ವರ್ಡಲ್ ಏಕೆ ಎಲ್ಲೆಲ್ಲೂ ಗುಲ್ಲೆಬ್ಬಿಸಿದೆ? ನೀವೂ ಆಡಬೇಕಿದ್ದರೆ ಈ ಪುಟ್ಟ ಕೈಪಿಡಿ ನೋಡಿ

ವರ್ಡಲ್ ಎಂಬ ಆಟ ಸಾಮಾಜಿಕ ಜಾಲತಾಣದಲ್ಲಿ ಗುಲ್ಲೆಬ್ಬಸಿದೆ. ಪದಬಂಧದ ಚೌಕಗಳಂತೆ ಕಾಣುವ ಹಸಿರು, ಹಳದಿ, ಕಂದು ಬಣ್ಣದ ಬಾಕ್ಸ್‌ಗಳನ್ನು ಹಲವು ಜನ ಶೇರ್ ಮಾಡುತ್ತಿದ್ದಾರೆ. ಹಲವರ ಕುತೂಹಲಕ್ಕೆ ಕಾರಣವಾದ ಈ ‘ವರ್ಡಲ್ ಪಸ಼ಲ್’ ಬಗ್ಗೆ ಇಲ್ಲೊಂದು ಇಣುಕುನೋಟ.

ವರ್ಡಲ್ ಎಂದರೇನು?

ಅಕ್ಷರಗಳನ್ನು ಜೋಡಿಸಿ ಪದ ಹುಡುಕುವ ಆಧುನಿಕ ಪದಬಂಧದ ಆಟವಿದು. ಸರಳ ಆದರೂ ಗೀಳಾಗಿಸುವ ಗುಣ ಈ ಆಟಕ್ಕಿದೆ. ಇದು ಉಚಿತವಾಗಿ ಆಡಬಹುದಾದ ವರ್ಡಲ್ಲನ್ನು ಯಾವುದೇ ಆ್ಯಪ್ ಡೌನ್ಲೋಡ್ ಮಾಡುವ ಅಥವಾ ಸೈನ್ ಅಪ್ ಆಗದೆಯೇ ಆಡಬಹುದು.

ಇದರಲ್ಲಿ ಪದವನ್ನು ಊಹಿಸಿ ಅಕ್ಷರಗಳನ್ನು ಜೋಡಿಸಬೇಕಿರುತ್ತದೆ. ಪದ ನಿರ್ಮಾಣ ನೇರವಾಗಿಯೂ ಇರಬಹುದು, ಲಂಬವೂ ಆಗಿರಬಹುದು. ಒಟ್ಟು ಆರು ಪ್ರಯತ್ನಗಳಲ್ಲಿ ಪದವನ್ನು ಊಹಿಸುವುದು ಮುಖ್ಯ. ಖಂಡಾಂತರದಾದ್ಯಂತ ಈ ಆಟದಲ್ಲಿ ಬಳಸಿರುವ ಪದಗಳು ಒಂದೇ ಆಗಿರುತ್ತದೆ. ಪ್ರತಿದಿನ ಊಹಿಸಲು ಒಂದು ಪದವನ್ನು ಮಾತ್ರ ನೀಡಲಾಗಿರುತ್ತದೆ.

ವರ್ಡಲ್‌ನ ಮೂಲ:

ವರ್ಡಲ್ ಆಟವನ್ನು ಅಮೆರಿಕಾದ ಬ್ರೂಕ್ಲಿನ್ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಜೋಶ್ ವಾರ್ಡಲ್ ರಚಿಸಿದ್ದಾರೆ. “ಪದ ಕಂಡುಹಿಡಿಯುವ ಆಟಗಳನ್ನು ಪ್ರೀತಿಸುವ ತನ್ನ ಸಂಗಾತಿಗಾಗಿ ಈ ಆಟವನ್ನು ತಯಾರು ಮಾಡಿದೆ” ಎಂದು ಆತ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾನೆ. ಕಳೆದ ಅಕ್ಟೋಬರಿನಲ್ಲಿ ಆನನ್ಲೈನ್ ಜಗತ್ತಿಗೆ ಕಾಲಿಟ್ಟ ಈ ಆಟ ಕಳೆದ ಕೆಲವು ವಾರಗಳಿಂದ ಅತಿಯಾದ ಪ್ರಚಾರ ಪಡೆದಿದೆ. ಈಗ ಪ್ರತಿದಿನ ಲಕ್ಷಾಂತರ ಮಂದಿ ವರ್ಡಲ್ನ ಗೀಳು ಹತ್ತಿಸಿಕೊಂಡಿದ್ದಾರೆ.
ಆದಾಗ್ಯೂ ವರ್ಡಲ್ ಸದಾ ಉಚಿತವಾಗಿ ಹಾಗೂ ಜಾಹೀರಾತು-ಮುಕ್ತವಾಗಿರುತ್ತದೆ ಎಂಬ ಭರವಸೆಯನ್ನು ಪ್ರಕೃತ ಜೋಶ್ ವಾರ್ಡಲ್ ನೀಡಿದ್ದಾರೆ.

