಟ್ಯವನ್ನು ತರಲು ಯೋಚಿಸುತ್ತಿದ್ದು, ಈಗಾಗಲೇ ವೈಶಿಷ್ಟ್ಯವು ಅಭಿವೃದ್ಧಿಯ ಹಂತದಲ್ಲಿದೆ ಎಂದು ಹೇಳಲಾಗುತ್ತದೆ, ಅಂದರೆ ವಾಟ್ಸಾಪ್ ಇನ್ನೂ ಅದರ ಮೇಲೆ ಕಾರ್ಯನಿರ್ವಹಿಸುತ್ತಿದೆ ಮತ್ತು ಶೀಘ್ರವೇ ಆಪ್‌ಡೇಟ್ ಬಿಡುಗಡೆಯಾಗಬಹುದು.

ಒಂದೇ ವಾಟ್ಸಾಪ್ ಖಾತೆಯನ್ನು ಒಂದೇ ಸಮಯದಲ್ಲಿ 4 ಸಾಧನಗಳಲ್ಲಿ ಬಳಕೆ ಮಾಡಲು ಈ ವೈಶಿಷ್ಟ್ಯವು ಅನುಮತಿಸುತ್ತದೆ ಎಂದು WABetaInfo ವರದಿಯಲ್ಲಿ ಹೇಳಿದೆ. ಆಂಡ್ರಾಯ್ಡ್ ಮತ್ತು iOS ಎರಡಕ್ಕೂ ಇಂಟರ್ಫೇಸ್ ರಚಿಸಲು ವಾಟ್ಸಾಪ್ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ ಎಂದು ಅದು ಹೇಳಿದೆ.

ಹೇಗೆ ವರ್ಕ್‌ ಆಗುತ್ತೇ?

ಬಳಕೆದಾರರು ವಾಟ್ಸಾಪ್ ಖಾತೆಯನ್ನು ಮತ್ತೊಂದು ಸಾಧನದಲ್ಲಿ ಬಳಸಲು ಯೋಜಿಸಿದರೆ, ಈ ವೈಶಿಷ್ಟ್ಯವು ಬಳಕೆದಾರರಿಗೆ ಅವರ ಮೇಸೆಜ್‌ಗಳ ಹಿಸ್ಟರಿಯನ್ನು  ಒಳಗೊಂಡಿರುವ ಡೇಟಾವನ್ನು ಕಾಪಿ ಮಾಡಿಕೊಳ್ಳುವ ಅವಕಾಶವನ್ನು ನೀಡಲಿದೆ.

ಇದನ್ನು ಓದಿರಿ: ಕ್ವಾಲ್ಕಾಮ್ ತಪ್ಪಿನಿಂದ ನಾವು-ನೀವು ಸೇರಿದಂತೆ ಮೂರು ಬಿಲಿಯನ್ ಆಂಡ್ರಾಯ್ಡ್ ಬಳಕೆದಾರರು ಅಪಾಯದಲ್ಲಿ..!

ನಿಮ್ಮ ಚಾಟ್ ಹಿಸ್ಟರಿ ಮತ್ತು ಡೇಟಾವನ್ನು ಎರಡನೇ ಸಾಧನಕ್ಕೆ ನಕಲಿಸಿದ ನಂತರ, ಎರಡನೇ ಸಾಧನದಲ್ಲಿ ನೀವು ವಾಟ್ಸಾಪ್ ಬಳಸುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತೀರಿ. ನೀವು ಸ್ವೀಕರಿಸುವ ಎಲ್ಲಾ ಸಂದೇಶವು ಎಲ್ಲಾ ಸಿಂಕ್ ಮಾಡಿದ ಸಾಧನಗಳಲ್ಲಿ ಲಭ್ಯವಿರುತ್ತದೆ. ಅಲ್ಲದೇ ನೀವು ಸಾಧನವನ್ನು ತೆಗೆದುಹಾಕಿದಾಗಲೆಲ್ಲಾ ಎನ್‌ಕ್ರಿಪ್ಶನ್ ಕೀ ಬದಲಾಗುತ್ತದೆ.

ಬಂದರೆ ಏನು ತೊಂದರೆ?

ಈ ಸೌಲಭ್ಯವನ್ನು ನೀಡಿದರೆ ಅದರಲ್ಲೂ ಭಾರತದಂತಹ ದೇಶದಲ್ಲಿ ಹೆಚ್ಚಿನ ತೊಂದರೆ ಉಂಟಾಗಬಹುದು, ಬಳಕೆದಾರರಿಗೆ ತಿಳಿಯದಂತೆ ಇನ್ಯಾರೋ ವಾಟ್ಸಾಪ್ ಮೇಸೆಜ್‌ಗಳನ್ನು ಓದುವ ಸಾಧ್ಯತೆ ಇರಲಿದೆ. ಅಲ್ಲದೇ ನಕಲಿ ಸುದ್ದಿಗಳನ್ನು ಹಬ್ಬಿಸುವ ಸಾಧ್ಯತೆ ಇದೆ.

ಇದಲ್ಲದೇ ಪ್ರೈವಸಿ ಸಹ ಇಲ್ಲದಂತಾಗಲಿದೆ, ಗಂಡನ ವಾಟ್ಸಾಪ್ ಮೇಲೆ ನಿಗಾ ಇಡಲು ಹೆಂಡತಿ ಇನ್ನೊಂದು ಡಿವೈಸ್‌ನಲ್ಲಿ ಗಂಡನ ವಾಟ್ಸ್‌ಪ್ ಮೇಸೆಸ್‌ಗಳನ್ನು ನೋಡಲು ಬಯಸಬಹುದು. ಇಲ್ಲವೇ ತಂದೆ ತಾಯಿಗಳು ಮಕ್ಕಳ ಚಾಟಿಂಗ್‌ ಮೇಲೆ ಕಣ್ಣಿಡಲು ಇದನ್ನು ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇವುಗಳ ಮೇಲೆ ಗಮನ ಹರಿಸಿ ವಾಟ್ಸಾಪ್ ಹೊಸ ಆಯ್ಕೆಯನ್ನು ಅಭಿವೃದ್ಧಿ ಪಡಿಸಬೇಕಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.