ಸ್ಯಾಮ್‌ಸಂಗ್‌ ಹಿಂದಿಕ್ಕಿದ ಶಿಯೋಮಿ; ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಈಗ ನಂ 1

ಕೈಗೆಟುವ ದರ, ಗ್ರಾಹಕರನ್ನು ಸೆಳೆಯುವ ಫೀಚರ್‌ಗಳು ಶಿಯೋಮಿ ಸ್ಮಾರ್ಟ್‌ ಫೋನ್‌ಗಳು ಹಾಟ್‌ಕೇಕ್‌ನಂತೆ ಮಾರಾಟವಾಗುವುದಕ್ಕೆ ಕಾರಣವಾದವು. ಈಗ ಅದೇ ಜನಪ್ರಿಯತೆ ಶಿಯೋಮಿ ಕಂಪನಿಯನ್ನು ಮಾರುಕಟ್ಟೆಯ ನಾಯಕನನ್ನಾಗಿ ಮಾಡಿವೆ

ಸ್ಯಾಮ್‌ಸಂಗ್‌ – ಐಫೋನ್‌ಗೆ ಪ್ರತಿ ಸ್ಪರ್ಧಿ ಹೌದು. ಫೋಲ್ಡಬಲ್‌ ಫೋನ್‌ ಸೇರಿದಂತೆ ಹಲವು ನವೀನ ಆವಿಷ್ಕಾರಗಳನ್ನು ಮಾಡುತ್ತಿರಬಹುದು. ಆದರೆ ಭಾರತದಲ್ಲಿ ನಂಬರ್‌ 1 ಆಗಿರುವುದು ಯಾರು?

ಶಿಯೋಮಿ

ಚೀನಾ ಮೂಲದ ಶಿಯೋಮಿ ಕಂಪನಿ, ಸ್ಮಾರ್ಟ್‌ಫೋನ್‌ಗಳ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಿದ್ದು, ಭಾರತದಲ್ಲಿ ನಂಬರ್‌ 1 ಬ್ರ್ಯಾಂಡ್‌ ಎನಿಸಿಕೊಂಡಿದೆ.

2019ರ ಕಡೆಯ ಮೂರು ತಿಂಗಳ ವರದಿ ಹೊರಬಂದಿದ್ದು, ಅದರಂತೆ ಭಾರತದಲ್ಲಿ 43 ಕೋಟಿ ಫೋನ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷಕ್ಕಿಂತ 9.2%ರಷ್ಟು ಹೆಚ್ಚಳ ಕಂಡಿದ್ದು, ಸ್ಯಾಮ್‌ಸಂಗ್‌ 2%ರಷ್ಟು ಮಾರುಕಟ್ಟೆಯ ಹಿಡಿತವನ್ನು ಕಳೆದುಕೊಂಡಿದೆ ಎಂದಿದೆ.

ದುಬಾರಿ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲೂ ಸ್ಯಾಮ್‌ಸಂಗ್‌ಗೆ ಹಿನ್ನಡೆಯಾಗಿದೆ. ಮತ್ತೆ ಐಫೋನ್‌ ಬೇಡಿಕೆ ಕಂಡಿದ್ದು, ಒಟ್ಟು 47.4%ರಷ್ಟು ಮಾರುಕಟ್ಟೆಯನ್ನು ತನ್ನ ತೆಕ್ಕೆಯಲ್ಲೇ ಉಳಿಸಿಕೊಂಡಿದೆ.

ವಿವೊ, ಒಪ್ಪೊ ಮತ್ತು ರಿಯಲ್‌ಮಿ ಬ್ರ್ಯಾಂಡ್‌ಗಳು ತೀವ್ರ ಸ್ಪರ್ಧೆ ಒಡ್ಡುತ್ತಿದ್ದು, ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಕಂಡುಕೊಳ್ಳುವಲ್ಲಿ ಯಶಸ್ವಯಾಗಿವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.