ಜಗತ್ತಿನ ಮೊಟ್ಟ ಮೊದಲ ಗೇಮಿಂಗ್ ಮೊಬೈಲ್ ಬ್ರೌಸರ್ Opera GX Mobile ಬಿಡುಗಡೆಗೆ ಸಿದ್ದ

ಗೇಮಿಂಗ್’ಗಾಗಿ ತಯಾರಿಸಲಾದ ಜಗತ್ತಿನ ಪ್ರಪ್ರಥಮ ವೆಬ್ ಬ್ರೌಸರ್ ಎಂದು ಇದನ್ನು ಒಪೆರಾ ಪರಿಗಣಿಸಿದೆ. ಮೊದಲಿಗೆ ಇದರ ಬೀಟಾ ಆವೃತ್ತಿ ಬಿಡುಗಡೆಯಾಗಲಿದ್ದು, ಕಂಪ್ಯೂಟರ್ ನಂತೆಯೇ ಉತ್ತಮ ಗುಣಮಟ್ಟದ ಗೇಮಿಂಗ್ ಅನುಭವವನ್ನು ಮೊಬೈಲ್ ನಲ್ಲಿ ನೀಡಲು ಸಿದ್ದವಾಗಿದೆ.

2019ರ ಜೂನ್ ತಿಂಗಳಲ್ಲಿ ಗೇಮಿಂಗ್ ಗಾಗಿ ತಯಾರಿಸಲಾದ Opera GX ಎಂಬ ವೆಬ್ ಬ್ರೌಸರ್ ಅನ್ನು ಬಿಡುಗಡೆಗೊಳಿಸಿ ಒಪೆರಾ ಸಂಸ್ಥೆ ಭಾರಿ ಜನಮನ್ನಣೆ ಗಳಿಸಿತ್ತು. ಈಗ ಅದೇ ವೆಬ್ ಬ್ರೌಸರ್ ಅನ್ನು ಮೊಬೈಲ್ ಫೋನ್ ಗಳಿಗೆ ತಕ್ಕುದಾದಂತೆ ಮಾರ್ಪಡಿಸಿದೆ. ಇನ್ನು ಕೆಲವೇ ವಾರಗಳಲ್ಲಿ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಈ ಬ್ರೌಸರ್ ಲಭ್ಯವಾಗಲಿದೆ.

ಗೇಮಿಂಗ್’ಗಾಗಿ ತಯಾರಿಸಲಾದ ಜಗತ್ತಿನ ಪ್ರಪ್ರಥಮ ವೆಬ್ ಬ್ರೌಸರ್ ಎಂದು ಇದನ್ನು ಒಪೆರಾ ಪರಿಗಣಿಸಿದೆ. ಮೊದಲಿಗೆ ಇದರ ಬೀಟಾ ಆವೃತ್ತಿ ಬಿಡುಗಡೆಯಾಗಲಿದ್ದು, ಕಂಪ್ಯೂಟರ್ ನಂತೆಯೇ ಉತ್ತಮ ಗುಣಮಟ್ಟದ ಗೇಮಿಂಗ್ ಅನುಭವವನ್ನು ಮೊಬೈಲ್ ನಲ್ಲಿ ನೀಡಲು ಸಿದ್ದವಾಗಿದೆ.

ಈ ಮೊಬೈಲ್ ಬ್ರೌಸರ್ ನಲ್ಲಿ GX Corner, Fast Action Button (FAB), Flow ಸೇರಿದಂತೆ ಹಲವು ಫೀಚರ್ ಗಳಿವೆ.
GX Corner: ಇದು ಬ್ರೌಸರ್ ನ ಹೋಮ್ ಸ್ಕ್ರೀನ್. ಇದರಲ್ಲಿ ಗೇಂಇಂಗ್ ದುನಿಯಾಗೆ ಸಂಬಂಧಪಟ್ಟಂತಹ ಎಲ್ಲಾ ತರಹದ ಸುದ್ದಿಗಳು ನಿಮಗೆ ಸಿಗುತ್ತವೆ. ಬರೀ ಸುದ್ದಿಗಳಷ್ಟೇ ಅಲ್ಲ. ಗೇಮ್’ಗಳ ಮೇಲಿರುವ ಡೀಲ್, ಮುಂಬರುವ ಗೇಮಗ ಗಳು, ಅವುಗಳ ಬಿಡುಗಡೆಯ ದಿನಾಂಕ, ಟ್ರೇಲರ್ ಗಳು ಇತ್ಯಾದಿ. ಗೇಮಿಂಗ್ ಜಗತ್ತಿನ ಯಾವುದೇ ಸುದ್ದಿಗಳನ್ನು ನೀವು ಮಿಸ್ ಮಾಡದೇ ಇಲ್ಲಿ ಓದಬಹುದಾಗಿದೆ.

