ಶಿಯೋಮಿ ಎಂಐ11 ಲೈಟ್‌ 5ಜಿ | ಭಾರತದಲ್ಲಿ ಸೆ. 29ಕ್ಕೆ ಬಿಡುಗಡೆ, ಲೀಕಾಯ್ತು ಫೋನಿನ ದರ ವಿವರ!

ಎಂಐ11 ಲೈಟ್‌ 5ಜಿ ಎನ್‌ಇ ಜಾಗತಿಕವಾಗಿ ಬಿಡುಗಡೆಯಾಗಿರುವುದರಿಂದ ಫೋನಿನ ವೈಶಿಷ್ಟ್ಯಗಳು ಈಗಾಗಲೇ ಸ್ಮಾರ್ಟ್‌ಫೋನ್‌ ಪ್ರೇಮಿಗಳಿಗೆ ತಿಳಿದಿದೆ. ಆದರೆ ಭಾರತದಲ್ಲಿ ಅದರ ದರ ಏನು ಎಂಬುದನ್ನು ಊಹಿಸುತ್ತಿದ್ದರು. ಈ ಬಗ್ಗೆ ಟಿಪ್‌ಸ್ಟರ್‌ ಖ್ಯಾತಿಯ ದೇಬಯಾನ್‌ ರಾಯ್‌ ಸುಳಿವು ನೀಡಿದ್ದಾರೆ.
Mi 11 Lite 5G NE
Image: techradar.com

 

ಶಿಯೋಮಿ ಇತ್ತೀಚೆಗೆ ಎಂಐ11ಟಿ ಸರಣಿಯನ್ನು ಜಾಗತಿಕವಾಗಿ ಬಿಡುಗಡೆ ಮಾಡಿತು. ಹಿಂದೆಯೇ ಸೆಪ್ಟೆಂಬರ್‌ 29ರಂದು ಭಾರತದಲ್ಲಿ ಎಂಐ11 ಲೈಟ್‌ 5ಜಿ ಎನ್‌ಇ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿತು.

ಎಂಐ11 ಲೈಟ್‌ 5ಜಿ ಎನ್‌ಇ ಜಾಗತಿಕವಾಗಿ ಬಿಡುಗಡೆಯಾಗಿರುವುದರಿಂದ ಫೋನಿನ ವೈಶಿಷ್ಟ್ಯಗಳು ಈಗಾಗಲೇ ಸ್ಮಾರ್ಟ್‌ಫೋನ್‌ ಪ್ರೇಮಿಗಳಿಗೆ ತಿಳಿದಿದೆ. ಆದರೆ ಭಾರತದಲ್ಲಿ ಅದರ ದರ ಏನು ಎಂಬುದನ್ನು ಊಹಿಸುತ್ತಿದ್ದರು. ಈ ಬಗ್ಗೆ ಟಿಪ್‌ಸ್ಟರ್‌ ಖ್ಯಾತಿಯ ದೇಬಯಾನ್‌ ರಾಯ್‌ ಸುಳಿವು ನೀಡಿದ್ದಾರೆ.

ಶಿಯೋಮಿ ಮೂರು ಆವೃತ್ತಿಗಳಲ್ಲಿ ಎಂಐ11 ಲೈಟ್‌ 5ಜಿ ಎನ್‌ಇ ಸ್ಮಾರ್ಟ್‌ಫೋನಿನ 6ಜಿಬಿ/128 ಜಿಬಿ , 8ಜಿಬಿ/128 ಜಿಬಿ ಮತ್ತು 8 ಜಿಬಿ/256ಜಿಬಿ ಮಾಡೆಲ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ರಾಯ್‌ ಪ್ರಕಾರ ಫೋನಿನ ದರಗಳು 21,999 ರೂಗಳಿಂದ ಆರಂಭವಾಗಲಿದೆಯಂತೆ!

ಎಂಐ11 ಲೈಟ್‌ 5ಜಿ ಎನ್‌ಇ ಫೋನಿನಲ್ಲಿದೆ ಏನಿದೆ?

ಸ್ನ್ಯಾಪ್‌ಡ್ರ್ಯಾಗನ್‌ 778 ಜಿ ಚಿಪ್‌ ಸೆಟ್‌ ಇದೆ. 5ಜಿ ಫೋನಿನ ಸಾಮರ್ಥ್ಯವನ್ನು ಹೆಚ್ಚಿಸುವ ಚಿಪ್‌ಸೆಟ್‌ ಇದು. 1 ಟಿಬಿ ವರೆಗೂ ಸ್ಟೋರೇಜ್‌ ಸಾಮರ್ಥ್ಯ ಹೆಚ್ಚಿಸಬಹುದು. 4250 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ ಇದೆ.

ಮೂರು ಕ್ಯಾಮೆರಗಾಗಳಿದ್ದು, 64 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾ, 8 ಎಂಪಿಯ ಅಲ್ಟ್ರಾವೈಡ್‌ ಮತ್ತು 5 ಎಂಪಿಯ ಟೆಲಿಮೈಕ್ರೊ ಕ್ಯಾಮೆರಾ ಇದೆ. 20 ಎಂಪಿಯ ಸೆಲ್ಫಿ ಕ್ಯಾಮೆರಾ ಇದೆ.

6.55 ಇಂಚು ಪರದೆಯ ಈ ಫೋನ್‌ನಲ್ಲಿ ಆಂಡ್ರಾಯ್ಡ್‌ 11 ಇದ್ದು ಟ್ರಫಲ್‌ ಬ್ಯಾಕ್‌, ಸ್ನೋಫ್ಲೇಕ್‌, ಬಿಳಿ, ಬಬಲ್‌ಗಮ್‌ ಬ್ಲೂ ಮತ್ತು ಪೀಚ್‌ ಪಿಂಕ್‌ ಬಣ್ಣಗಳಲ್ಲಿ ಲಭ್ಯವಾಗುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.