ರೆಡ್‌ಮಿ ನೋಟ್‌ 8 ಬಿಡುಗಡೆ| ಕೈಗೆಟುಕುವ ದರ 64 ಮೆಗಾ ಪಿಕ್ಸೆಲ್‌ ಕ್ಯಾಮೆರಾ

ಶಿಯೋಮಿ ರೆಡ್‌ ಮಿ ನೋಟ್‌ 8, ತನ್ನ ಹಿಂದಿನ ನೋಟ್‌ 7 ಗಿಂತ ಹೆಚ್ಚು ಸುಧಾರಿತವಾಗಿದ್ದು, ಬೀಜಿಂಗ್‌ನಲ್ಲಿ ಬಿಡುಗಡೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೂ ಬರಲಿದೆ

ಶಿಯೋಮಿ ನೋಟ್‌ ಸರಣಿಯಲ್ಲಿ ಮತ್ತೊಂದು ಆಕರ್ಷಕ ಫೋನ್‌ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಗುರುವಾರ ಬೀಜಿಂಗ್‌ನಲ್ಲಿ ಬಿಡುಗಡೆಯಾದ ನೋಟ್‌ 8 ಮತ್ತು ನೋಟ್‌ 8 ಪ್ರೊ ಅತ್ಯಾಕರ್ಷಕ ಫೀಚರ್‌ಗಳನ್ನು ಒಳಗೊಂಡಿದ್ದು, ಚೀನಾದಲ್ಲಿ ಸೆಪ್ಟೆಂಬರ್‌ 3ರಿಂದ ಲಭ್ಯವಾಗಲಿದೆ. ಭಾರತದ ಮಾರುಕಟ್ಟೆಗೆ 8 ವಾರಗಳಲ್ಲಿ ಬರಲಿದೆ ಎಂದು ಶಿಯೋಮಿ ಭಾರತೀಯ ಮುಖ್ಯಸ್ಥರ ಹೇಳಿದ್ದಾರೆ.

ನೋಟ್‌ 8

6.3 ಇಂಚಿನ ಎಚ್‌ಡಿ ಸ್ಕ್ರೀನ್‌, 665 ಸ್ನ್ಯಾಪ್‌ ಡ್ರ್ಯಾಗನ್‌ ಪ್ರೊಸೆಸರ್‌, ಫಿಂಗರ್‌ ಪ್ರಿಂಟ್‌ ಸೆನ್ಸಾರ್‌ ಇರುವ ಈ ಫೋನ್‌, ನಾಲ್ಕು ಕ್ಯಾಮೆರಾ ಸೆಟಪ್‌ ಹೊಂದಿದ್ದು 48 ಮೆಗಾ ಪಿಕ್ಸೆಲ್‌ ಫೋಟೋಗಳನ್ನು ಸೆರೆಹಿಡಿಯಬಲ್ಲವು. 13 ಮೆಗಾ ಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಇದೆ. ಬ್ಯಾಟರಿ ಸಾಮರ್ಥ್ಯ 4000 ಎಂಎಎಚ್‌. ಈ ಮಾಡೆಲ್‌ 4 ಮತ್ತು 6 ಜಿಬಿ ರ್ಯಾಮ್‌ ಹಾಗೂ 64 ಮತ್ತು 128 ಸ್ಟೋರೇಜ್‌ಗಳಲ್ಲಿ ಲಭ್ಯವಿದೆ. ಬೆಲೆ ಸುಮಾರು 10000 ಮತ್ತು 12,000 ರೂ.ಗಳಿಗೆ ಲಭ್ಯವಾಗಬಹುದು ಎನ್ನಲಾಗಿದೆ.

ನೋಟ್‌ 8 ಪ್ರೊ

6.53 ಇಂಚಿನ ಎಚ್‌ಡಿ ಸ್ಕ್ರೀನ್‌, ಮೀಡಿಯಾ ಟೆಕ್‌ ಹೆಲಿಯೋ ಜಿ90ಟಿ ಪ್ರೊಸೆಸರ್‌ ಇರುವ ಈ ಫೋನ್‌, 64 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಇದೆ. ಜೊತೆಗೆ 20 ಮೆಗಾ ಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಇದೆ. ಬ್ಯಾಟರಿ ಸಾಮರ್ಥ್ಯ 4500 ಎಂಎಎಚ್‌. ಈ ಮಾಡೆಲ್‌ 6 ಮತ್ತು 8 ಜಿಬಿ ರ್ಯಾಮ್‌ ಹಾಗೂ 64 ಮತ್ತು 128 ಸ್ಟೋರೇಜ್‌ಗಳಲ್ಲಿ ಲಭ್ಯವಿದೆ. ಬೆಲೆ ಸುಮಾರು 14000 ಮತ್ತು 18,000 ರೂ.ಗಳಿಗೆ ಲಭ್ಯವಾಗಬಹುದು ಎನ್ನಲಾಗಿದೆ.