ವರ್ಷದ ಮೊದಲ ಟೆಕ್‌ ಶೋ: ಜ. 5ರಿಂದ 7ವರೆಗೆ ಕನ್‌ಸ್ಯೂಮರ್‌ ಎಲೆಕ್ಟ್ರಾನಿಕ್ಸ್‌ ಶೋ, 2200 ಕಂಪನಿಗಳು ಭಾಗಿ

ಅಮೆರಿಕದ ಕನ್‌ಸ್ಯೂಮರ್‌ ಟೆಕ್ನಾಲಜೀಸ್‌ ಅಸೋಸಿಯೇಷನ್‌ ಹಮ್ಮಿಕೊಂಡು ಬರುತ್ತಿರುವ ಗ್ರಾಹಕರ ಪ್ರದರ್ಶನ – ಸಿಇಎಸ್‌-ಯು ಜ. 5ರಿಂದ 7ರವರೆಗೆ ಲಾಸ್‌ವೆಗಾಸ್‌ನಲ್ಲಿ ಆಯೋಜಿಸಲಾಗಿದೆ. ಇಂದು ಭೌತಿಕವಾಗಿ ಮತ್ತು ವರ್ಚ್ಯುವಲ್‌ ರೂಪದಲ್ಲಿ ಈ ಪ್ರದರ್ಶನ ಜರುಗಲಿದೆ.

ಹೊಸದಾಗಿ ಅಭಿವೃದ್ಧಿ ಪಡಿಸಿದ ಗ್ಯಾಜೆಟ್‌ಗಳು, ಆಟೋಮೊಬೈಲ್‌ ಕ್ಷೇತ್ರದ ಅನ್ವೇಷಣೆಗಳು ಸೇರಿದಂತೆ ತಂತ್ರಜ್ಞಾನದ ಹೊಸ ಪ್ರಯೋಗಗಳನ್ನು ನೋಡಬಹುದಾದ ಸಂದರ್ಭವಿದು.

1967ರಿಂದ ನಡೆಯುತ್ತಾ ಬಂದಿರುವ ಈ ಪ್ರದರ್ಶನ ತಂತ್ರಜ್ಞಾನದ ಬೆಳವಣಿಗೆಯಿಂದ ಹೆಚ್ಚುಹೆಚ್ಚು ಮಹತ್ವ ಪಡೆದುಕೊಂಡಿದ್ದು, ವಿಶ್ವದ ಎಲ್ಲರ ಗಮನ ಈ ಪ್ರದರ್ಶನದ ಮೇಲಿದೆ.

ಜ. 8ರವರೆಗೆ ನಡೆಯಬೇಕಿದ್ದ ಸಿಇಎಸ್‌ಅನ್ನು ಕೋವಿಡ್‌ ಕಾರಣಕ್ಕಾಗಿ ಒಂದು ದಿನ ಮೊಟಕುಗೊಳಿಸಲಾಗಿದ್ದು ಜ. 7ಕ್ಕೆ ಅಂತ್ಯವಾಗುತ್ತಿದೆ.

ಟೆಕ್‌ ಶೋದ ಟ್ರೇಲರ್‌ ಇಲ್ಲಿದೆ:

ಈ ಬಾರಿ ಏನಿದೆ?

ತೊಡುವ ಗ್ಯಾಜೆಟ್‌ಗಳು ಹೆಚ್ಚು ಕಾಣಿಸಿಕೊಳ್ಳಲಿವೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧರಿಸಿ ಅಭಿವೃದ್ಧಿಸಿದ ವಿವಿಧ ಆದ್ಯತೆಯ ರೊಬೊಟ್‌ಗಳು ಪ್ರದರ್ಶನಗೊಳ್ಳಲಿವೆ. ಉದಾಹರಣೆಗೆ ಸೋಂಕುನಿವಾರಿಸುವ ರೋಬೊಟ್‌ಗಳು, ಹಿರಿಯರ ಅನುಕೂಲ ಮಾಡುವ ರೊಬೊಟ್‌ಗಳು!