FAB: ಸಾಮಾನ್ಯವಾಗಿ ಬ್ರೌಸರ್ ಗಳಲ್ಲಿ ಮೂರು ನ್ಯಾವಿಗೇಷನ್ ಬಟನ್ ಗಳು ಇರುತ್ತವೆ. ಆದರೆ ಈ FAB ಫೀಚರ್ ಆ ಮೂರು ಬಟನ್ ಗಳನ್ನು ಹೊಂದಿರುವ ಒಂದು ಬಟನ್ ಆಗಿದೆ. FAB ಬಟನ್ ಅನ್ನು ಹೆಚ್ಚಿನ ಕಾಲ ಒತ್ತಿ ಹಿಡಿಯುವ (ಲಾಂಗ್ ಪ್ರೆಸ್) ಮೂಲಕ ಉಳಿದ ಆಯ್ಕೆಗಳನ್ನು ನೀವು ಬಳಸಿಕೊಳ್ಳಬಹುದಾಗಿದೆ. ಈ ಆಯ್ಕೆಯನ್ನು ಬಳಸುವಾಗ ವೈಬ್ರೇಷನ್ ಮತ್ತು ಹ್ಯಾಪ್ಟಿಕ್ ಫೀಡ್ ಬ್ಯಾಕ್ ಕೂಡಾ ಲಭ್ಯವಿರಲಿದೆ.

Flow: ಇದೊಂದು ವಿನೂತನ ಆಯ್ಕೆಯಾಗಿದ್ದು, Opera GX ಕಂಪ್ಯೂಟರ್ ಬ್ರೌಸರ್ ಜತೆ ನಿಮ್ಮ ಫೋನ್ ಬ್ರೌಸರ್ ಅನ್ನು ಸಿಂಕ್ ಮಾಡಲು ಬಳಸಬಹುದು. ಡೆಸ್ಕ್ ಟಾಪ್ ಹಾಗು ಮೊಬೈಲ್ ಗಳಲ್ಲಿ ಏಕಕಾಲದಲ್ಲಿ Opera GX ಅನುಭವ ಪಡೆಯಲು ಈ ಆಯ್ಕೆ ಸಹಕಾರಿ. ಡೆಸ್ಕ್ ಟಾಪ್ ನಲ್ಲಿ ತೋರಿಸುವ QR Code ಸ್ಕ್ಯಾನ್ ಮಾಡಿ, ಮೊಬೈಲ್ ಫೋನ್ ಅನ್ನು ಡೆಸ್ಕ್ ಟಾಪ್್ನೊಂದಿಗೆ ಸಿಂಕ್ ಮಾಡಬಹುದು.
Flow ಕುರಿತಾಗಿ ಅಧಿಕೃತ ಪ್ರಕಟಣೆ ನೀಡಿರುವ ಒಪೆರಾ ಸಂಸ್ಥೆ, ಇದೊಂದು ಚಾಟ್ ಮಾಡುವ ಸೇವೆಯಾಗಿದ್ದು, ಮೊಬೈಲ್ ಮತ್ತು ಡೆಸ್ಕ್ ಟಾಪ್ ನಡುವೆ ಸಂಪರ್ಕ ಕಲ್ಪಿಸುತ್ತದೆ. 10 MB ವರೆಗಿನ ಫೈಲ್್ಗಳನ್ನು ಕೂಡಾ ಇದರ ಮೂಲಕ ಕಳುಹಿಸಬಹುದು, ಎಂದು ಹೇಳಿದೆ.

Opera GX Mobile ನಲ್ಲಿ ನಾಲ್ಕು ಬಣ್ಣದ ಥೀಮ್’ಗಳು ಲಭ್ಯವಿದೆ. GX Classic, Purple Haze, Ultra Violet ಮತ್ತು White Wolf ಎಂಬ ಥೀಮ್’ಗಳು ನಿಮ್ಮ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲಿವೆ. ಇದರೊಂದಿಗೆ ಇನ್-ಬಿಲ್ಟ್ ಆಗಿ ad blocker, Cookie dialogue blocker, cryptocurrency mining protection ಮತ್ತು pop-up blocker ಇರಲಿವೆ.

ಈ ಬ್ರೌಸರ್’ನ ಕಂಪ್ಯೂಟರ್ ಆವೃತ್ತಿಯಲ್ಲಿ RAM ಬಳಕೆಯ ಕುರಿತು ಮಾಹಿತಿ ಲಭ್ಯವಿದೆ. ಆದರೆ, ಸದ್ಯಕ್ಕೆ ಈ ಫೀಚರ್ ಮೊಬೈಲ್ ಬ್ರೌಸರ್ ನಲ್ಲಿ ಲಭ್ಯವಿಲ್ಲ. ಮುಂಬರುವ ದಿನಗಳಲ್ಲಿ ಈ ಫೀಚರ್ ಕೂಡಾ ಸೇರಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.