ಬಹುಚರ್ಚೆಗೆ ಕಾರಣವಾದ ಟ್ವಿಟರ್ ಅಧಿಕೃತತೆಯನ್ನು ಘೋಷಿಸುವ ಬ್ಲೂಟಿಕ್ ಈಗ ಹೊಸ ಸೇರ್ಪಡೆಯನ್ನು ಕಾಣುತ್ತಿದೆ. ಮುಂದಿನ ವಾರ ಜಾರಿಗೆ ಬರಲಿರುವ ಹೊಸ ನಿಯಮಗಳ ಪ್ರಕಾರ ನೀಲಿ ಬಣ್ಣದ ಟಿಕ್ ಜೊತೆಗೆ, ಬೂದು ಮತ್ತು ಚಿನ್ನದ ಬಣ್ಣದ ಬ್ಯಾಡ್ಜ್‌ಗಳು ಜಾರಿಗೆ ಬರಲಿವೆ.
ಟ್ವಿಟರ್ ಖಾತೆಗಳನ್ನು ಅಧಿಕೃತತೆಯನ್ನು ಘೋಷಿಸುವ ಬ್ಲೂಟಿಕ್‌ಗೆ ತಿಂಗಳ ಚಂದಾ ನಿಗದಿಗೊಳಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ ಚಂದಾ ಖರೀದಿಸಿ, ನಕಲಿ ಖಾತೆಗಳಿಗೂ ಬ್ಲೂಟಿಕ್ ಪಡೆದಿದ್ದು, ಹೊಸ ಮಾಲೀಕ ಎಲಾನ್ ಮಸ್ಕ್‌ಗೆ ಮುಖಭಂಗ ಎದುರಿಸುವಂತೆ ಮಾಡಿತ್ತು. ತನ್ನ ನಿಯಮ ಹಿಂಪಡೆದಿದ್ದ ಮಸ್ಕ್ ಈಗ ಹೊಸ ನಿಯಮಗಳನ್ನು ಡಿಸೆಂಬರ್ 2ಕ್ಕೆ ಜಾರಿಗೆ ತರುತ್ತಿದ್ದಾರೆ. ಅದರಂತೆ ಬ್ಲೂಟಿಕ್ ಜೊತೆಗೆ, ಗ್ರೇ ಮತ್ತು ಗೋಲ್ಡ್ ಟಿಕ್‌ಗಳು ಜಾರಿಗೆ ಬರಲಿವೆ!
ನಕಲಿ ಖಾತೆಗಳನ್ನು ತಡೆಯುವ ಹಿನ್ನೆಲೆಯಲ್ಲಿ ಈ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದು, ಅಧಿಕೃತ ಖಾತೆ ಹೊಂದಲು ಹಣ (ತಿಂಗಳಿಗೆ 8 ಡಾಲರ್)ಪಾವತಿ ಮಾಡುವ ನಿಯಮದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ವ್ಯಕ್ತಿಗತ ಖಾತೆಗಳಿಗೆ ನೀಲಿ ಬಣ್ಣದ ಬ್ಯಾಡ್ಜ್, ಖಾಸಗಿ ಕಂಪನಿಗಳಿಗೆ ಚಿನ್ನದ ಬಣ್ಣದ ಬ್ಯಾಡ್ಜ್ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಬೂದು ಬಣ್ಣದ ಬ್ಯಾಡ್ಜ್‌ಗಳನ್ನು ನೀಡಲಾಗುವುದು ಎಂದು ಮಸ್ಕ್ ಘೋಷಿಸಿದ್ದಾರೆ.
Sorry for the delay, we’re tentatively launching Verified on Friday next week.
Gold check for companies, grey check for government, blue for individuals (celebrity or not) and all verified accounts will be manually authenticated before check activates.
Painful, but necessary.
— Elon Musk (@elonmusk) November 25, 2022
ಶುಕ್ರವಾರ ಮಧ್ಯಾಹ್ನ ಟ್ವೀಟ್ ಮಾಡಿರುವ ಎಲಾನ್ ಮಸ್ಕ್ ಈ ಮಾಹಿತಿ ನೀಡಿದ್ದು, ‘ಇದು ನೋವಿನ ಸಂಗತಿ ಆದರೆ, ಅನಿವಾರ್ಯ’ ಎಂದು ಹೇಳಿದ್ದಾರೆ. ಖಾತೆಗಳ ಪರಿಶೀಲನೆ ಮತ್ತು ಅಧಿಕೃತ ಮುದ್ರೆ ನೀಡುವ ಪ್ರಕ್ರಿಯೆಯಲ್ಲಿ ಯಾಂತ್ರಿಕವಾಗಿ ನಡೆಯುವುದಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ನವೆಂಬರ್ 22ರಂದು ಟ್ವೀಟ್ ಮಾಡಿದ್ದ ಎಲಾನ್ ಮಸ್ಕ್ ಭಿನ್ನ ರೀತಿಯ ಖಾತೆಗಳಿಗೆ ಭಿನ್ನ ಬಣ್ಣದ ಬ್ಯಾಡ್ಜ್‌ಗಳನ್ನು ನೀಡುವ ಬಗ್ಗೆ ಪ್ರಸ್ತಾಪಿಸಿದ್ದರು. ಇಂದು ಅದರ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ಹೊಸ ಚಂದಾ ನೀತಿಯಿಂದ ಹಲವರು ನಕಲಿ ಖಾತೆಗಳನ್ನು ಸೃಷ್ಟಿಸಿ, ಅದಕ್ಕೆ ಅಧಿಕೃತ ಖಾತೆಯ ಬ್ಯಾಡ್ಜ್ ಪಡೆದಿದ್ದರು. ಇದರಿಂದ ಆತಂಕಗೊಂಡಿದ್ದ ಟ್ವಟರ್‍ನ ಟ್ರಸ್ಟ್ ಅಂಡ್ ಸೇಫ್ಟಿ ಸಿಬ್ಬಂದಿ ಎಚ್ಚರಿಕೆಯನ್ನು ಮಸ್ಕ್ ಉಪೇಕ್ಷಿಸಿದ್ದರು. ಈ ಬೆಳವಣಿಗೆಗಳಿಂದ ಆತಂಕಗೊಂಡ ಅನೇಕ ಬ್ಯ್ರಾಂಡ್‌ಗಳು ಟ್ವಿಟರ್ ಖಾತೆಯಿಂದ ಹೊರ ನಡೆದಿದ್ದವು. ಈಗ ಮಸ್ಕ್ ನಕಲಿ ಖಾತೆಗಳ ಸೃಷ್ಟಿಯನ್ನು ತಡೆಯುವು ನಿಟ್ಟಿನಲ್ಲಿ ಹೊಸ ನಿಯಮ ನೆರವಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.