ಕೋವಿಡ್‌ನಿಂದಾಗಿ ವರ್ಕ್‌ಫ್ರಮ್‌ ಹೋಮ್‌ ಪದ್ಧತಿ ರೂಢಿಗೆ ಬಂದ ಹಿನ್ನೆಲೆಯಲ್ಲಿ ದೂರದಿಂದ ಕೆಲಸ ಮಾಡುವುದಕ್ಕೆ ಪೂರಕವಾದ ವಿವಿಧ ತಂತ್ರಜ್ಞಾನ ಸಾಧನಗಳು, ಸೇವೆಗಳು ಈ ಪ್ರದರ್ಶನದಲ್ಲಿ ಕಾಣಿಸಿಕೊಳ್ಳಲಿವೆ ಎನ್ನಲಾಗಿದೆ.

5ಜಿ ಮತ್ತು ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ ವಿಶೇಷ ಗಮನಸೆಳೆಯಲಿದ್ದು, ಸ್ಮಾರ್ಟ್‌ ಸಿಟಿ, ಸುಸ್ಥಿರ ಅಭಿವೃದ್ಧಿಯಲ್ಲಿ ಪಾತ್ರವಹಿಸಲಿರುವ 5ಜಿ ಆಧರಿತ ತಂತ್ರಜ್ಞಾನ ಪರಿಚಯಿಸಲಾಗುತ್ತಿದೆ.

ಆರೋಗ್ಯ, ಮನೋರಂಜನೆ, ಕ್ರಿಪ್ಟೋಕರೆನ್ಸಿ, ಕ್ರೀಡೆ, ಸ್ಟಾರ್ಟಪ್‌ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನೂರಾರು ತಂತ್ರಜ್ಞಾನ ಸಾಧನಗಳು ಪ್ರದರ್ಶನಗೊಳ್ಳಲಿವೆ.

ಭಾರತದ ಎಡ್‌ಎಕ್ಸ್‌ ಸಿಇಒ ಅನಂತ ಅಗರ್‌ವಾಲ್‌, ಸೆಲ್ಸಿಯಸ್‌ ನೆಟ್‌ವರ್ಕ್‌ನ ತುಷಾರ್‌ನಾಡಕರ್ಣಿ, ಜೆನಿತ್‌ನ ನಂದು ನಂದನಕುಮಾರ್‌, ಡ್ರಾಪ್‌ ಇಂಕ್‌ನ ಸುಶೀಲ್‌ ಪ್ರಭು, ಸಿಟ್ರಿಕ್ಸ್‌ನ ಸಿಐಒ ಮೀರಾ ರಾಜವೆಲ್‌, ಫ್ಯೂಚರ್‌ ಏಕರ್ಸ್‌ನ ಸುಮಾ ರೆಡ್ಡಿ ಸೇರಿದಂತೆ ನೂರಕ್ಕೂ ಹೆಚ್ಚು ಉದ್ಯಮಿಗಳು, ತಂತ್ರಜ್ಞರು, ಇಲ್ಲಿ ಮೂರು ದಿನಗಳ ಕಾಲ ನಡೆಯುವ ಸಮಾವೇಶದಲ್ಲಿ ಉಪನ್ಯಾಸ ನೀಡಲಿದ್ದಾರೆ.

ಹಿಂದೆ ಸರಿದ ಸಂಸ್ಥೆಗಳು

ಕೋವಿಡ್‌ ಸೋಂಕು ಹಾಗೂ ಒಮಿಕ್ರಾನ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಇಎಸ್‌ ಪ್ರದರ್ಶನದಲ್ಲಿ ಭೌತಿಕವಾಗಿ ಪಾಲ್ಗೊಳ್ಳಬೇಕಿದ್ದ ಬಿಎಂಡಬ್ಲ್ಯೂ, ಇಂಟೆಲ್‌, ಎಎಂಡಿ, ಜಿಎಂ, ಗೂಗಲ್‌, ಟಿಮೊಬೈಲ್‌, ಅಮೆಜಾನ್‌, ಮರ್ಸಿಡೆಸ್‌ ಬೆಂಜ್‌, ಮೈಕ್ರೋಸಾಫ್ಟ್‌ ಮತ್ತು ಒನ್‌ಪ್ಲಸ್‌ ಹಿಂದೆ ಸರಿದಿವೆ ಎಂದು ಸಿಇಎಸ್‌ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

%d bloggers like this: