ಸೆ. 17ಕ್ಕೆ ಹೊರಬರಲಿವೆ ಶಿಯೋಮಿಯಿಂದ ಸ್ಮಾರ್ಟ್‌ ಲಿವಿಂಗ್‌ ಉತ್ಪನ್ನಗಳು

ಶಿಯೋಮಿ ಸ್ಮಾರ್ಟ್‌ ಗ್ಯಾಜೆಟ್‌ಗಳ ಮೂಲಕ ಭಾರತೀಯ ಮಾರುಕಟ್ಟೆ ವ್ಯಾಪಿಸಿಕೊಂಡ ಬಗೆ ಇನ್ನು ಅಚ್ಚರಿಯಾಗಿಯೇ ಇದೆ. ಆದರೆ ಶಿಯೋಮಿ ಸಂಸ್ಥೆಯಂತೆ ಎಂದಿನಂತೆ ಹೊಸ ಉತ್ಪನ್ನಗಳೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ

ಹೊಸ ಮೊಬೈಲ್‌ಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಆವರಿಸಿಕೊಂಡಿರುವ ಶಿಯೋಮಿ ಮತ್ತಷ್ಟು ಹೊಸ ಸ್ಮಾರ್ಟ್‌ ಉತ್ಪನ್ನಗಳನ್ನು ಪರಿಚಯಿಸಲು ಸಿದ್ಧವಾಗಿದೆ. ಸ್ಮಾರ್ಟರ್‌ ಲಿವಿಂಗ್‌ ಎಂಬ ಥೀಮ್‌ನಡಿ ಸಿದ್ಧವಾಗಿರುವ ಉತ್ಪನ್ನಗಳು ಸೆ. 17ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿವೆ.

65 ಇಂಚಿನ ಟಿವಿ

ಇದು ಸ್ಮಾರ್ಟ್‌ ಟಿವಿಯಾಗಿದ್ದು ನೆಟ್‌ಫ್ಲಿಕ್ಸ್‌ ಒಳಗೊಂಡು, ಮತ್ತಷ್ಟು ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಯಾಗುತ್ತಿದೆ. ಭಾರತದಲ್ಲಿ ಇದರ ಬೆಲೆ 55 ರಿಂದ 60,000 ಆಗಬಹುದು ಎಂದು ಅಂದಾಜಿಸಲಾಗಿದೆ.

ಎಂ ಐ ಬ್ಯಾಂಡ್ 4

ಮೂರು ಶ್ರೇಣಿಗಳಲ್ಲಿ ಈ ಬ್ಯಾಂಡ್‌ ಹೊರಬರುತ್ತಿದೆ; ಎನ್‌ಎಫ್‌ಸಿಯೊಂದಿಗೆ, ಎನ್‌ಎಫ್‌ಸಿ ಹೊರತಾಗಿ ಮತ್ತು ವಿಶೇಷ ಅವೆಂಜರ್‌ ಆವೃತ್ತಿಗಳು ಬಿಡುಗಡೆಯಾಗುತ್ತಿವೆ. ಭಾರತೀಯ ಮಾರುಕಟ್ಟೆಯಲ್ಲಿ ಇವುಗಳ ಆರಂಭಿಕ ಬೆಲೆ 1700 ರೂ. ಎನ್ನಲಾಗಿದೆ.

ವಾಟರ್‌ ಪ್ಯೂರಿಫೈಯರ್‌

ರಿವರ್ಸ್‌ ಆಸ್ಮೋಸಿಸ್‌ ಇರುವ ನಾಲ್ಕು ಹಂತದ ಶುದ್ಧೀಕರಣವನ್ನು ಮಾಡುವ ವಾಟರ್‌ ಪ್ಯೂರಿಫೈಯರ್‌ ಬಿಡುಗಡೆಗೆ ಸಿದ್ಧವಾಗಿದೆ. ಪಿಪಿ ಕಾಟನ್‌ ಫಿಲ್ಟರ್‌, ಕಾರ್ಬನ್‌ ಪ್ರೀ ಫಿಲ್ಟರ್‌, ಆರ್‌ಒ ಫಿಲ್ಟರ್‌ ಮತ್ತು ಆಕ್ಟಿವೇಟೆಡ್‌ ಕಾರ್ಬನ್‌ ಫಿಲ್ಟರ್‌ಗಳಿದ್ದು ಸ್ಮಾರ್ಟ್‌ ಆಗಿ ಕೆಲಸ ಮಾಡುತ್ತದೆ. ವೈಫೈ ಇರುವ ಈ ಪ್ಯೂರಿಫೈಯರ್‌ ಅನ್ನು ಮೊಬೈಲ್‌ ಅಪ್ಲಿಕೇಷನ್‌ ಮೂಲಕ ನಿಯಂತ್ರಿಸಬಹುದು.

ಮತ್ತಷ್ಟು ಹೊಸ ಪ್ರಾಡಕ್ಟ್‌ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದ್ದು, ಕುತೂಹಲಕ್ಕೆ ಕಾರಣವಾಗಿದೆ.

%d bloggers like this: