ಭಾರತೀಯ ಮನವೊಲಿಕೆ ಮುಂದಾದ ಶಿಯೋಮಿ: ‘ಬ್ಯಾನ್ ಆಪ್‌ಗಳನ್ನು ತಾನು ಬಳಸುವುದಿಲ್ಲ’

ಭಾರತದಲ್ಲಿ ಚೀನಿ ಆಪ್‌ಗಳು ನಿಷೇಧಕ್ಕೆ ಗುರಿಯಾಗುತ್ತಿದ್ದಂತೆ, ಭಾರತೀಯರು ಸಹ ಚೀನಾ ವಸ್ತುಗಳನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ನಮ್ಮ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಚೀನಾ ಕಂಪನಿಗಳು ಭಾರತೀಯರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿವೆ. ಇದರಲ್ಲಿ ಮೊದಲ ಸ್ಥಾನ ಶಿಯೋಮಿಯದ್ದಾಗಿದೆ.

ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಸೂಚನೆ ಸಿಕ್ಕ ತಕ್ಷಣ ತನ್ನ ಅಂಗಡಿಗಳನ್ನು ಮೇಕ್‌ ಇನ್ ಇಂಡಿಯಾ ಎಂದು ತನ್ನ ಲೋಗೊವನ್ನು ಬದಲು ಮಾಡಿಕೊಂಡಿದ್ದ ಶಿಯೋಮಿ, ಸದ್ಯ ತನ್ನ ಫೋನ್‌ಗಳಲ್ಲಿ ನಿಷೇಧಿತ ಚೀನೀ ಅಪ್ಲಿಕೇಶನ್‌ಗಳ ಪರಿಸ್ಥಿತಿಯನ್ನು ಸ್ಪಷ್ಟಪಡಿಸುವ ಮೂಲಕ ಟ್ವಿಟರ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ.

ಇದನ್ನು ಓದಿ: ಎಲ್ಲಾ ಅಂದುಕೊಂಡಂತೆ ಆದರೆ ಭಾರತದಲ್ಲಿ ಮತ್ತೆ ಟಿಕ್‌ಟಾಕ್ ಆರಂಭ..!

ಭಾರತ ಸರ್ಕಾರವು ನಿರ್ಬಂಧಿಸಿರುವ ಯಾವುದೇ ಅಪ್ಲಿಕೇಶನ್‌ಗಳು ಶಿಯೋಮಿ ಫೋನ್‌ನಲ್ಲಿ ಲಭ್ಯವಿಲ್ಲ ಮತ್ತು 100 ಪ್ರತಿಶತ ಭಾರತೀಯ ಬಳಕೆದಾರರ ಡೇಟಾ ದೇಶದಲ್ಲಿ ಉಳಿಯುತ್ತದೆ ಎಂದು ಅದು ಹೇಳಿದೆ.

ತನ್ನದೇ ಆದ MIUI ಈಗ ನಿಷೇಧಿತ ಕ್ಲೀನ್ ಮಾಸ್ಟರ್ ಅಪ್ಲಿಕೇಶನ್ ಅನ್ನು ಬಳಸುವುದಿಲ್ಲ ಎಂದು ತಿಳಿಸಿದ್ದು. ಭಾರತದ ಅಂತರ್ಜಾಲ ಸೇವೆಗಳ ಮಾರುಕಟ್ಟೆಯಲ್ಲಿ ಚೀನಾದ ಪ್ರಾಬಲ್ಯವನ್ನು ಎದುರಿಸಲು ದೇಶದ ಕ್ರಮದಿಂದಾಗಿ ಮಿ ಬ್ರೌಸರ್ ಮತ್ತು ಮಿ ಕಮ್ಯುನಿಟಿ ಆ್ಯಪ್ ಸೇರಿದಂತೆ ಅನೇಕ ಚೀನೀ ಆ್ಯಪ್‌ಗಳನ್ನು ಭಾರತದಲ್ಲಿ ನಿಷೇಧಿಸಿದ ನಂತರ ಈ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.

ಶಿಯೋಮಿಯ ಮಿ ಇಂಡಿಯಾ ಟ್ವಿಟ್ಟರ್ ಖಾತೆಯ ಟ್ವೀಟ್ ಪ್ರಕಾರ, ಕೆಲವು ನಿಷೇಧಿತ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದಂತೆ ಎದ್ದಿರುವ ಡೇಟಾ ಗೌಪ್ಯತೆ ಮತ್ತು ಭದ್ರತಾ ಕಾಳಜಿಗಳೊಂದಿಗೆ ಚೀನಾದ ಕಂಪನಿ ತನ್ನ ಸಮುದಾಯಕ್ಕೆ ಪರಿಸ್ಥಿತಿಯನ್ನು ಸ್ಪಷ್ಟಪಡಿಸಲು ಬಯಸಿದೆ. ಭಾರತದಲ್ಲಿ ಯಾವುದೇ ನಿಷೇಧಿತ ಅಪ್ಲಿಕೇಶನ್‌ಗಳನ್ನು ಶಿಯೋಮಿ ಫೋನ್‌ಗಳು ಪ್ರವೇಶಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಕಂಪನಿಯು MIUI ಹೊಸ ಆವೃತ್ತಿಯನ್ನು ಅಭಿವೃದ್ಧಿ ಪಡಿಸುತ್ತಿದ್ದು, ಅದು ಈ ನಿಷೇಧಿತ ಯಾವುದೇ ಅಪ್ಲಿಕೇಶನ್‌ಗಳನ್ನು ಪ್ರೀ ಇನ್‌ಸ್ಟಾಲ್ ಮಾಡಿಲ್ಲ. ಈ ಹೊಸ ಆವೃತ್ತಿಯನ್ನು ಮುಂದಿನ ಕೆಲವು ವಾರಗಳಲ್ಲಿ ಹಂತಹಂತವಾಗಿ ಹೊರತರಲಾಗುವುದು ಎಂದು ತಿಳಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.