ಜನಪ್ರಿಯತೆಯ ವರ್ಡಲ್ ಆಡಲು https://www.powerlanguage.co.uk/wordle/ ವೆಬ್ ಸೈಟ್ ಪ್ರವೇಶಿಸಬೇಕು. ಆಟವಾಡುವ ಬಗೆಯನ್ನು ವಿವರಿಸುವ ಪಾಪ್-ಅಪ್ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ಆರೇ ಯತ್ನಗಳಲ್ಲಿ ಪದವನ್ನು ಊಹಿಸುವುದು ಈ ಆಟದ ಗುರಿ. ಒಮ್ಮೆ ನೀವು ಪದವನ್ನು ಊಹಿಸಿದರೆ, ಪದದ ಅಕ್ಷರಗಳ ಮೇಲೆ ಬರುವ ಬಣ್ಣಗಳು ಮುಂದಿನ ದಾರಿ ಸೂಚಿಸುತ್ತದೆ.

  • ಹಸಿರು ಬಣ್ಣದಲ್ಲಿರುವ ಅಕ್ಷರವು ನಾವು ಊಹಿಸಬೇಕಾದ ಪದದಲ್ಲಿ ಬಳಸುವ ಅಕ್ಷರವಾಗಿದ್ದು, ಸರಿಯಾದ ಸ್ಥಾನದಲ್ಲಿದೆ ಎಂಬುದನ್ನು ಸೂಚಿಸುತ್ತದೆ.
  • ಹಳದಿ ಬಣ್ಣದಲ್ಲಿರುವ ಅಕ್ಷರವು ನಾವು ಊಹಿಸಬೇಕಾದ ಪದದಲ್ಲಿ ಬಳಸುವ ಅಕ್ಷರವಾಗಿದ್ದು, ಆದರೆ ತಪ್ಪಾದ ಸ್ಥಾನದಲ್ಲಿದೆ ಎಂದು ಸುಳಿವು ನೀಡುತ್ತದೆ.
  • ಬೂದು ಬಣ್ಣದಲ್ಲಿರುವ ಅಕ್ಷರವು ನಾವು ಊಹಿಸಬೇಕಾದ ಪದದ್ದಲ್ಲ ಎಂಬುದನ್ನು ತಿಳಿಸುತ್ತದೆ.
    ಪ್ರತಿದಿನ ಊಹಿಸಲು ಹೊಸ ಪದವನ್ನು ಪಡೆಯುತ್ತೀರಿ. ಈ ವಿಧಾನವು ಆಟಗಾರರು ಕುತೂಹಲದಿಂದ ಆಡುವಂತೆ ಮಾಡಿದೆ.

ವೈರಲ್ ಆಗಲು ಕಾರಣ?

ಈ ಗೇಮ್ ತುಂಬಾ ಸರಳವಾಗಿದ್ದು ಆಡಲು ವಯಸ್ಸಿನ ಮಿತಿ ಇಲ್ಲ. ದಿನಕ್ಕೆ ಒಂದು ಪದವನ್ನು ಮಾತ್ರ ಊಹಿಸಬಹುದು ಎಂಬುದನ್ನು ಸೇರಿದಂತೆ ಪ್ರತಿದಿನ ಪ್ರತಿ ಹೊಸ ಪದವನ್ನು ಹುಡುಕಲು ಈ ಗೇಮ್ ಸಹಕಾರಿಯಾಗಿದೆ. ಹಾಗೆಯೇ ಈ ಗೇಮ್ ಆಡುವವರು ತಮ್ಮ ಫಲಿತಾಂಶಗಳನ್ನು ಟ್ವಿಟರ್ ಮತ್ತು ಫೇಸ್ಬುಕ್ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಗೆಳೆಯರೊಂದಿಗೆ ಸುಲಭವಾಗಿ ಹಂಚಿಕೊಳ್ಳಬಹುದು. ಈ ಸಾಮುದಾಯಿಕ ಅನುಭವವೇ ಈ ಆಟ ಇಷ್ಟು ಜನಪ್ರಿಯವಾಗಲು ಕಾರಣ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: