ಶಯೋಮಿ ಇತ್ತೀಚೆಗೆ ರೆಡ್‌ಮಿ 10 ಸ್ಮಾರ್ಟ್ ಫೋನನ್ನು ಜಾಗತಿಕವಾಗಿ ಬಿಡುಗಡೆ ಮಾಡಿತು. ಆದರೆ ಭಾರತದಲ್ಲಿ ಬಿಡುಗಡೆಯಾಗುವ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ. ಸೆಪ್ಟೆಂಬರ್ 3ರಂದು ಈ ವಿಶಿಷ್ಟ ಫೋನನ್ನು ಬಿಡುಗಡೆ ಮಾಡುವುದಕ್ಕೆ ಶಯೋಮಿ ಸಜ್ಜಾಗಿರುವ ಮಾಹಿತಿ ಬಂದಿದೆ.
ಶಯೋಮಿ, ರೆಡ್‌ಮಿ 10 ಪ್ರೈಮ್ ಅನ್ನು ‘ಆಲ್ ರೌಂಡರ್ ಸೂಪರ್’ ಎಂದು ಕರೆದಿದ್ದು, ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸೆಪ್ಟೆಂಬರ್ 3ರ ಮಧ್ಯಾಹ್ನ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವುದನ್ನು ಖಚಿತಪಡಿಸಿದೆ.
ರೆಡ್‌ಮಿ 10 ಪ್ರೈಮ್‌ನಲ್ಲಿ ಏನಿದೆ?
ಮಿಡಿಯಾಟೆಕ್ ಚಿಪ್‌ಸೆಟ್ ಇರುವ ಈ ಫೋನ್, ರೆಡ್‌ಮಿ 10 ಸುಧಾರಿತ ಆವೃತ್ತಿಯಾಗಿದೆ. 6.5 ಇಂಚಿನ ಸ್ಕ್ರೀನ್, 5000 ಎಂಎಎಚ್ ಸಾಮರ್ಥ್ಯದ ಬ್ಯಾಟರಿ, 18 ವಾಟ್ ವೇಗದ ಚಾರ್ಜಿಂಗ್, ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಮ್ ಇದೆ.
50 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೇರಿ ನಾಲ್ಕು ಕ್ಯಾಮೆರಾಗಳಿವೆ. ಉಳಿದ 2 ಕ್ಯಾಮೆರಾಗಳು, 8 ಎಂಪಿ, 2ಎಂಪಿ ಮತ್ತು 2 ಎಂಪಿ, ಜೊತೆಗೆ 8 ಎಂಪಿಯ ಸೆಲ್ಫಿ ಕ್ಯಾಮೆರಾ ಕೂಡ ಇದೆ.